ಕರ್ನಾಟಕ

karnataka

ಕೊಪ್ಪಳ: ನೀರು ತುಂಬಿದ ಗುಂಡಿಗೆ ಕಾಲು ಜಾರಿಬಿದ್ದು ಬಾಲಕರಿಬ್ಬರು ಸಾವು

By

Published : Oct 24, 2022, 6:38 PM IST

ಕಲ್ಲು ಗಣಿಗಾರಿಕೆಗಾಗಿ ತೆಗೆದ ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದು, ಬಾಲಕರಿಬ್ಬರು ಬಿದ್ದು ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ರಾಂಪುರದಲ್ಲಿ ನಡೆದಿದೆ.

koppal
ಕೊಪ್ಪಳ

ಕೊಪ್ಪಳ: ನೀರು ತುಂಬಿದ ಗುಂಡಿಗೆ ಕಾಲು ಜಾರಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ರಾಂಪುರದಲ್ಲಿ ನಡೆದಿದೆ. ಮಹಾಂತೇಶ ಮಾದರ (9), ವಿಜಯ ಮಾದರ (9) ಮೃತ ಬಾಲಕರು.

ಹನುಮಸಾಗರ ಸುತ್ತಮುತ್ತ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ವಕ್ಕಂದುರ್ಗ ರಸ್ತೆಯಲ್ಲಿ ಕಲ್ಲು ಗಣಿಗಾರಿಕೆಗಾಗಿ ಗುಂಡಿ ತೆಗೆಯಲಾಗಿದೆ. ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಗುಂಡಿ ತುಂಬಿದ್ದು, ಬಾಲಕರಿಬ್ಬರು ಕಾಲು ಜಾರಿ ಬಿದ್ದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಇದನ್ನೂ ಓದಿ:ಬಲಿ ಪಡೆಯಲು ಕಾದು ಕುಳಿತಿವೆ ವಾಣಿಜ್ಯ ನಗರಿ ಗುಂಡಿಗಳು.. ಹುಬ್ಬಳ್ಳಿಯ ಬೈಕ್ ಸವಾರರೇ ಹುಷಾರ್

ABOUT THE AUTHOR

...view details