ಕರ್ನಾಟಕ

karnataka

ತಹಶೀಲ್ದಾರ್ ಹುದ್ದೆಯಿಂದ ಬಿಡುಗಡೆಯಾದ ಐಎಎಸ್ ಅಧಿಕಾರಿ: ರೇಣುಕಾ ಪ್ರಭಾರ

By

Published : Feb 13, 2021, 1:12 PM IST

ಆರು ವಾರದ ಕಾಲಾವಧಿ ಮುಗಿದ ಹಿನ್ನೆಲೆ ತಹಶೀಲ್ದಾರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ವರ್ಣಿತ್​ ನೆಗೀ ಅವರನ್ನು ಬಿಡುಗಡೆಗೊಳಿಸಲಾಗಿದೆ.

IAS officer relived from gangavathi tahasildhar position
ತಹಸೀಲ್ದಾರ್ ಹುದ್ದೆಯಿಂದ ಬಿಡುಗಡೆಯಾದ ಐಎಎಸ್ ಅಧಿಕಾರಿ

ಗಂಗಾವತಿ: ತಹಶೀಲ್ದಾರ್ ಹುದ್ದೆಯಲ್ಲಿ ಕಳೆದ ಆರು ವಾರಗಳಿಂದ ಸ್ವತಂತ್ರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ವರ್ಣಿತ್​ ನೆಗೀ, ಇದೀಗ ಬಿಡುಗಡೆಯಾಗಿದ್ದಾರೆ.

ತಹಸೀಲ್ದಾರ್ ಹುದ್ದೆಯಿಂದ ಬಿಡುಗಡೆಯಾದ ಐಎಎಸ್ ಅಧಿಕಾರಿ
ಅಧಿಕಾರ ವಹಿಸಿಕೊಂಡ ದಿನದಿಂದಲೇ ಕಟ್ಟುನಿಟ್ಟಾದ ತಮ್ಮ ಆಡಳಿತದಿಂದಾಗಿ ಗಮನ ಸೆಳೆದಿದ್ದ ಅಧಿಕಾರಿ, ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಿದ್ದರು. ಮರಳು ಸಾಗಣೆದಾರರಿಂದ ಹಣ ಸ್ವೀಕರಿಸುವಾಗ ಸಿಕ್ಕುಬಿದ್ದಿದ್ದ ಹಾಲಿ ತಹಶೀಲ್ದಾರ್ ರೇಣುಕಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ ವರ್ಣಿತ್ ಅವರನ್ನು ತಹಶೀಲ್ದಾರ್ ಹುದ್ದೆಯಲ್ಲಿ ಸ್ವತಂತ್ರ ಕಾರ್ಯಭಾರದ ಮೇಲೆ ಜಿಲ್ಲಾಧಿಕಾರಿ ಫೆ.13ರಂದು ನಿಯೋಜಿಸಿದ್ದರು.
ತಹಸೀಲ್ದಾರ್ ಹುದ್ದೆಯಿಂದ ಬಿಡುಗಡೆಯಾದ ಐಎಎಸ್ ಅಧಿಕಾರಿ

ಆರು ವಾರದ ಕಾಲಾವಧಿ ಮುಗಿದ ಹಿನ್ನೆಲೆ ಅಧಿಕಾರಿಗೆ, ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ನೇತೃತ್ವದಲ್ಲಿನ ಕಂದಾಯ ಸಿಬ್ಬಂದಿ ಬೀಳ್ಕೊಟ್ಟರು. ಹಾಲಿ ತಹಶೀಲ್ದಾರ್ ಹುದ್ದೆಯಲ್ಲಿ ಎಂ. ರೇಣುಕಾ ಅವರನ್ನು ಪ್ರಭಾರ ಅಧಿಕಾರವಹಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ಇದನ್ನೂ ಓದಿ:ಗಲ್ವಾನ್ ಕಣಿವೆಗೆ ಭೇಟಿ ನೀಡಲಿರುವ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿ

ABOUT THE AUTHOR

...view details