ಕರ್ನಾಟಕ

karnataka

ಹನುಮನೆಂದರೆ ಕಿಷ್ಕಿಂಧಾ, ಕಿಷ್ಕಿಂಧೆ ಎಂದರೆ ಹನುಮ : ಶ್ರೀ ರವಿಶಂಕರ ಗುರೂಜಿ

By

Published : Nov 26, 2021, 8:07 PM IST

ಕಿಷ್ಕಿಂಧೆ ಎಂದರೆ ಹನುಮ ಎಂಬುವುದು ಎಲ್ಲಾ ದಾಖಲೆ, ಪೌರಾಣಿಕಗಳಲ್ಲಿ ಉಲ್ಲೇಖವಾಗಿದೆ. ಆದರೆ, ಯಾರೋ ಹೇಳುತ್ತಾರೆ ಅಂತಾ ರಾಮಾಯಣ ಅಥವಾ ಹನುಮನ ಕಿಷ್ಕಿಂಧೆ ಬದಲಾಗದು ಎಂದು ಹನುಮನ ಜನ್ಮಸ್ಥಳ ವಿವಾದ ಕುರಿತು ಆರ್ಟ್​​​ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ಗುರು ರವಿಶಂಕರ್ ಗುರೂಜಿ ಪ್ರತಿಕ್ರಿಯೆ ನೀಡಿದರು..

ravishankar-guruji
ರವಿಶಂಕರ ಗುರೂಜಿ

ಗಂಗಾವತಿ :ಹನುಮನೆಂದರೆ ಕಿಷ್ಕಿಂಧೆ, ಕಿಷ್ಕಿಂಧೆ ಎಂದರೆ ಹನುಮ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಯಾರೋ ಏನೋ ಹೇಳ್ತಾರೆ ಅಂತಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಆರ್ಟ್​​​ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ ಹೇಳಿದರು.

ಶ್ರೀ ಹನುಮನ ಜನ್ಮಸ್ಥಳಕ್ಕೆ ಭೇಟಿ ನೀಡಿದ ಶ್ರೀ ರವಿಶಂಕರ ಗುರೂಜಿ..

ತಾಲೂಕಿನ ಚಿಕ್ಕರಾಂಪೂರ ಬಳಿ ಇರುವ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹನುಮ ಜನ್ಮಸ್ಥಳ ವಿವಾದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಿಷ್ಕಿಂಧೆ ಎಂದರೆ ಹನುಮ ಎಂಬುವುದು ಎಲ್ಲಾ ದಾಖಲೆ, ಪೌರಾಣಿಕಗಳಲ್ಲಿ ಉಲ್ಲೇಖವಾಗಿದೆ.

ಆದರೆ, ಯಾರೋ (ತಿರುಪತಿ ತಿರುಮಲ ದೇಗುಲದವರು) ಹೇಳುತ್ತಾರೆ ಎಂದು ರಾಮಾಯಣ, ಅಥವಾ ಹನುಮನ ಕಿಷ್ಕಿಂಧೆ ಬದಲಾಗದು. ಎಲ್ಲರೂ ಅನಾಧಿಕಾಲದಿಂದಲೂ ನಂಬಿ ಬಂದಿರುವ ಕಿಷ್ಕಿಂದೆ ಎಂದರೆ ಹಂಪಿಯ ಪರಿಸರ ಎಂದು ಸ್ಪಷ್ಟಪಡಿಸಿದರು.

ಬಳಿಕ ಅಂಜನಾದ್ರಿ ದೇಗುಲಕ್ಕೆ ತೆರಳಿದ ರವಿಶಂರ್ ಗುರೂಜಿ ಅವರು ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ವತಿಯಿಂದ ರವಿಶಂಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details