ಕರ್ನಾಟಕ

karnataka

ಲೂಟಿ ಹೊಡೆದ ಹಣದಿಂದ ಆಪರೇಷನ್ ಕಮಲ: ಸಿದ್ದರಾಮಯ್ಯ

By

Published : Jun 27, 2022, 3:40 PM IST

ಬಿಜೆಪಿಯವರು ಬಾಯಿ ತೆಗೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಪುಂಕಾನು ಪುಂಕವಾಗಿ ಮಾತನಾಡುತ್ತಾರೆ. ಈಗ ಆಪರೇಷನ್ ಕಮಲ ಮಾಡುತ್ತಿದ್ದಾರಲ್ಲ ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾದ ಕೆಲಸವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

siddaramaiah
ಮಾಜಿ ಸಿಎಂ ಸಿದ್ದರಾಮಯ್ಯ

ಕೊಪ್ಪಳ: ಎಲ್ಲಿ ಬಿಜೆಪಿ ಸರ್ಕಾರವಿದೆಯೋ ಅಲ್ಲೆಲ್ಲಾ ಲೂಟಿ ಹೊಡೆಯುತ್ತಿದ್ದಾರೆ. ಆ ಪಾಪದ ಹಣದಿಂದಲೇ ಆಪರೇಷನ್ ಕಮಲ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಾವು ಸರ್ಕಾರ ಕಳೆದುಕೊಳ್ಳುತ್ತಿರಲಿಲ್ಲ. ಬಿಜೆಪಿಯವರ ಕುತಂತ್ರ ಬುದ್ಧಿಯಿಂದ ಕಳೆದುಕೊಳ್ಳುವ ಹಾಗೆ ಮಾಡಿದ್ದಾರೆ ಎಂದು ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬಾಯಿ ತೆಗೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುತ್ತಾರೆ. ಈಗ ಆಪರೇಷನ್ ಕಮಲ ಮಾಡುತ್ತಿದ್ದಾರಲ್ಲ, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾದ ಕೆಲಸವಾ ಎಂಬುದನ್ನ ಅವರೇ ಹೇಳಬೇಕಿದೆ. ಐಟಿ, ಸಿಬಿಐ, ಇಡಿ ಅವರ ಬಳಿ ಇವೆ. ಅವುಗಳನ್ನು ಬಳಸಿಕೊಂಡು ಆಟವಾಡುತ್ತಿದ್ದಾರೆ ಎಂದರು.

ಲೂಟಿ ಹೊಡೆದ ಹಣದಿಂದ ಆಪರೇಷನ್ ಕಮಲ ಎಂದು ಸಿದ್ದರಾಮಯ್ಯ ಆರೋಪ

ಹೆಚ್​ ಡಿ ಕುಮಾರಸ್ವಾಮಿ ತಾನೇ ಮುಂದಿನ ಮುಖ್ಯಮಂತ್ರಿ ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಮತ್ತೆ ಸಿಎಂ ಆಗಲು ಜನರು ಆಶೀರ್ವಾದ ಮಾಡಬೇಕು. ಜೆಡಿಎಸ್​ನವರು ಮೂರನೇ ಸ್ಥಾನಕ್ಕೆ ಹೋಗಿದ್ದಾರೆ. ಅಂತವರು ಅಧಿಕಾರಕ್ಕೆ ಬರಲು ಸಾಧ್ಯವಿದೆಯೇ ಎಂದರು. ಹಾಗೇ ಈ ಆರ್​ಎಸ್​ಎಸ್​ ಮತ್ತು ಜೆಡಿಎಸ್​ನವರಿಗೆ ನನ್ನನ್ನು ಕಂಡರೆ ಭಯ. ಹೀಗಾಗಿ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ:16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಸರ್ಕಾರ!

ABOUT THE AUTHOR

...view details