ಕರ್ನಾಟಕ

karnataka

ಸರ್ಕಾರಿ ಶಾಲೆ ಉಳಿಸಲು ಪಣ.. ಚಳ್ಳೂರು ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ಪಾದಯಾತ್ರೆ

By

Published : Oct 2, 2021, 4:05 PM IST

Updated : Oct 2, 2021, 4:45 PM IST

ಚಳ್ಳೂರು ಗ್ರಾಮದಲ್ಲಿನ ಸರ್ಕಾರಿ ಶಾಲೆಗೆ ದಾನ ನೀಡಲಾಗಿದ್ದ ಭೂಮಿಯಲ್ಲಿ ದಾನಿಗಳ ಕುಟುಂಬದವರು, ಜಾಗ ತಮ್ಮದೆಂದು ವಾಣಿಜ್ಯ ಮಳಿಗೆಗಳನ್ನು ಕಟ್ಟಿಸುತ್ತಿದ್ದಾರೆ. ಇದನ್ನು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಇಂದು ಗ್ರಾಮಸ್ಥರು ಮತ್ತು ಹಳೇ ವಿದ್ಯಾರ್ಥಿಗಳು ಪಾದಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

protest at koppala
ಸರ್ಕಾರಿ ಶಾಲೆ ಉಳುವಿಗಾಗಿ ಪಾದಯಾತ್ರೆ ಕೈಗೊಂಡ ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು

ಕೊಪ್ಪಳ: ಸರ್ಕಾರಿ ಶಾಲೆಯ ಉಳಿವಿಗಾಗಿ ಗ್ರಾಮಸ್ಥರು ಹಾಗು ಶಾಲೆಯ ಹಳೇ ವಿದ್ಯಾರ್ಥಿಗಳು ಪಾದಯಾತ್ರೆ ಆರಂಭಿಸಿದ್ದಾರೆ. ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಕಾರಟಗಿ ತಹಶೀಲ್ದಾರ್​ ಕಚೇರಿಯವರೆಗೆ ಪಾದಯಾತ್ರೆ ಕೈಗೊಂಡರು.

ಸರ್ಕಾರಿ ಶಾಲೆ ಉಳಿಸಲು ಪಣ

ಚಳ್ಳೂರು ಗ್ರಾಮದಲ್ಲಿನ ಸರ್ಕಾರಿ ಶಾಲೆಗೆ ದಾನ ನೀಡಲಾಗಿದ್ದ ಭೂಮಿಯಲ್ಲಿ ದಾನಿಗಳ ಕುಟುಂಬದವರು, ಜಾಗ ತಮ್ಮದೆಂದು ವಾಣಿಜ್ಯ ಮಳಿಗೆಗಳನ್ನು ಕಟ್ಟಿಸುತ್ತಿದ್ದಾರೆ. ಶಾಲೆಗೆ ನೀಡಿದ ಜಾಗದಲ್ಲಿ ದಾನಿಗಳ ಕುಟುಂಬಸ್ಥರು ಹಕ್ಕು ಚಲಾಯಿಸುತ್ತಿರುವುದಕ್ಕೆ ಗ್ರಾಮಸ್ಥರು ಈಗಾಗಲೇ ಸಾಕಷ್ಟು ಬಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದಾರೆ. ಆದರೂ ಸಹ ಯಾವುದೇ ಪ್ರಯೋಜವಾಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:ಖುರ್ಚಿ ಆಸೆಗಾಗಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು : ಕೇಂದ್ರ ಸಚಿವ ನಾರಾಯಣಸ್ವಾಮಿ ವ್ಯಂಗ್ಯ

ಹೀಗಾಗಿ ಶಾಲೆಯ ಉಳಿವಿಗಾಗಿ ಇಂದು ಗ್ರಾಮಸ್ಥರು ಹಾಗೂ ಶಾಲೆಯ ಹಳೇ ವಿದ್ಯಾರ್ಥಿಗಳು ಸೇರಿಕೊಂಡು ಸುಮಾರು 200ಕ್ಕೂ ಹೆಚ್ಚು ಜನರು ಚಳ್ಳೂರು ಗ್ರಾಮದಿಂದ ಕಾರಟಗಿಯ ತಹಶೀಲ್ದಾರ್​​ ಕಚೇರಿಯವರೆಗೆ ಪಾದಯಾತ್ರೆ ಕೈಗೊಂಡು ಶಾಲೆಗೆ ದಾನವಾಗಿ ನೀಡಲಾಗಿರುವ ಭೂಮಿಯನ್ನು ಶಾಲೆಗಾಗಿಯೇ ಉಳಿಸಬೇಕು ಎಂದು ಆಗ್ರಹಿಸಿದ್ದಾರೆ.

Last Updated :Oct 2, 2021, 4:45 PM IST

ABOUT THE AUTHOR

...view details