ಕರ್ನಾಟಕ

karnataka

ಕೋಲಾರ: ಸಾರಿಗೆ ನೌಕರರ ಮೇಲೆ ಲಾಠಿಚಾರ್ಜ್, ಪೊಲೀಸರ ಕ್ರಮಕ್ಕೆ ಆಕ್ರೋಶ

By

Published : Apr 20, 2021, 5:06 PM IST

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು, ಕೋಲಾರ ಹೊರವಲಯದ ಸಂಗೊಂಡಹಳ್ಳಿ ಬಳಿ ಜೈಲ್ ಭರೋ ಚಳವಳಿ ನಡೆಸುತ್ತಿದ್ದರು. ಈ ವೇಳೆ ಗ್ರಾಮಾಂತರ ಠಾಣಾ ಪೊಲೀಸರು ಸಾರಿಗೆ ನೌಕರರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು.

police action on transport employees in kolar
ಸಾರಿಗೆ ನೌಕರರ ಮೇಲೆ ಲಾಠಿ ಚಾರ್ಜ್!

ಕೋಲಾರ: ಪ್ರತಿಭಟನಾನಿರತ ಸಾರಿಗೆ ನೌಕರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರದ ಗ್ರಾಮಾಂತರ ಪೊಲೀಸ್ ಠಾಣಾ ಎದುರು ಪ್ರತಿಭಟನಾನಿರತ ಸಾರಿಗೆ ನೌಕರರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ.

ಸಾರಿಗೆ ನೌಕರರ ಮೇಲೆ ಲಾಠಿಚಾರ್ಜ್

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಕೋಲಾರ ಹೊರವಲಯದ ಸಂಗೊಂಡಹಳ್ಳಿ ಬಳಿ ಜೈಲ್ ಭರೋ ಚಳವಳಿಯನ್ನು ನಡೆಸುತ್ತಿದ್ದರು. ಈ ವೇಳೆ ಗ್ರಾಮಾಂತರ ಠಾಣಾ ಪೊಲೀಸರು ಸಾರಿಗೆ ನೌಕರರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೈಲ್ ಭರೋ ಚಳವಳಿಯನ್ನು ನಡೆಸುತ್ತಿದ್ದ ಸಾರಿಗೆ ನೌಕರರನ್ನು ವಿನಾ ಕಾರಣ ಪೊಲೀಸರು ಬಂಧಿಸಿದ್ದಾರೆಂದು ಆರೋಪಿಸಿ, ನೌಕರರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ರು.

ಇದನ್ನೂ ಓದಿ:ವಾಣಿಜ್ಯ ನಗರಿಯಲ್ಲಿ ‌ಕ್ರೀಡಾಂಗಣಗಳ ಕೊರತೆ!

ಪೊಲೀಸರ ಕ್ರಮ ಖಂಡಿಸಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಮುತ್ತಿಗೆ ಹಾಕಿದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಸಾರಿಗೆ ನೌಕರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಜತೆಗೆ ಕೆಲ ಸಾರಿಗೆ ನೌಕರರನ್ನು ಪೊಲೀಸರು ಅಟ್ಟಾಡಿಸಿ ಹೊಡೆದಿದ್ದು, ಸಾರಿಗೆ ನೌಕರರು, ಪೊಲೀಸರ ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details