ಕರ್ನಾಟಕ

karnataka

ETV Bharat / state

ಗಾಳಿಯಲ್ಲಿ ಗೆದ್ದು ಬಂದಿರುವುದು ಯಾರೆಂದು ತಿಳಿಯಲು ಚುನಾವಣೆಗೆ ನಿಲ್ಲೋಣ: ಮುನಿಸ್ವಾಮಿ ತಿರುಗೇಟು

ಗಾಳಿಯಲ್ಲಿ ಗೆದ್ದು ಬಂದಿರುವುದು ನಾನಾ, ಅವರಾ ಎಂದು ಗೊತ್ತಾಗಬೇಕಿದ್ದರೆ, ಶಾಸಕ‌ ಸ್ಥಾನಕ್ಕೆ ರಾಜೀನಾಮೆ‌ ನೀಡಿ ಚುನಾವಣೆಗೆ ನಿಲ್ಲಲಿ. ನಾನು ಕೂಡ ರಾಜೀನಾಮೆ ನೀಡಿ‌ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ವೈ. ನಂಜೇಗೌಡ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

S Muniswami outrage against KY Nanjegowda
ಗಾಳಿಯಲ್ಲಿ ಗೆದ್ದು ಬಂದಿರುವುದು ಯಾರೆಂದು ತಿಳಿಯಲು ಚುನಾವಣೆಗೆ ನಿಲ್ಲೋಣ: ಮುನಿಸ್ವಾಮಿ ತಿರುಗೇಟು

By

Published : May 27, 2020, 5:51 PM IST

ಕೋಲಾರ: ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಆರೋಪಕ್ಕೆ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ.

ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ, ಗಾಳಿಯಲ್ಲಿ ಗೆದ್ದು ಬಂದಿರುವುದು ನಾನಾ, ಅವರಾ ಎಂದು ಗೊತ್ತಾಗಬೇಕಿದ್ದರೆ, ಶಾಸಕ‌ ಸ್ಥಾನಕ್ಕೆ ರಾಜೀನಾಮೆ‌ ನೀಡಿ ಚುನಾವಣೆಗೆ ನಿಲ್ಲಲಿ. ನಾನು ಕೂಡ ರಾಜೀನಾಮೆ ನೀಡಿ‌ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.

ಅಲ್ಲದೇ ಮೋದಿ ಅವರ ಅಡಳಿತ‌ ಹಾಗೂ ಹಿಂದಿನ ಎಂಪಿ ಅವರ ದುರಾಡಳಿತ ನೋಡಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ ಹೊರತು, ಮಾಲೂರು ಶಾಸಕರ ರೀತಿ ಗಾಳಿಗೆ ಗೆದ್ದು ಬಂದಿಲ್ಲ ಎಂದು ಹೇಳಿದರು.

ಸಂಸದ ಎಸ್.ಮುನಿಸ್ವಾಮಿ ಹೇಳಿಕೆ

ಮಾಲೂರು ಶಾಸಕರು ಅಕ್ರಮ ಕ್ರಷರ್​​ಗಳಿಂದ ಕೋಲಾರದ ಸಂಪತ್ತನ್ನ ಲೂಟಿ ಹೊಡೆದಿದ್ದಾರೆ. ಜೊತೆಗೆ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಟ್ಯಾಕ್ಸ್ ಕಟ್ಟದೆ ಮೋಸ ಮಾಡಿದ್ದಾರೆ. ನಾನು ಯಾವುದೇ ಒಬ್ಬ ಅಧಿಕಾರಿಯನ್ನು ಬ್ಲ್ಯಾಕ್‌ಮೇಲ್ ಮಾಡಿರುವುದು ರುಜುವಾತು ಮಾಡಿದರೆ, ಈಗಲೇ‌ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲೆಸಿದರು.

ಕಳ್ಳತನದಿಂದ ಅಕ್ರಮ ಕ್ರಷರ್​ಗಳನ್ನು ನಡೆಸುತ್ತಿದ್ದು, ಈಗಾಗಲೇ ಅಂತಹ ಕ್ರಷರ್​ಗಳ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಲಾಗಿದೆ. ಜೊತೆಗೆ ಅಕ್ರಮ‌ ಕ್ರಷರ್​ಗಳ ಕುರಿತು ಮೈನಿಂಗ್ ಮಿನಿಸ್ಟರ್ ಅವರ ಗಮನಕ್ಕೆ ತಂದಿದ್ದೇನೆಂದು ತಿಳಿಸಿದರು.

ABOUT THE AUTHOR

...view details