ಕರ್ನಾಟಕ

karnataka

ಹನುಮನ ಹುಂಡಿಯಲ್ಲಿ ಥೈಲ್ಯಾಂಡ್, ಜರ್ಮನಿ, ಯುಕೆ ನಾಣ್ಯ ಪತ್ತೆ

By

Published : Feb 28, 2022, 5:45 PM IST

ಫೆ.1 ರಿಂದ ಫೆ. 28ರವರೆಗೆ ಕಾಣಿಕೆಯ ಹುಂಡಿಯಲ್ಲಿ ಒಟ್ಟು 9.92 ಲಕ್ಷ ರೂಪಾಯಿ ಮೊತ್ತದ ನಗದು ಸಂಗ್ರಹವಾಗಿದೆ. ಕಳೆದ ತಿಂಗಳು ಅಂದರೆ ಜನವರಿ 31ರಂದು ಕಾಣಿಕೆ ಹುಂಡಿ ತೆಗೆದಾಗ ₹10.45 ಲಕ್ಷ ಮೊತ್ತದ ನಗದು ಸಂಗ್ರಹವಾಗಿತ್ತು..

thailand-germany-and-uk-coin-found-in-hanuman-hundi-at-gangavathi
ಹನುಮನ ಹುಂಡಿಯಲ್ಲಿ ಥೈಲ್ಯಾಂಡ್, ಜರ್ಮನಿ, ಯುಕೆ ನಾಣ್ಯ ಪತ್ತೆ

ಗಂಗಾವತಿ :ತಾಲೂಕಿನ ಚಿಕ್ಕರಾಂಪುರದ ಬಳಿ ಇರುವ ಅಂಜನಾದ್ರಿಯ ಹನುಮನ ದೇಗುಲದ ಹುಂಡಿಯಲ್ಲಿ ಥೈಲ್ಯಾಂಡ್, ಜರ್ಮನಿ ಮತ್ತು ಯುನಿಟೈಡ್ ಕಿಂಗ್​ಡಮ್​ ದೇಶಕ್ಕೆ ಸೇರಿದ ತಲಾ ಒಂದೊಂದು ನಾಣ್ಯಗಳು ಪತ್ತೆಯಾಗಿವೆ.

ಹನುಮನ ಹುಂಡಿಯಲ್ಲಿ ಥೈಲ್ಯಾಂಡ್, ಜರ್ಮನಿ, ಯುಕೆ ನಾಣ್ಯಗಳು ಪತ್ತೆ..

ಸೋಮವಾರ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ದೇಗುಲದ ಆಡಳಿತ ಮಂಡಳಿ ಸದಸ್ಯರು, ಭಕ್ತರಿಂದ ಕಾಣಿಕೆ ರೂಪದಲ್ಲಿ ಸಲ್ಲಿಕೆಯಾದ ಹುಂಡಿಯಲ್ಲಿನ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದಾಗ ಈ ವಿದೇಶಿ ನಾಣ್ಯಗಳು ಪತ್ತೆಯಾಗಿವೆ.

ಥೈಲ್ಯಾಂಡ್, ಜರ್ಮನಿ, ಯುಕೆ ನಾಣ್ಯಗಳು

ಥೈಲ್ಯಾಂಡ್​ನ 5 ಯೆನ್, ಜರ್ಮನಿಯ ಒಂದು ಯುರೋ ಮತ್ತು ಯುಕೆ ದೇಶದ ರಾಣಿ ಎಲೆಜಬೆತ್ ಇರುವ ಒಂದು ನಾಣ್ಯ ಪತ್ತೆಯಾಗಿದೆ. ಕಳೆದ ಎರಡು ವರ್ಷದಿಂದ ಇದುವರೆಗೂ ಸುಮಾರು 50ಕ್ಕೂ ಹೆಚ್ಚು ವಿದೇಶಿ ನಾಣ್ಯಗಳು ಪತ್ತೆಯಾಗಿವೆ.

ಹುಂಡಿ ಎಣಿಕೆಯಲ್ಲಿ ತೊಡಗಿರುವ ಭಕ್ತರು

ಫೆ.1 ರಿಂದ ಫೆ. 28ರವರೆಗೆ ಕಾಣಿಕೆಯ ಹುಂಡಿಯಲ್ಲಿ ಒಟ್ಟು 9.92 ಲಕ್ಷ ರೂಪಾಯಿ ಮೊತ್ತದ ನಗದು ಸಂಗ್ರಹವಾಗಿದೆ. ಕಳೆದ ತಿಂಗಳು ಅಂದರೆ ಜನವರಿ 31ರಂದು ಕಾಣಿಕೆ ಹುಂಡಿ ತೆಗೆದಾಗ ₹10.45 ಲಕ್ಷ ಮೊತ್ತದ ನಗದು ಸಂಗ್ರಹವಾಗಿತ್ತು.

ಓದಿ:ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ಮೂವರು ಬಲಿ

ABOUT THE AUTHOR

...view details