ಕರ್ನಾಟಕ

karnataka

ಹನುಮ ಜನ್ಮಭೂಮಿಗೆ ಭೇಟಿ ನೀಡಿದ ರಾಜ್ಯ ಗೃಹ ಕಾರ್ಯದರ್ಶಿ ಗೋಯೆಲ್

By

Published : Jan 23, 2021, 7:08 PM IST

Updated : Jan 23, 2021, 9:18 PM IST

ತಂದೆ, ತಾಯಿ, ಮಗಳೊಂದಿಗೆ ಅಂಜನಾದ್ರಿಗೆ ಭೇಟಿ ನೀಡಿದ ಗೃಹ ಕಾರ್ಯದರ್ಶಿ, ಪೋಷಕರು ಬೆಟ್ಟ ಹತ್ತಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಳ ಭಾಗದಿಂದಲೇ ವಿಶೇಷ ಪೂಜೆ ಸಲ್ಲಿಸಿದರು.

rajanish-goyal-secretary-of-states-home-visited-anjanadri-betta
ರಾಜ್ಯ ಗೃಹ ಕಾರ್ಯದರ್ಶಿ ಗೋಯೆಲ್

ಗಂಗಾವತಿ: ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯ ಸರ್ಕಾರದ ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್ ಗೋಯೆಲ್ ಭೇಟಿ ನೀಡಿ ದೇವರ ದರ್ಶನ ಪಡೆದರು.

ಹನುಮ ಜನ್ಮಭೂಮಿಗೆ ಭೇಟಿ ನೀಡಿದ ರಾಜ್ಯ ಗೃಹ ಕಾರ್ಯದರ್ಶಿ ಗೋಯೆಲ್

ತಂದೆ, ತಾಯಿ, ಮಗಳೊಂದಿಗೆ ಅಂಜನಾದ್ರಿಗೆ ಭೇಟಿ ನೀಡಿದ ಗೃಹ ಕಾರ್ಯದರ್ಶಿ, ಪೋಷಕರು ಬೆಟ್ಟ ಹತ್ತಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಳ ಭಾಗದಿಂದಲೇ ವಿಶೇಷ ಪೂಜೆ ಸಲ್ಲಿಸಿದರು.

ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ ರಾಜ್ಯ ಗೃಹ ಕಾರ್ಯದರ್ಶಿ

ದೇಗುಲದ ವತಿಯಿಂದ ರಜನೀಶ್ ಅವರನ್ನು ಗೌರವಿಸಲಾಯಿತು. ತಾಲ್ಲೂಕು ಆಡಳಿತದ ತರಬೇತಿ ಐಎಎಸ್ ಅಧಿಕಾರಿ ವರ್ಣೀತ್​​​ ನೇಗಿ ಅವರನ್ನು ಸನ್ಮಾನಿಸಿದರು. ಇದಕ್ಕೂ ಮೊದಲು ರಜನೀಶ್​ ಅವರು ಕುಟುಂಬ ಸಮೇತ ಪೌರಾಣಿಕ ಹಿನ್ನೆಲೆಯ ಪಂಪಾಸರೋವರಕ್ಕೆ ಭೇಟಿ ನೀಡಿದರು.

ಹನುಮ ಜನ್ಮಭೂಮಿಗೆ ಭೇಟಿ ನೀಡಿದ ರಾಜ್ಯ ಗೃಹ ಕಾರ್ಯದರ್ಶಿ ಗೋಯೆಲ್

ಗುಜರಾತಿನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅಂಜನಾದ್ರಿಯ ಹನುಮ ದೇಗುಲದಿಂದ ಚಾಲನೆ ನೀಡಿದ ಸ್ಥಳದಲ್ಲಿಯೇ ಗೋಯೆಲ್ ಕುಟುಂಬ ವಿಶೇಷ ಪೂಜೆ ಸಲ್ಲಿಸಿತು. ಕಲಬುರಗಿಎ ಪ್ರಾದೇಶಿಕ ಆಯುಕ್ತರಾಗಿದ್ದ ಗೋಯೇಲ್ ಒಂದು ದಶಕದ ಬಳಿಕ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದರು.

ಹನುಮ ಜನ್ಮಭೂಮಿಗೆ ಭೇಟಿ ನೀಡಿದ ರಾಜ್ಯ ಗೃಹ ಕಾರ್ಯದರ್ಶಿ ಗೋಯೆಲ್

ಸರ್ಕಿಟ್​​ ಹೌಸ್​ ಅವ್ಯವಸ್ಥೆ ಕೆಂಡಾಮಂಡಲರಾದ ಗೋಯೆಲ್​​

ಗೃಹ ಇಲಾಖೆಯ ಕಾರ್ಯದರ್ಶಿಯಂತಹ ಉನ್ನತ ಶ್ರೇಣಿಯಲ್ಲಿರುವ ರಜನೀಶ್ ಗೋಯೆಲ್ ಅವರ ವಾಸ್ತವ್ಯಕ್ಕೆಂದು ಲೋಕೋಪಯೋಗಿ ಇಲಾಖೆಗೆ ಸೇರಿದ್ದ ನಗರದ ಹೊರವಲಯದಲ್ಲಿರುವ ಸರ್ಕಿಟ್​​ ಹೌಸ್​ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದಾಗಿ ಕೊಠಡಿಗಳು ತೀರಾ ಅಸ್ತವ್ಯಸ್ತವಾಗಿದ್ದವು ಎನ್ನಲಾಗಿದೆ. ಇದನ್ನು ಕಂಡ ಅಧಿಕಾರಿ ಕಿಡಿಕಾರಿದ್ದಾರೆ. ಕೂಡಲೆ ತಮ್ಮ ಪಾಲಕರೊಂದಿಗೆ ಬಂದ ಕೇವಲ ಅರ್ಧ ಗಂಟೆಯಲ್ಲೆ ಮರಳಿದ್ದು, ಹೊಸಪೇಟೆಯ ವೈಕುಂಠ ಅತಿಥಿ ಗೃಹಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

Last Updated : Jan 23, 2021, 9:18 PM IST

ABOUT THE AUTHOR

...view details