ಕರ್ನಾಟಕ

karnataka

ಮಸಣದಲ್ಲಿ ಬಯಲು ರಂಗಮಂದಿರ: ಪೌರಾಯುಕ್ತರ ಭೇಟಿ, ಪರಿಶೀಲನೆ

By

Published : Apr 3, 2021, 12:37 PM IST

ರುದ್ರಭೂಮಿಯಲ್ಲಿ ರಂಗ ಮಂದಿರ ನಿರ್ಮಾಣ ಮಾಡುವ ಮೂಲಕ ನಗರಸಭೆ ಸರ್ಕಾರದ ಲಕ್ಷಾಂತರ ರೂ. ಮೊತ್ತವನ್ನು ವ್ಯರ್ಥ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಇಂದು ನಗರಸಭೆ ಪೌರಾಯುಕ್ತ ಅರವಿಂದ್ ಜಮಖಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಸಣದ ಬಯಲು ರಂಗಮಂದಿರಕ್ಕೆ ಪೌರಾಯುಕ್ತ ಭೇಟಿ, ಪರಿಶೀಲನೆ
Gangavathi Municipal Council visits open theater

ಗಂಗಾವತಿ: ನಗರಸಭೆ ಅನುದಾನ ದುರುಪಯೋಗ ಮಾಡಿಕೊಂಡು ರುದ್ರಭೂಮಿಯಲ್ಲಿ ಬಯಲು ರಂಗಮಂದಿರ ನಿರ್ಮಾಣವಾಗಿದೆ. ಈ ವಿಷಯ ತಿಳಿದ ಕೂಡಲೇ ನಗರಸಭೆ ಪೌರಾಯುಕ್ತ ಅರವಿಂದ್ ಜಮಖಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಪ್ಪಳ ಜಿಲ್ಲಾ ಕಲಾವಿದರ ಸಂಘ ಜಿಲ್ಲಾಧ್ಯಕ್ಷರ ಹೇಳಿಕೆ

ಈ ಕುರಿತಂತೆ ಈಟಿವಿ ಭಾರತ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ನಗರಸಭೆ ಪೌರಾಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಮಾತನಾಡಿದ ಅವರು, ಯುವ ಕಲಾವಿದರು ಮತ್ತು ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಬಳಕೆಯಾಗಬೇಕಿದ್ದ ಅನುದಾನ ಮತ್ತು ಕಟ್ಟಡ ಇಲ್ಲಿ ಏಕೆ ನಿರ್ಮಾಣ ಮಾಡಿದ್ದಾರೆ ಎಂಬುವುದು ಮೇಲ್ನೋಟಕ್ಕೆ ಗೊತ್ತಾಗಿಲ್ಲ. ಈ ಬಗ್ಗೆ ಕಡತ ತೆಗೆಯಿಸಿ ಪರಿಶೀಲಿಸಲಾಗುವುದು ಎಂದರು.

ಓದಿ: ಮಸಣದಲ್ಲಿ ಬಯಲು ರಂಗಮಂದಿರ ನಿರ್ಮಾಣ: ಅಧಿಕಾರಿಗಳ ವಿರುದ್ಧ ಕಲಾವಿದರ ಆಕ್ರೋಶ

ಒಂದೊಮ್ಮೆ ಚಲುವಾದಿ ಸಮಾಜದವರು ಅಂತ್ಯ ಸಂಸ್ಕಾರಕ್ಕೆ ಇಲ್ಲಿಗೆ ಬಂದಾಗ ಅವರಿಗೆ ನೆರಳಿರಲಿ ಎಂಬ ಕಾರಣಕ್ಕೆ ನಿರ್ಮಾಣ ಮಾಡಿದ್ದಿರಬಹುದು. ಆದರೆ, ಅದು ಅನುದಾನ ಸದ್ಬಳಿಕೆಯ ಸರಿಯಾದ ದಾರಿ ಅಲ್ಲ. ಮಸಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಕಷ್ಟು ಅನುದಾನವಿದೆ. ಆದರೆ, ಹದಿನಾಲ್ಕನೇ ಹಣಕಾಸಿನಲ್ಲಿ ಬಳಕೆಯಾಗಿರುವ ಕುರಿತಂತೆ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ABOUT THE AUTHOR

...view details