ಕರ್ನಾಟಕ

karnataka

ETV Bharat / state

ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ತುಂಬಲು ವಿಶೇಷ ತರಬೇತಿ : ಅಲೋಕ್ ಕುಮಾರ್

ಕಲ್ಯಾಣ ಕರ್ನಾಟಕ ಭಾಗದ ಆಯ್ದ ಶಾಲಾ ಕಾಲೇಜುಗಳಲ್ಲಿ ತರಬೇತಿ ನೀಡಲಾಗುತ್ತದೆ. ರಾಜ್ಯದಲ್ಲಿ ಸುಮಾರು 300 ಪ್ರೌಢಶಾಲೆಯಲ್ಲಿ ಎನ್​​ಸಿಸಿ ಮಾದರಿಯಲ್ಲಿ ಪೊಲೀಸ್ ತರಬೇತಿ ನೀಡಲಾಗುತ್ತದೆ ಎಂದರು‌‌. ಪೊಲೀಸ್ ತರಬೇತಿ ಪಡೆದವರು ಮುಂದಿನ ದಿನಗಳಲ್ಲಿ ತಮ್ಮ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಬೇಕೆಂದರು..

passing out parade in koppala
ಕೆಎಸ್ಆರ್​​ಪಿಯ 23ನೇ ತಂಡದ ನಿರ್ಗಮನ ಪಥ ಸಂಚಲನ

By

Published : Sep 14, 2021, 3:15 PM IST

ಕೊಪ್ಪಳ: ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆ ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ತುಂಬಲು ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಕೆಎಸ್ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

ಕೆಎಸ್ಆರ್​​ಪಿಯ 23ನೇ ತಂಡದ ನಿರ್ಗಮನ ಪಥ ಸಂಚಲನ..

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ಭಾರತೀಯ ಮೀಸಲು ಪೊಲೀಸ್ ಪಡೆ ಹಾಗೂ ಕೆಎಸ್​ಆರ್​ಪಿ ಬೆಟಾಲಿಯನ್​ನಲ್ಲಿ ನಡೆದ ಕೆಎಸ್ಆರ್​​ಪಿಯ 23ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ, ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ತುಂಬಲು ವಿಶೇಷ ತರಬೇತಿ ನೀಡಲಾಗುತ್ತದೆ ಎಂದರು.

ಇದನ್ನೂ ಓದಿ:ಮೈಸೂರು ಲ್ಯಾಂಪ್ಸ್ ಜಾಗ ಟ್ರಸ್ಟ್​​ಗೆ ನೋಂದಣಿ: ಅರ್ಧ ಗಂಟೆ ಚರ್ಚೆಗೆ ರೂಲಿಂಗ್ ನೀಡಿದ ಸಭಾಪತಿ ಹೊರಟ್ಟಿ

ಕಲ್ಯಾಣ ಕರ್ನಾಟಕ ಭಾಗದ ಆಯ್ದ ಶಾಲಾ ಕಾಲೇಜುಗಳಲ್ಲಿ ತರಬೇತಿ ನೀಡಲಾಗುತ್ತದೆ. ರಾಜ್ಯದಲ್ಲಿ ಸುಮಾರು 300 ಪ್ರೌಢಶಾಲೆಯಲ್ಲಿ ಎನ್​​ಸಿಸಿ ಮಾದರಿಯಲ್ಲಿ ಪೊಲೀಸ್ ತರಬೇತಿ ನೀಡಲಾಗುತ್ತದೆ ಎಂದರು‌‌. ಪೊಲೀಸ್ ತರಬೇತಿ ಪಡೆದವರು ಮುಂದಿನ ದಿನಗಳಲ್ಲಿ ತಮ್ಮ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಬೇಕೆಂದರು.

151 ಜನ ಕೆಎಸ್ಆರ್​ಪಿ ಪಡೆಗೆ ತರಬೇತಿ ಪಡೆದಿದ್ದಾರೆ. ಇಂದು ಅಚ್ಚುಕಟ್ಟಾಗಿ ನಿರ್ಗಮನ ಪಥ ಸಂಚಲನ ನಡೆಯಿತು‌.

ABOUT THE AUTHOR

...view details