ಕರ್ನಾಟಕ

karnataka

ಲಂಚ ಪಡೆಯುತ್ತಿದ್ದ ಭೂ ದಾಖಲೆ ವಿಭಾಗದ ಮುಖ್ಯಸ್ಥ ಎಸಿಬಿ ಬಲೆಗೆ

By

Published : Feb 5, 2021, 6:33 PM IST

ಭೂ ದಾಖಲೆ ವಿಭಾಗದ ಮುಖ್ಯಸ್ಥನೋರ್ವ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

acb-raid
ಭೂ ದಾಖಲೆ ವಿಭಾಗದ ಮುಖ್ಯಸ್ಥ ಎಸಿಬಿ ಬಲೆಗೆ

ಮಂಡ್ಯ:ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಕಚೇರಿಯ ಕಂದಾಯ ಇಲಾಖೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಭೂ ದಾಖಲೆ ವಿಭಾಗದ ಮುಖ್ಯಸ್ಥ ಮಂಜುನಾಥ್, ರೈತ ದಿನೇಶ್​ ಎಂಬುವರಿಂದ 3 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಡಿವೈಎಸ್​ಪಿ ಧರಣೇಂದ್ರ ನೇತೃತ್ವದ ತಂಡ ದಾಳಿ ನಡೆಸಿದ್ದು, ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ಭೂ ದಾಖಲೆ ವಿಭಾಗದ ಮುಖ್ಯಸ್ಥ ಎಸಿಬಿ ಬಲೆಗೆ

ಮಂಜುನಾಥ್ ಕಚೇರಿ ಪರಿಶೀಲನೆ ನಡೆಸುತ್ತಿದ್ದು, ಎಸಿಬಿ ಅಧಿಕಾರಿಗಳ ದಾಳಿಯಿಂದ ತಾಲೂಕು ಕಚೇರಿಯಲ್ಲಿದ್ದ ಸಿಬ್ಬಂದಿ ಕಂಗಾಲಾಗಿದ್ದಾರೆ.

ABOUT THE AUTHOR

...view details