ಕರ್ನಾಟಕ

karnataka

91 ಕೆಜಿ ಚೀಲ ಹೊತ್ತು ಯುವಕರಿಂದ ದೀರ್ಘದಂಡ ನಮಸ್ಕಾರ.. ಅಲಾಯಿ ದೇವರಿಗೆ ಹೂ ನೀಡಿದ ಆಂಜನೇಯ..!

By

Published : Jul 29, 2023, 8:37 PM IST

Updated : Jul 29, 2023, 8:54 PM IST

ಕೊಪ್ಪಳ ಜಿಲ್ಲೆಯ ಕವಲೂರು ಗ್ರಾಮ ಹಿಂದೂ - ಮುಸ್ಲಿಂ ಭಾವೈಕ್ಯತೆ ಸಂಕೇತ ಮೊಹರಂ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಹಲವು ಪವಾಡಗಳಿಗೆ ಸಾಕ್ಷಿಯಾಗಿದೆ. ಹಿರೇಖೇಡ ಗ್ರಾಮದಲ್ಲಿ ಮೂವರು ಹಿಂದು ಯುವಕರು 91 ಕೆಜಿ ತೂಕದ ಹುರುಳಿ ಚೀಲ ಹೊತ್ತು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು.

Muharram is celebrated  in Koppal dist
ಕೊಪ್ಪಳ ಜಿಲ್ಲೆಯಲ್ಲಿ ಮೊಹರಂ ಸಂಭ್ರಮದಿಂದ ಆಚರಣೆ

91 ಕೆಜಿ ಚೀಲ ಹೊತ್ತು ಯುವಕರಿಂದ ದೀರ್ಘದಂಡ ನಮಸ್ಕಾರ.. ಅಲಾಯಿ ದೇವರಿಗೆ ಹೂ ನೀಡಿದ ಆಂಜನೇಯ..!

ಗಂಗಾವತಿ/ಕೊಪ್ಪಳ:ಭಾವೈಕ್ಯತೆ ಸಂಕೇತ ಮೊಹರಂ ಹಬ್ಬವನ್ನು ಕೊಪ್ಪಳ ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದ ವೇಳೆ ಆಸ್ತಿಕರ ನಂಬಿಕೆಯಂತೆ ಹಲವು ಪವಾಡಗಳಿಗೆ ಸಾಕ್ಷಿಯಾಗಿದೆ. ನಿನ್ನೆ ಖತಲ್ ರಾತ್ರಿಯಲ್ಲಿ ವಿವಿಧ ಗ್ರಾಮಗಳಲ್ಲಿ ಧಾರ್ಮಿಕ ವಿಶೇಷತೆಗಳು ಜರುಗಿದವು.

ಕೊಪ್ಪಳ ಕವಲೂರು ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ತ ಅಲಾಯಿ ದೇವರಿಗೆ ಆಂಜನೇಯ ಹೂ ನೀಡಿದ ಅಪರೂಪದ ಘಟನೆ ಶುಕ್ರವಾರ ರಾತ್ರಿ ಜರುಗಿದೆ. ನಿನ್ನೆ ಮೊಹರಂ ಹಬ್ಬದ ಖತ್ತಲ್ ರಾತ್ರಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಪ್ರತಿ ವರ್ಷ ಅಲಾಯಿ ದೇವರು ಹೋಗುತ್ತವೆ. ಮೆರವಣಿಗೆ ವೇಳೆ ಗ್ರಾಮದ ಆಂಜನೇಯ ದೇವಸ್ಥಾನದ ಗರ್ಭಗುಡಿಗೆ ಆಗಮಿಸಿದ ಅಲಾಯಿ ದೇವರು ಆಂಜನೇಯನಲ್ಲಿ ಹೂ ನೀಡುವಂತೆ ಕೇಳಿತು. ಕೆಲವೇ ಕ್ಷಣಗಳಲ್ಲಿ ಆಂಜನೇಯ ಮೂರ್ತಿ ಮೇಲಿಂದ ಹೂ ಕೆಳಗೆ ಬೀಳುತ್ತವೆ.

ದೇವರುಗಳ ಸೌಹಾರ್ದಕ್ಕೆ ಮೆಚ್ಚುಗೆ: ಕೊಪ್ಪಳದಲ್ಲಿ ನಡೆದ ದೇವರುಗಳ ಸೌಹಾರ್ದಕ್ಕೆ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕವಲೂರು ಗ್ರಾಮದ ಹಜಿಮ್ ಸಾಬ್ ವ್ಯಕ್ತಿಯು ಅಲೈ ದೇವರ ಸವಾರಿ ಮಾಡುವನಾಗಿದ್ದನು. ಅಲಾಯಿ ದೇವರು ಹೊತ್ತ ಅಜೀಮ್ ಸಾಬ್ ಆಂಜನೇಯನ ಮುಂದೆ ಕುಳಿತು ಪ್ರಾರ್ಥಿಸಿದಾಗ ಆಂಜನೇಯ ಹೂ ಪ್ರಸಾದ ನೀಡುತ್ತಾನೆ. ಹಜಿಮ್ ಸಾಬ್ ಮುಸ್ಲಿಂ ಆಗಿದ್ದರೂ ಅಪ್ಪಟ ಆಂಜನೇಯನ ಭಕ್ತನಾಗಿದ್ದಾನೆ. ಹೀಗಾಗಿ ಆಂಜನೇಯ ಹೂ ನೀಡುವ ದೃಶ್ಯ ವೈರಲ್ ಆಗಿದೆ.

ಕಂಬಳಿ ಪವಾಡ:ಕೊಪ್ಪಳ ತಾಲೂಕಿನ ಬೋಚನಹಳ್ಳಿ ಗ್ರಾಮದಲ್ಲಿ ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಸಿ ಅದರ ಮೇಲೆ ಯುವಕನೊಬ್ಬ ಕುಣಿದಿದ್ದಾನೆ. ಬೋಚನಹಳ್ಳಿಯ ಅಲಾಯಿ ದೇವರ ಮುಂದಿನ ಅಲಾಯಿ ಕುಣಿಯಲ್ಲಿನ ನಿಗಿ ನಿಗಿ ಕೆಂಡದ ಮೇಲೆ ಬಸವರಾಜ ಮೆಣೆಗೇರ ಎಂಬುವವರು ಕಂಬಳಿ ಹಾಸಿ ಕುಣಿದಿದ್ದಾರೆ. ಕಂಬಳಿ ಪವಾಡದ ನಂತರ ಬಸವರಾಜ ದೇವರ ಹೊತ್ತುಕೊಳ್ಳುತ್ತಾರೆ. ವಿಶೇಷವಾಗಿ ಅಲಾಯಿ ದೇವರನ್ನು ಹಿಂದುಗಳೇ ಹೊರುವ ಪದ್ದತಿ ಇದೆ.

91 ಕೆ ಜಿ ಚೀಲ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿದ ಯುವಕರು:-ಹಿಂದೂ ಮುಸ್ಲಿಂರ ಭಾವೈಕ್ಯತೆ ಸಂಕೇತ ಮೊಹರಂ ಹಬ್ಬದ ಆಚರಣೆ ಕೊಪ್ಪಳ ಜಿಲ್ಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಮೊಹರಂ ಕೊನೆಯ ದಿನ ಶನಿವಾರ ಯುವಕರು ಬರೋಬ್ಬರಿ 91 ಕೆಜಿ ತೂಕದ ಚೀಲ ಹೊತ್ತುಕೊಂಡು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಭಕ್ತಿ ಸಮರ್ಪಿಸಿ ಗಮನ ಸೆಳೆದಿದ್ದಾರೆ.

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದಲ್ಲಿ ಮೊಹರಂ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಗ್ರಾಮದ ಮೂವರು ಯುವಕರು ಬರೋಬ್ಬರಿ 91 ಕೆ ಜಿ ಹುರುಳಿ ತುಂಬಿದ್ದ ಚೀಲವನ್ನು ಹೊತ್ತುಕೊಂಡು ಗ್ರಾಮದ ಗ್ರಾಮ ದೇವಸ್ಥಾನದ ಬಳಿಯಿಂದ ಯಮನೂರಸ್ವಾಮಿ ಮಸೀದಿಯವರೆಗೆ ದೀರ್ಘದಂಡ ನಮಸ್ಕಾರ ಹಾಕಿದರು.

ಹಿರೇಖೇಡ ಗ್ರಾಮದ ಸಿದ್ದರಾಮೇಶ ಪ್ಯಾಟ್ಯಾಳ, ಕಿರಣಕುಮಾರ ಉಚ್ಛಲಕುಂಟಿ ಹಾಗೂ ಮಾಳಿಂಗರಾಯ ಬಂಗಿ ಎಂಬ ಯುವಕರು 91 ಕೆ ಜಿ ಹುರುಳಿ ತುಂಬಿದ್ದ ಚೀಲ ಹೊತ್ತುಕೊಂಡು ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿಯನ್ನು ಸಮರ್ಪಿಸಿದರು. ಈ ಮೂವರು ಯುವಕರು ಚೀಲ ಹೊತ್ತುಕೊಂಡು ದೀರ್ಘದಂಡ ನಮಸ್ಕಾರ ಹಾಕುವುದನ್ನು ನೋಡಲು ಕಿಕ್ಕಿರಿದು ಜನ ಸೇರಿದ್ದರು. ಅಲ್ಲದೇ ಗ್ರಾಮದ ಭೀಮನಗೌಡ ಹೊಸಕೇರಿ ಹಾಗೂ ಹನುಮಂತಪ್ಪ ವೀರಾಪುರ ಮೇಸ್ತ್ರಿ ಎಂಬುವರು ಈ ಮೂರು ಜನ ಯುವಕರಿಗೆ ಬೆಳ್ಳಿ ಚೈನ್ ಹಾಗೂ ಬಟ್ಟೆಗಳ ಕಾಣಿಕೆ ನೀಡಿ ಪ್ರೋತ್ಸಾಹಿಸಿದರು.

ಇದನ್ನೂಓದಿ:ಈ ವರ್ಷ ವಿಶ್ವ ಪ್ರಸಿದ್ದ ಮೈಸೂರು ದಸರಾ ಅದ್ದೂರಿ ಆಚರಣೆ: ಸಚಿವ ಮಹಾದೇವಪ್ಪ

Last Updated : Jul 29, 2023, 8:54 PM IST

ABOUT THE AUTHOR

...view details