ಕರ್ನಾಟಕ

karnataka

ಬೇರೆ ಪಕ್ಷದವರು ನಮ್ಮ ತತ್ವ ಸಿದ್ಧಾಂತ ಒಪ್ಪಿ ಕಾಂಗ್ರೆಸ್​ಗೆ ಬರಬಹುದು: ಸಚಿವ ಶಿವರಾಜ ತಂಗಡಗಿ ಆಹ್ವಾನ

By ETV Bharat Karnataka Team

Published : Aug 23, 2023, 5:57 PM IST

ನಾವು ಯಾವುದೇ ಆಪರೇಷನ್ ಮಾಡೋದಿಲ್ಲ. ನಮ್ಮ ತತ್ವ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರಬಹುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

minister-shivraj-invited-other-party-leaders-to-congress
ಬೇರೆ ಪಕ್ಷದವರು ನಮ್ಮ ತತ್ವ ಸಿದ್ಧಾಂತ ಒಪ್ಪಿ ಕಾಂಗ್ರೆಸ್​ಗೆ ಬರಬಹುದು: ಸಚಿವ ಶಿವರಾಜ ತಂಗಡಗಿ ಆಹ್ವಾನ

ಸಚಿವ ಶಿವರಾಜ ತಂಗಡಗಿ

ಗಂಗಾವತಿ (ಕೊಪ್ಪಳ): "ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಯಾರಿಗೆ ಯಾವ ಸ್ಥಾನ ಕೊಡಬೇಕು ಎಂಬುದನ್ನು ಹೈಕಮಾಂಡ್​ ತೀರ್ಮಾನ ಮಾಡುತ್ತದೆ" ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು. ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಮುನ್ನೆಲೆಗೆ ಬಂದಿದಿರುವ ಬಗ್ಗೆ ಗಂಗಾವತಿಯುಲ್ಲಿ ಮಾತನಾಡಿದ ಅವರು, "ಸದ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ನನ್ನ ಅನಿಸಿಕೆ ಪ್ರಕಾರ ಇನ್ನು 15 ರಿಂದ20 ವರ್ಷ ಕಾಂಗ್ರೆಸ್​ ಅಧಿಕಾರದಲ್ಲಿರುತ್ತದೆ" ಎಂದರು.

ನಾವು ಕಾಂಗ್ರೆಸ್​ ಶಾಸಕರಿಗೆ ಗಾಳ ಹಾಕುತ್ತಿದ್ದೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಬಿಜೆಪಿಯವರಿಗೆ ಗಾಳನೇ ಇಲ್ಲ. ಮೀನು ಹೇಗೆ ಬೀಳುತ್ತದೆ. ಬಿಜೆಪಿಯವರು ಆಪರೇಷನ್ ಮಾಡಿಯೇ ಆಡಳಿತ ನಡೆಸಿದ್ದಾರೆ. ಮೊನ್ನೆ ಆಪರೇಷನ್​ ಮಾಡಿ ಕತ್ತರಿಯನ್ನು ಹೊಟ್ಟೆಯಲ್ಲಿ ಇಟ್ಟು ಹೊಲಿಗೆ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು. ನಾವು ಯಾವುದೇ ಆಪರೇಷನ್ ಮಾಡೋದಿಲ್ಲ. ಅವರು ನಮ್ಮ ತತ್ವ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರಬಹುದು" ಎಂದು ಆಹ್ವಾನಿಸಿದರು.

"ನಾವು 136 ಮಂದಿ ಇದ್ದೇವೆ. ನಮಗೆ ಶಾಸಕರ ಕೊರತೆ ಇಲ್ಲ. ಅವರು ನಮ್ಮ ತತ್ವ ಸಿದ್ಧಾಂತ ಮತ್ತು ನಾವು ಐದು ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದಿದ್ದೆವು, ಅದರಂತೆ ಈಗಾಗಲೇ ಮೂರು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಇದೇ ತಿಂಗಳ 30ರಂದು ನಾಲ್ಕನೇ ಗ್ಯಾರಂಟಿ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್​ ಮಯವಾಗಲಿದೆ. ಬಿಜೆಪಿಯಲ್ಲಿದ್ದರೇ ಸೋಲುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಅವರೆಲ್ಲ ಕಾಂಗ್ರೆಸ್​ಗೆ ಬರಲು ಬಯಸಿದ್ದಾರೆ" ಎಂದು ಹೇಳಿದರು.

ಅನುದಾನ ಕೊರತೆಯ ಬಗ್ಗೆ ಮಾತನಾಡಿ, "ಯಾವುದೇ ಅನುದಾನ ಕೊರತೆಯಾಗಿಲ್ಲ. ಈಗಾಗಲೇ 55ಲಕ್ಷ ರೂ. ಶಾಸಕರಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಮತ್ತು ಇಲಾಖೆಗಳಿಗೆ ಅನುದಾನ ನೀಡಿದ್ದಾರೆ" ಎಂದು ಸ್ಪಷ್ಟನೆ ನೀಡಿದರು. "ಹೊಸ ಸರ್ಕಾರ ರಚನೆಯಾಗಿ ಮೂರು ತಿಂಗಳಾಯ್ತು. ಇವರ ಯೋಗ್ಯತೆಗೆ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ. ಇವರು ಅಪರೇಷನ್​ ಮಾಡುತ್ತರಾ?" ಎಂದು ತಂಗಡಗಿ ಪ್ರಶ್ನಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂಬ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ," ಅವರು ಹೇಳಿರುವುದು ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನೆನಪು ಮಾಡಿ, ಕಾಂಗ್ರೆಸ್​ನವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂಬರ್ಥದಲ್ಲಿ ಹೇಳಿದ್ದಾರೆ" ಎಂದು ಸಮರ್ಥನೆ ಮಾಡಿಕೊಂಡರು.

ಇದನ್ನೂ ಓದಿ:ನಮ್ಮ ಪಕ್ಷದವರು ಆಪರೇಷನ್ ಹಸ್ತ ಮಾಡುತ್ತಿಲ್ಲ: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ

ಅಪರೇಷನ್ ಹಸ್ತಕ್ಕೆ ನವರಂಗಿ ಆಟ ಎಂಬ ಸಿ ಟಿ ರವಿ ಹೇಳಿಕೆ ಬಗ್ಗೆ ನಿನ್ನೆ ಮಾತನಾಡಿದ್ದ ಸಚಿವ ಶಿವರಾಜ್ ತಂಗಡಗಿ, "ಇವರು ಹಿಂದೆ ಅಪರೇಷನ್ ಮಾಡಿದ್ದರಲ್ಲವಾ? ಆಗ ನಾಚಿಕೆ, ನವರಂಗಿ ಆಟ ಕಾಣಲಿಲ್ಲವಾ? ಈಗ ನವರಂಗಿ ಆಟ ಕಾಣುತ್ತಿದೆಯಾ'' ಎಂದು ಪ್ರಶ್ನಿಸಿದ್ದರು. ''ನಮಗೆ ಸರ್ಕಾರ ಬೀಳುತ್ತೆಂಬ ಚಿಂತೆ ಇಲ್ಲ. ಅಲ್ಲಿರೋ ಶಾಸಕರೇ ನಮ್ಮಲ್ಲಿ ಬರುತ್ತಿದ್ದಾರೆ. ಬಿಜೆಪಿಯಲ್ಲಿದ್ದರೆ ಮುಂದೆ ಏನೂ ಆಗುವುದಿಲ್ಲ ಎಂಬುದು ತಿಳಿದಿದೆ. ಅದಕ್ಕಾಗಿ ನಮ್ಮ ತತ್ವ, ಸಿದ್ಧಾಂತ ಒಪ್ಪಿ ಬರುತ್ತಿದ್ದಾರೆ. ಎಷ್ಟು ಜನ ಬರುತ್ತಿದ್ದಾರೆ ಗೊತ್ತಿಲ್ಲ. ಅವರು ಬರುವಾಗ ಮಾಧ್ಯಮಗಳಿಗೆ ಹೇಳಿ ಕರೆದುಕೊಳ್ಳುತ್ತೇವೆ'' ಎಂದಿದ್ದರು.

ABOUT THE AUTHOR

...view details