ಕರ್ನಾಟಕ

karnataka

ಮಂಡ್ಯದ ಮನ್‌ಮುಲ್‌ ಪ್ರಕರಣದಲ್ಲಿ 1 ಸಾವಿರ ಕೋಟಿ ರೂ. ಹಗರಣ: ಚೆಲುವರಾಯಸ್ವಾಮಿ ಸಿಡಿಸಿದ್ರು ಹೊಸ ಬಾಂಬ್​

By

Published : Oct 31, 2021, 4:41 PM IST

ಜೆಡಿಎಸ್ ಮನ್‌ಮುಲ್‌ ಹಗರಣದ ಸಂಪೂರ್ಣ ಹೊಣೆ ಹೊರಬೇಕು. ಸುಮಾರು ಒಂದು ಸಾವಿರ ಕೋಟಿ ಹಗರಣ ನಡೆದಿದೆ. ಈ ಹಗರಣಕ್ಕೆ ಪ್ರೋತ್ಸಾಹ ನೀಡುತ್ತಿರುವವರು ಜೆಡಿಎಸ್ ನಾಯಕರು ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Cheluvarayaswamy
ಮಾಜಿ ಸಚಿವ ಚೆಲುವರಾಯಸ್ವಾಮಿ

ಮಂಡ್ಯ:ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಮಿಶ್ರಣದ ಪ್ರಕರಣದಲ್ಲಿ ಒಂದು ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮನ್‌ಮುಲ್‌ ಹಗರಣದ ಬಗ್ಗೆ ಮಾಜಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿರುವುದು

ಮದ್ದೂರಿನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಮನ್‌ಮುಲ್‌ ಹಗರಣದ ಸಂಪೂರ್ಣ ಹೊಣೆ ಹೊರಬೇಕು. ಸುಮಾರು ಒಂದು ಸಾವಿರ ಕೋಟಿ ರೂ. ಹಗರಣ ನಡೆದಿದೆ. ಈ ಹಗರಣಕ್ಕೆ ಪ್ರೋತ್ಸಾಹ ನೀಡುತ್ತಿರುವವರು ಜೆಡಿಎಸ್ ನಾಯಕರು ಎಂದು ಗಂಭೀರವಾಗಿ ಆರೋಪಿಸಿದರು. ಅಲ್ಲದೇ ಇದಕ್ಕಿಂತ ದುರಂತ ಈ ಜಿಲ್ಲೆಗೆ ಇನ್ನೊಂದಿಲ್ಲ ಎಂದು ಜೆಡಿಎಸ್ ವಿರುದ್ಧ ಚೆಲುವರಾಯಸ್ವಾಮಿ ಕಿಡಿಕಾರಿದ್ದಾರೆ.

ಮೈಶುಗರ್ ಕೂಡ ಮುಚ್ಚಿಸಿದ್ರು. ಆದ್ರೆ ಸಿದ್ದರಾಮಯ್ಯ ಸದನದಲ್ಲಿ ಧ್ವನಿಯೆತ್ತಿ, ಮಂಡ್ಯದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು. ಇದರಿಂದ ಇಂದು ಸಿಎಂ ಬಸವರಾಜ ಬೊಮ್ಮಾಯಿ ಕಾರ್ಖಾನೆ ಪುನಾರಂಭ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಮನ್​ಮುಲ್​ ಹಾಲು ಕಲಬೆರಕೆ ಪ್ರಕರಣ : ವೈರಲ್ ಆಡಿಯೋದಲ್ಲೇನಿದೆ? ತನಿಖೆಗೆ ಹೆಚ್​ಡಿಕೆ ಅಡ್ಡಿಯಾಗಿದ್ದಾರಾ?

ABOUT THE AUTHOR

...view details