ಕರ್ನಾಟಕ

karnataka

ಅಧ್ಯಕ್ಷೆಯ ಬದಲಿಗೆ ಪತಿಯಿಂದ ಕಾಮಗಾರಿಗೆ ಚಾಲನೆ : ಪಿಡಿಒ ವಿರುದ್ಧ ಆಕ್ರೋಶ

By

Published : Feb 26, 2021, 7:59 AM IST

ಈ ಹಿಂದೆ ಚಿಕ್ಕ ಜಂತಕಲ್ ಗ್ರಾಪಂ ಅಧ್ಯಕ್ಷೆಯ ಬದಲಿಗೆ ಆಕೆಯ ಪತಿ ರೇಣುಕನಗೌಡ ಎಂಬುವರು ನರೇಗಾ ಕಾಮಗಾರಿಗೆ ಚಾಲನೆ ನೀಡಿದ ಪ್ರಕರಣದಲ್ಲಿ ಪಿಡಿಒ ತಲೆದಂಡವಾಗಿತ್ತು. ಇದೀಗ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ..

panchayat president husband driven to work news
ಅಧ್ಯಕ್ಷೆ ಬದಲಿಗೆ ಪತಿಯಿಂದ ಕಾಮಗಾರಿಗೆ ಚಾಲನೆ

ಗಂಗಾವತಿ :ಪಂಚಾಯತ್‌ ವ್ಯಾಪ್ತಿಯಲ್ಲಿನ ನಾನಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವೇಳೆ ಮಹಿಳಾ ಅಧ್ಯಕ್ಷರ ಬದಲಲು ಅವರ ಪತಿ 'ಮಹಿಳಾ ಕಾಯಕೋತ್ಸವ'ಕ್ಕೆ ಚಾಲನೆ ನೀಡಿದ್ದು, ಪಿಡಿಒ ಮಾಡಿದ ಎಡವಟ್ಟಿನ ಕೆಲಸ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಅಧ್ಯಕ್ಷೆ ಬದಲಿಗೆ ಪತಿಯಿಂದ ಕಾಮಗಾರಿಗೆ ಚಾಲನೆ

ತಾಲೂಕಿನ ಹಣವಾಳ ಗ್ರಾಮ ಪಂಚಾಯತ್‌ಯಲ್ಲಿ ಈ ಘಟನೆ ನಡೆದಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕಾಯಕೋತ್ಸವಕ್ಕೆ ಅಧ್ಯಕ್ಷೆ ನಂದಿನಿ ಅವರು ಚಾಲನೆ ನೀಡಬೇಕಿತ್ತು. ಆದರೆ, ಅವರ ಬದಲಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಪತಿ ವೆಂಕಟೇಶ ಭೋವಿ ಅವರು ಚಾಲನೆ ನೀಡಿದ್ದಾರೆ. ಅಧ್ಯಕ್ಷೆ ಪತಿಯ ಈ ವಿಡಿಯೋ ಹಾಗೂ ಚಿತ್ರಗಳು ಇದೀಗ ವೈರಲ್ ಆಗಿವೆ.

ಈ ಬಗ್ಗೆ ಪಂಚಾಯತ್‌ ಪಿಡಿಒ ಯು. ಮಲ್ಲಿಕಾರ್ಜುನ ಪ್ರತಿಕ್ರಿಯಿಸಿ, ಕಾಮಗಾರಿ ಚಾಲನೆಗೆ ಎಲ್ಲಾ ಮಹಿಳಾ ಸದಸ್ಯರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಅಧ್ಯಕ್ಷರು ಗೈರು ಹಾಜರಾಗಿದ್ದರು. ಉಪಾಧ್ಯಕ್ಷ ಕಾಮಗಾರಿಗೆ ಚಾಲನೆ ನೀಡಿದ್ದು, ಗುಂಪಲ್ಲಿ ಯಾರೋ ಒಬ್ಬ ವ್ಯಕ್ತಿ ಒತ್ತಾಯ ಮಾಡಿದ್ದಕ್ಕೆ ಅಧ್ಯಕ್ಷೆಯ ಪತಿ ಕೊನೆಗೆ ಪಿಕಾಸಿ ಹಿಡಿದು ನೆಲೆ ಅಗೆದಿದ್ದಾರೆ ಎಂದು ಪಿಡಿಒ ಸ್ಪಷ್ಟನೆ ನೀಡಿದ್ದಾರೆ.

ಉಪಾಧ್ಯಕ್ಷರು ಕಾಮಗಾರಿಗೆ ಚಾಲನೆ ನೀಡಿದ್ದು, ಗುಂಪಲ್ಲಿ ಯಾರೋ ಒಬ್ಬ ವ್ಯಕ್ತಿ ಒತ್ತಾಯ ಮಾಡಿದ್ದಕ್ಕೆ ಅಧ್ಯಕ್ಷೆಯ ಪತಿ ಕೊನೆಗೆ ಪಿಕಾಸಿ ಹಿಡಿದು ನೆಲ ಅಗೆದಿದ್ದಾರೆ ಎಂದು ಪಿಡಿಒ ಹೇಳಿದ್ದಾರೆ.

ಈ ಹಿಂದೆ ಚಿಕ್ಕ ಜಂತಕಲ್ ಗ್ರಾಪಂ ಅಧ್ಯಕ್ಷೆಯ ಬದಲಿಗೆ ಆಕೆಯ ಪತಿ ರೇಣುಕನಗೌಡ ಎಂಬುವರು ನರೇಗಾ ಕಾಮಗಾರಿಗೆ ಚಾಲನೆ ನೀಡಿದ ಪ್ರಕರಣದಲ್ಲಿ ಪಿಡಿಒ ತಲೆದಂಡವಾಗಿತ್ತು. ಇದೀಗ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಇಂದು ರಾಷ್ಟ್ರಾದ್ಯಂತ ಲಾರಿ ಮುಷ್ಕರ; ರಾಜ್ಯದಲ್ಲಿ ಸ್ತಬ್ಧವಾಗಲಿವೆ 6 ಲಕ್ಷಕ್ಕೂ ಹೆಚ್ಚು ಲಾರಿಗಳು!

ABOUT THE AUTHOR

...view details