ಕರ್ನಾಟಕ

karnataka

ಪಂಪಾಪತಿ ದೇಗುಲದಲ್ಲಿ ರಥಸಪ್ತಮಿ; ವಿಜೃಂಭಣೆಯಿಂದ ನೆರವೇರಿತು ರಥೋತ್ಸವ

By

Published : Feb 19, 2021, 7:27 PM IST

ಪಂಪಾಪತಿ ಜಾತ್ರೆಗೆ ಸುಮಾರು 500 ವರ್ಷಗಳ ಇತಿಹಾಸವಿದ್ದು, ಜಾತ್ರೆಯ ಸಂದರ್ಭದಲ್ಲಿ ಸುತ್ತಲಿನ ಗ್ರಾಮಗಳ ಜನರು ಸೇರುವುದು ಶತಮಾನಗಳಿಂದ ವಾಡಿಕೆಯಾಗಿದೆ. ಅದರಂತೆ ಇಂದು ನಡೆದ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

pampavati fair celebration at  gangavati
ಪಂಪಾಪತಿ ದೇಗುಲದ ವಾರ್ಷಿಕೋತ್ಸವ ಹಾಗು ರಥಸಪ್ತಮಿ; ವಿಜೃಂಭಣೆಯಿಂದ ನೆರವೇರಿತು ರಥೋತ್ಸವ

ಗಂಗಾವತಿ: ಇಲ್ಲಿನ ಹಿರೇಜಂತಕಲ್​ನ ಐತಿಹಾಸಿಕ ಪ್ರಸನ್ನ ಪಂಪಾಪತಿ ದೇಗುಲದ ವಾರ್ಷಿಕೋತ್ಸವ ಹಾಗೂ ರಥಸಪ್ತಮಿ ನಿಮಿತ್ತ ಸಂಜೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.

ದೇಗುಲದಿಂದ ಆರಂಭವಾದ ರಥೋತ್ಸವ ಪಾದಗಟ್ಟೆವರೆಗೂ ನಡೆಯಿತು. ಬಳಿಕ ಪಾದಗಟ್ಟೆಯಿಂದ ಪುನಃ ದೇಗುಲದ ಆವರಣದವರೆಗೂ ರಥವನ್ನು ಎಳೆಯಲಾಯಿತು. ಕೊರೊನಾ ಹಿನ್ನೆಲೆ ರಥೋತ್ಸವ ಕೈಬಿಟ್ಟು ಸಾಂಕೇತಿಕವಾಗಿ ಸರಳವಾಗಿ ಜಾತ್ರೆ ಆಚರಿಸುವ ಬಗ್ಗೆ ದೇಗುಲದ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿತ್ತು. ಆದರೆ, ಸರ್ಕಾರ ಕೇವಲ ಮೂರು ದಿನಗಳ ಹಿಂದೆ ಎಲ್ಲ ಜಾತ್ರೆ, ರಥೋತ್ಸವ ಹಾಗೂ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಿದ ಹಿನ್ನೆಲೆ ಸ್ಥಳೀಯರು ಕೇವಲ ಎರಡು ದಿನಗಳಲ್ಲಿ ರಥೋತ್ಸವ ನಡೆಸುವ ಬಗ್ಗೆ ಚಿಂತನೆ ನಡೆಸಿ ಅದನ್ನು ಕಾರ್ಯಗತ ಮಾಡಿದರು.

ಈ ಸುದ್ದಿಯನ್ನೂ ಓದಿ:ನಡೆ ಹಳ್ಳಿ ಕಡೆ ಕಾರ್ಯಕ್ರಮ: ಹೆಬ್ಬಾಳದಿಂದ ಹೊಸಹಳ್ಳಿಯವರೆಗೂ ಫ್ಲೆಕ್ಸ್​ ಅಬ್ಬರ

ಗ್ರಾಮೀಣ ಭಾಗದ ಸೊಗಡಿನ ಜಾತ್ರೆ ಎಂದೇ ಕರೆಯಲಾಗುವ ಪಂಪಾಪತಿ ಜಾತ್ರೆಗೆ ಸುಮಾರು 500 ವರ್ಷಗಳ ಇತಿಹಾಸವಿದ್ದು, ಜಾತ್ರೆಯ ಸಂದರ್ಭದಲ್ಲಿ ಸುತ್ತಲಿನ ಗ್ರಾಮಗಳ ಜನರು ಸೇರುವುದು ಶತಮಾನಗಳಿಂದ ವಾಡಿಕೆಯಾಗಿ ಬಂದಿದೆ. ಅದರಂತೆ ಇಂದು ನಡೆದ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ABOUT THE AUTHOR

...view details