ಕರ್ನಾಟಕ

karnataka

ಶಿಕ್ಷಕನ ಮೇಲೆ ಮಂಗನ ದಾಳಿ..ಕೋತಿ  ಸೆರೆ ಹಿಡಿಯುವಂತೆ ಗ್ರಾಮಸ್ಥರ ಆಗ್ರಹ

By

Published : Jun 29, 2019, 2:26 PM IST

ಸುಮಾರು ದಿನಗಳಿಂದ ಈ ಕೋತಿ ನೀರಲಗಿ ಹಾಗೂ ಮತ್ತೂರು ಗ್ರಾಮದ ಜನರಿಗೆ ಉಪಟಳ ನೀಡಿದೆ. ಅಲ್ಲದೆ‌, ಸುಮಾರು 10 ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆಯಂತೆ.

ಶಿಕ್ಷಕನ ಮೇಲೆ ಕೋತಿ ದಾಳಿ

ಕೊಪ್ಪಳ: ತಾಲೂಕಿನ ಮತ್ತೂರು ಹಾಗೂ ನೀರಲಗಿ ಗ್ರಾಮಗಳಲ್ಲಿ ಕೋತಿಯೊಂದರ ಉಪಟಳ ಹೆಚ್ಚಾಗಿದ್ದು, ಇಂದು ಶಿಕ್ಷಕರೊಬ್ಬರ ಮೇಲೆ ಕೋತಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ.

ನೀರಲಗಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ರಾಮಚಂದ್ರಗೌಡ ಬಿ. ಗೊಂಡಬಾಳ ಎಂಬುವವರ ಮೇಲೆ ಕೋತಿ ಅಟ್ಯಾಕ್ ಮಾಡಿ ಗಾಯಗೊಳಿಸಿದೆ. ಸುಮಾರು ದಿನಗಳಿಂದ ಈ ಕೋತಿ ನೀರಲಗಿ ಹಾಗೂ ಮತ್ತೂರು ಗ್ರಾಮದ ಜನರಿಗೆ ಉಪಟಳ ನೀಡಿದೆ. ಅಲ್ಲದೆ‌, ಸುಮಾರು 10ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆಯಂತೆ.

ಶಿಕ್ಷಕನ ಮೇಲೆ ಕೋತಿ ದಾಳಿ

ಇಂದು ನೀರಲಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಂಪೌಂಡ್ ಮೇಲೆ ಕುಳಿತಿದ್ದ ಕೋತಿ ಶಿಕ್ಷಕ ರಾಮಚಂದ್ರಗೌಡ ಅವರ ಮೇಲೆ ದಾಳಿ‌ ಮಾಡಿ ಕಚ್ಚಿ ಗಾಯಗೊಳಿಸಿದೆ. ಈ ಕೋತಿಗೆ ಹುಚ್ಚು ಹಿಡಿದಿರಬಹುದು ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆಯವರು ಇತ್ತ ಗಮನ ಹರಿಸಿ ಈ ಕೋತಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Intro:Body:ಕೊಪ್ಪಳ:- ತಾಲೂಕಿನ ಮತ್ತೂರು ಹಾಗೂ ನೀರಲಗಿ ಗ್ರಾಮಗಳಲ್ಲಿ ಕೋತಿಯೊಂದರ ಉಪಟಳ ಹೆಚ್ಚಾಗಿದ್ದು ಇಂದು ಶಿಕ್ಷಕರೊಬ್ಬರ ಮೇಲೆ ಕೋತಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ. ನೀರಲಗಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ರಾಮಚಂದ್ರಗೌಡ ಬಿ. ಗೊಂಡಬಾಳ ಎಂಬುವವರ ಮೇಲೆ ವಾನರ ಅಟ್ಯಾಕ್ ಮಾಡಿ ಗಾಯಗೊಳಿಸಿದೆ. ಸುಮಾರು ದಿನಗಳಿಂದ ಈ ಕೋತಿ ನೀರಲಗಿ ಹಾಗೂ ಮತ್ತೂರು ಗ್ರಾಮದ ಜನರಿಗೆ ಉಪಟಳ ನೀಡಿದೆ. ಅಲ್ಲದೆ‌, ಸುಮಾರು ೧೦ ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆಯಂತೆ. ಇಂದು ನೀರಲಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಂಪೌಂಡ್ ಮೇಲೆ ಕುಳಿತಿದ್ದ ಕೋತಿ ಶಿಕ್ಷಕ ರಾಮಚಂದ್ರಗೌಡ ಅವರ ಮೇಲೆ ದಾಳಿ‌ ಮಾಡಿ ಕಚ್ಚಿ ಗಾಯಗೊಳಿಸಿದೆ. ಈ ಕೋತಿಗೆ ಹುಚ್ಚು ಹಿಡಿದಿರಬಹುದು ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆಯವರು ಇತ್ತ ಗಮನ ಹರಿಸಿ ಈ ಕೋತಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.Conclusion:

TAGGED:

ABOUT THE AUTHOR

...view details