ಕರ್ನಾಟಕ

karnataka

ಜಿಲ್ಲಾ ಪೊಲೀಸ್ ಅಧೀಕ್ಷಕರ ನೇಮಕ ಅನುಮಾನ: ಖಡಕ್​ ಅಧಿಕಾರಿಗಳಿಗೆ ಹೆದರಿದರಾ ಮಂಡ್ಯ ರಾಜಕಾರಣಿಗಳು!?

By

Published : Oct 23, 2021, 3:03 PM IST

ಜಿಲ್ಲಾಮಟ್ಟದ ಬಹುತೇಕ ಅಧಿಕಾರಿಗಳು ಮಹಿಳೆಯರು ಇದ್ದು, ಎಸ್ಪಿಯಾಗಿ ಮತ್ತೆ ಮಹಿಳಾ ಅಧಿಕಾರಿ ಬೇಡ ಎಂದು ಕರ್ನಾಟಕ ಮೂಲದ ಪುರುಷ ಐಪಿಎಸ್ ಅಧಿಕಾರಿ ತರಲು ರಾಜಕಾರಣಿಗಳು ಹುಡುಕಾಟ ನಡೆಸುತ್ತಿದ್ದಾರಾ? ಅಥವಾ ಜಿಲ್ಲೆಗೆ ಬೇರೆ ಯಾರದರೂ ಪೊಲೀಸ್ ಅಧಿಕ್ಷಕರ ನೇಮಕಕ್ಕೆ ಪ್ರಭಾವಿ ರಾಜಕಾರಣಿಯಿಂದ ಸರ್ಕಾರದ ಮಟ್ಟದಲ್ಲಿ ಒತ್ತಡ ಇದೆಯಾ? ಎಂಬ ಶಂಕೆ ವ್ಯಕ್ತವಾಗುತ್ತಿದೆ..

appointment-of-mandya-district-superintendent-of-police
ಮಂಡ್ಯ ಜಿಲ್ಲಾ ಪೊಲೀಸ್ ಅಧಿಕ್ಷಕರ ನೇಮಕ

ಮಂಡ್ಯ :ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆಗೊಂಡು ಮೂರು ದಿನಗಳಾದ್ರೂ ಮಂಡ್ಯ ಜಿಲ್ಲೆಗೆ ಎಸ್‌ಪಿ ನೇಮಕವಾಗದಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿವೆ. ಈ ಹಿಂದೆ ಖಡಕ್ ಐಪಿಎಸ್ ಅಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರನ್ನ ಮಂಡ್ಯ ಜಿಲ್ಲೆಗೆ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಮಂಡ್ಯ ರಾಜಕಾರಣಿಗಳು ಖಡಕ್ ಅಧಿಕಾರಿಗೆ ಬೆದರುತ್ತಿದ್ದಾರಾ ಎಂಬ ಅನುಮಾನ‌ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದೆ.

ಪುರುಷ ಐಪಿಎಸ್ ಅಧಿಕಾರಿಗಾಗಿ ಹುಡುಕಾಟ :ಜಿಲ್ಲಾಮಟ್ಟದ ಬಹುತೇಕ ಅಧಿಕಾರಿಗಳು ಮಹಿಳೆಯರು ಇದ್ದು, ಎಸ್ಪಿಯಾಗಿ ಮತ್ತೆ ಮಹಿಳಾ ಅಧಿಕಾರಿ ಬೇಡ ಎಂದು ಕರ್ನಾಟಕ ಮೂಲದ ಪುರುಷ ಐಪಿಎಸ್ ಅಧಿಕಾರಿ ತರಲು ರಾಜಕಾರಣಿಗಳು ಹುಡುಕಾಟ ನಡೆಸುತ್ತಿದ್ದಾರಾ? ಅಥವಾ ಜಿಲ್ಲೆಗೆ ಬೇರೆ ಯಾರದ್ರೂ ಪೊಲೀಸ್ ಅಧಿಕ್ಷಕರ ನೇಮಕಕ್ಕೆ ಪ್ರಭಾವಿ ರಾಜಕಾರಣಿಯಿಂದ ಸರ್ಕಾರದ ಮಟ್ಟದಲ್ಲಿ ಒತ್ತಡ ಇದಿಯಾ? ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಎಎಸ್ಪಿ ಧನಂಜಯ ಅವರಿಗೆ ಪೊಲೀಸ್ ಇಲಾಖೆ ಜವಾಬ್ದಾರಿ :ಮಂಡ್ಯ ಎಸ್‌ಪಿ ಆಗಿದ್ದ ಅಶ್ವಿನಿಯನ್ನ ಇದೇ ತಿಂಗಳ 20ರಂದು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿ ಆ ಜಾಗಕ್ಕೆ ಮೈಸೂರು ಪೊಲೀಸ್ ಅಕಾಡೆಮಿಯಲ್ಲಿದ್ದ ಐಪಿಎಸ್ ಅಧಿಕಾರಿ ಸುಮನ್ ಡಿ. ಪನ್ನೇಕರ್ ಅವರನ್ನ ನೇಮಿಸಿತ್ತು.

ಆದ್ರೆ, ಇದೀಗ ನಡೆದಿರುವ ಹೊಸ ಬೆಳವಣಿಗೆ ಹಿನ್ನೆಲೆ ಸುಮನ್ ಡಿ. ಪೆನ್ನೇಕರ್ ಅವರೂ ಕೂಡ ಅಧಿಕಾರ ವಹಿಸಿಕೊಳ್ಳಲು ಸರ್ಕಾರ ತಡೆ ಹಿಡಿದಿದೆ. ಹೀಗಾಗಿ, ಜಿಲ್ಲೆಯ ಪೊಲೀಸ್ ಇಲಾಖೆಯ ಎಲ್ಲಾ ಜವಾಬ್ದಾರಿಯನ್ನು ಎ‌ಎಸ್‌ಪಿ ಧನಂಜಯ ಅವರಿಗೆ ನೀಡಿ ಎಸ್ಪಿ ಅಶ್ವಿನಿ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ.

ABOUT THE AUTHOR

...view details