ಕರ್ನಾಟಕ

karnataka

ರಸ್ತೆಯಲ್ಲಿ ಭತ್ತ ಒಣಗಿಸುವ ರಾಶಿಕಣ: ವಾಹನ ಸವಾರರು ಹೈರಾಣ

By

Published : Apr 26, 2021, 9:02 AM IST

ಗಂಗಾವತಿಯಿಂದ ಕನಕಗಿರಿಗೆ ಹೋಗುವ ಮಾರ್ಗಮಧ್ಯೆ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಆದರೆ, ಭತ್ತ ಒಣಗಿಸಲು ಮತ್ತು ಸಂಗ್ರಹಿಸಿ ಮಾರುಕಟ್ಟೆಗೆ ಸಾಗಿಸಲು ಸೂಕ್ತ ಸೌಲಭ್ಯಗಳಿಲ್ಲದ್ದರಿಂದ ರೈತರು ರಾಜ್ಯ ಹೆದ್ದಾರಿಯಲ್ಲಿಯೇ ಭತ್ತ ಒಣಗಿಸುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

Gangavati
ರಸ್ತೆಯಾಯ್ತು ಭತ್ತ ಒಣಗಿಸುವ ರಾಶಿಕಣ: ವಾಹನ ಸವಾರರ ಪರದಾಟ

ಗಂಗಾವತಿ: ತಾಲೂಕಿನ ನೀರಾವರಿ ಭಾಗದಲ್ಲಿನ ರೈತರು ತಾವು ಬೆಳೆದ ಭತ್ತದ ಬೆಳೆಯನ್ನು ಇದೀಗ ಕಟಾವು ಮಾಡುತ್ತಿದ್ದು, ಧಾನ್ಯವನ್ನು ಒಣಗಿಸಲು ಮತ್ತು ರಾಶಿ ಮಾಡಲು ಸೂಕ್ತ ಸ್ಥಳದ ಕೊರತೆಯಿಂದಾಗಿ ಹೆದ್ದಾರಿಯಲ್ಲೇ ಒಣಗಿಸುತ್ತಿದ್ದಾರೆ.

ರಸ್ತೆಯಾಯ್ತು ಭತ್ತ ಒಣಗಿಸುವ ರಾಶಿಕಣ: ವಾಹನ ಸವಾರರ ಪರದಾಟ

ಗಂಗಾವತಿಯಿಂದ ಕನಕಗಿರಿಗೆ ಹೋಗುವ ಮಾರ್ಗಮಧ್ಯೆ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗಿದೆ. ಆದರೆ, ಭತ್ತ ಒಣಗಿಸಲು ಮತ್ತು ಸಂಗ್ರಹಿಸಿ ಮಾರುಕಟ್ಟೆಗೆ ಸಾಗಿಸಲು ಸೂಕ್ತ ಸೌಲಭ್ಯಗಳಿಲ್ಲದ್ದರಿಂದ ರೈತರು ರಾಜ್ಯ ಹೆದ್ದಾರಿಯಲ್ಲಿಯೇ ಭತ್ತ ಒಣಗಿಸುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ವಾಹನಗಳು ಪರಸ್ಪರ ಎದುರಾದಾಗ ದಾರಿಬಿಡಲು ರಸ್ತೆಯಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ಭತ್ತ ಒಣಗಿಸುವುದನ್ನು ನಿರ್ಬಂಧಿಸಿದರೆ ರೈತರಿಗೆ ಸಮಸ್ಯೆ, ರಸ್ತೆಯಲ್ಲಿ ರಾಶಿ ಮಾಡಿದರೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಪ್ರತಿವರ್ಷ ಇದೇ ಸಮಸ್ಯೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ.

ಇದನ್ನೂ ಓದಿ:ಸಿಡಿಲು ಬಡಿದು ಮನೆ ಕುಸಿದ ಪ್ರಕರಣ: ತಂದೆ, ಮಗ ಸಾವು

ABOUT THE AUTHOR

...view details