ಕರ್ನಾಟಕ

karnataka

ಮನ್​ಮುಲ್​ನಲ್ಲಿ ಮತ್ತೊಂದು ಹಗರಣ: ಆದರೆ ಈ ಬಾರಿ ನೀರಿಗೆ ಹಾಲಲ್ಲ, ರಾಸಾಯನಿಕ ಬೆರೆಸಿದ ದುಷ್ಕರ್ಮಿಗಳು!

By

Published : Jan 21, 2022, 12:06 PM IST

ಮನ್ ಮುಲ್ ನಲ್ಲಿ ಮತ್ತೊಂದು ಹಗರಣ ನಡೆದಿರುವು ಬೆಳಕಿಗೆ ಬಂದಿದೆ. ಈ ಬಾರಿ ನೀರಿಗೆ ಹಾಲಲ್ಲ ರಾಸಾಯನಿಕವನ್ನೇ ಬೆರೆಸಿ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ.

Another scam at Mann Mull in Mandya,  Mann Mull scam, Mann Mull scam news, Mandya crime news, ಮಂಡ್ಯದಲ್ಲಿ ಮನ್​ಮುಲ್​ನಲ್ಲಿ ಮತ್ತೋಂದು ಹಗರಣ, ಮನ್​ಮುಲ್​ ಹಗರಣ, ಮನ್​ಮುಲ್​ ಹರಣ ಸುದ್ದಿ, ಮಂಡ್ಯ ಅಪರಾಧ ಸುದ್ದಿ,
ಮನ್​ಮುಲ್​ನಲ್ಲಿ ಮತ್ತೋಂದು ಹಗರಣ

ಮಂಡ್ಯ :ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಲಬೆರಕೆ ಹಾಲು ಸರಬರಾಜು ಮಾಡಿದ ಪ್ರಕರಣದ ಹಿನ್ನೆಲೆ ಮನ್‌ ಮುಲ್‌ ಒಕ್ಕೂಟದ ಕೆಲ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಮನ್​ಮುಲ್​ನಲ್ಲಿ ಮತ್ತೋಂದು ಹಗರಣ

ಜಿಲ್ಲೆಯ ಬಿ.ಎಂ.ಸಿ. ಕೇಂದ್ರಗಳಲ್ಲಿ ಸಂಗ್ರಹ ಮಾಡುತ್ತಿದ್ದ ಹಾಲಿಗೆ ನೀರು ಮಿಶ್ರಣ ಮಾಡಿದ ನಂತರ ಮನ್ ಮುಲ್ ಒಕ್ಕೂಟಕ್ಕೆ ಸರಬರಾಜು ಮಾಡುತ್ತಿದ್ದ ಅಕ್ರಮ ಕೆಲ ದಿನಗಳ ಹಿಂದೆ ರಾಜ್ಯ ವ್ಯಾಪ್ತಿ ಸುದ್ದಿಯಾಗಿದ್ದ ಪ್ರಕರಣ ಸಂಬಂಧ ತಪ್ಪಿತಸ್ಥರನ್ನು ಮಟ್ಟಹಾಕಲು ರಾಜ್ಯ ಸರ್ಕಾರ ಸಿಒಡಿ ತನಿಖೆಗೆ ಆದೇಶ ಹೊರಡಿಸಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ.

ಓದಿ :ನೈಟ್ ಕರ್ಫ್ಯೂ ಬಿಟ್ಟು ಉಳಿದೆಲ್ಲ ನಿರ್ಬಂಧಗಳನ್ನು ತೆರವುಗೊಳಿಸುವ ಸಾಧ್ಯತೆ?

ಕೆಲ ದಿನಗಳ ಬಳಿಕ ಮತ್ತೆ ಮನ್​ಮುಲ್​ನಲ್ಲಿ ಹಾಲಿಗೆ ಕಲಬೆರಕೆ ಮುಂದುವರೆದಿದ್ದು, ಈ ಬಾರಿ ನೀರಲ್ಲ ರಾಸಾಯನಿಕವನ್ನೇ ಕಲಬೆರಿಕೆ ಮಾಡಲಾಗುತ್ತಿದೆ. ಹೀಗಾಗಿ ಈ ಹಾಲು ಶೇಖರಣೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮನ್​ಮುಲ್​ನಲ್ಲಿ ಮತ್ತೋಂದು ಹಗರಣ

ಈ ಸಂಬಂಧ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಆದೇಶ ಹೊರಡಿಸಲಾಗಿದ್ದು, ಮದ್ದೂರು ತಾಲೂಕಿನ, ಕೆ.ಹೊನ್ನಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಚೌಡೇಶ್ವರಿ ಹಾಲು ಶೇಖರಣಾ ಮಾರ್ಗದ ಮೂಲಕ ದಿನಾಂಕ 28-09-2021 ರಿಂದ 5-10-2021ರವರೆಗೆ ಸತತವಾಗಿ ಸಕ್ಕರೆ ಅಂಶ ಕಂಡುಬಂದಿರೋದಾಗಿ ತಿಳಿಸಿದ್ದಾರೆ.

ದಿನಾಂಕ 13-10-2021ರಂದು ಸರಬರಾಜಾದ ಹಾಲಿನಲ್ಲಿ ಉಪ್ಪಿನಾಂಶದ ರಾಸಾಯನಿಕ ಕಲಬೆರೆಕೆ ಕಂಡು ಬಂದಿರುತ್ತದೆ. ಈ ಬಗ್ಗೆ ಒಕ್ಕೂಟದಿಂದ ಹಲವು ನೋಟಿಸ್ ನೀಡಿದ್ದರೂ ಸರಿಯಾಗಿ ಕ್ರಮವನ್ನು ಕೈಗೊಂಡಿಲ್ಲ.

ದಿನಾಂಕ 13-01-2022ರಂದು ಮತ್ತೆ ಮುಖ್ಯ ಡೇರಿಗೆ ಸರಬರಾಜಾದ 33 ಹಾಲಿನ ಕ್ಯಾನುಗಳಲ್ಲಿ Organoleptic ಪರೀಕ್ಷೆಗೆ ಒಳಪಡಿಸಿದಾಗ 27 ಹಾಲಿನ ಕ್ಯಾನುಗಳಲ್ಲಿ Neutralizer ಕಲಬೆರಿಕೆ ಕಂಡು ಬಂದಿರೋದು ವಿಷಾದನೀಯವಾಗಿರುತ್ತದೆ ಎಂದು ಹೇಳಿದೆ.

ಓದಿ:ವೀಕೆಂಡ್ ಕರ್ಫ್ಯೂ ಬೇಕೋ ಬೇಡವೋ ಎಂದು ಕೋವಿಡ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ: ಸಿಎಂ ಬೊಮ್ಮಾಯಿ

ಈ ಹಿನ್ನೆಲೆ ಹಾಲಿನ ಕಲಬೆರೆಕೆ ಶಿಕ್ಷಾರ್ಹ ಅಪರಾಧವಾಗಿದ್ದು, ಹಾಲಿನಲ್ಲಿ ರಾಸಾಯನಿಕ ಬೆರಸಿ ಕಲಬೆರೆಕೆ ಆದಲ್ಲಿ ನಂದಿನ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆಗೆ ಧಕ್ಕೆ ಉಂಟಾಗಿ, ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಈ ಕಾರಣದಿಂದಾಗಿ ದಿನಾಂಕ 17-01-2022ರಂದು ಸಂಘದ ಮಂಡಳಿಯ ತುರ್ತು ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ದಿನಾಂಕ 18-01-2022ರಿಂದ ಕೆ.ಹೊನ್ನಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಾಲು ಶೇಖರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details