ಕರ್ನಾಟಕ

karnataka

ತಲೆ ಮೇಲೆ ಕಲ್ಲು ಎತ್ತಿಹಾಕಿ ಪ್ಲಾಸ್ಟಿಕ್ ಆಯುತ್ತಿದ್ದ ವ್ಯಕ್ತಿ ಕೊಲೆ

By

Published : Apr 28, 2021, 2:30 PM IST

ಮಂಡ್ಯ ನಗರದ ಈದ್ಗಾ ಮೈದಾನದ ಮಳಿಗೆಯೊಂದರ ಬಳಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.

Mandya
ತಲೆ ಮೇಲೆ ಕಲ್ಲು ಎತ್ತಿಹಾಕಿ ಪ್ಲಾಸ್ಟಿಕ್ ಆಯುತ್ತಿದ್ದ ವ್ಯಕ್ತಿ ಕೊಲೆ

ಮಂಡ್ಯ: ರಸ್ತೆಬದಿ ಪ್ಲಾಸ್ಟಿಕ್ ಆಯುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಗರದ ಈದ್ಗಾ ಮೈದಾನದ ಬಳಿ ನಡೆದಿದೆ.

ಪ್ಲಾಸ್ಟಿಕ್ ಆಯುತ್ತಿದ್ದ ವ್ಯಕ್ತಿ ಕೊಲೆ

ಮಾದಪ್ಪ (50) ಮೃತ ದುರ್ದೈವಿ. ಈತ ಮಂಗಳವಾರ ರಾತ್ರಿ ಮಳಿಗೆಯೊಂದರ ಬಳಿ ಮಲಗಿದ್ದಾಗ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿದ್ದಾರೆ. ಸ್ಥಳಕ್ಕೆ ಎಎಸ್​ಪಿ ಧನಂಜಯ್, ಡಿವೈಎಸ್​​ಪಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನಿಸಿದ್ದಾರೆ.

ಈ ಕುರಿತು ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪ್ರೀತ್ಸೋದ್‌ ತಪ್ಪಾ ಅಂತ ಅವರಿಬ್ಬರೂ ಒಂದಾದ್ರೇ.. ಹುಡುಗಿ ತಂದೆ ಪ್ರಿಯಕರನ ಕೊಲೆ ಮಾಡ್ಬಿಟ್ಟ..

ABOUT THE AUTHOR

...view details