ಕರ್ನಾಟಕ

karnataka

ಗುಜರಾತ್​ನ ಗೋದ್ರಾದಿಂದ ಕೋಲಾರಕ್ಕೆ ಬಂದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್​..

By

Published : May 7, 2020, 3:53 PM IST

ಕಳೆದ ರಾತ್ರಿ ದೇವನಹಳ್ಳಿಯ ಅಧಿಕಾರಿಗಳು ಯಾವುದೇ ಅನುಮತಿ ಇಲ್ಲದೆ ಕೋಲಾರ ಜಿಲ್ಲೆಗೆ ಕಳುಹಿಸಿದ್ದಾರೆ. ಈ ಹಿನ್ನೆಲೆ ಮಾಲೂರಿನ ಗಡಿಯ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ನಡೆಸಲಾಗಿತ್ತು.

ಕೋಲಾರ :ಕಳೆದ ರಾತ್ರಿ ಗುಜರಾತ್​ನ ಗೋದ್ರಾದಿಂದ ಬಂದ 15 ಜನರನ್ನ ಕೋಲಾರ‌ ಜಿಲ್ಲೆ ಮಾಲೂರು ತಾಲೂಕಿನ ಕಟ್ಟಿಗೇನಹಳ್ಳಿ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. 15 ಜನರನ್ನ ರ್ಯಾಪಿಡ್ ಪರೀಕ್ಷೆಗೊಳಪಡಿಸಿದ ವೇಳೆ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಸತ್ಯಭಾಮ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಇನ್ನುಳಿದ 15 ಜನರನ್ನ ಜಿಲ್ಲೆಗೆ ಬರಮಾಡಿಕೊಳ್ಳದೆ, ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಗುಜರಾತ್​ನ ಗೋದ್ರಾದಿಂದ ದೇವನಹಳ್ಳಿ ಹಾಗೂ ಆಂಧ್ರ ಮೂಲದ ನಿವಾಸಿಗಳೊಂದಿಗೆ ಬಸ್​ನಲ್ಲಿ ದೇವನಹಳ್ಳಿಗೆ ಬಂದಿದ್ದಾರೆ. ಕಳೆದ ರಾತ್ರಿ ದೇವನಹಳ್ಳಿಯ ಅಧಿಕಾರಿಗಳು ಯಾವುದೇ ಅನುಮತಿ ಇಲ್ಲದೆ ಕೋಲಾರ ಜಿಲ್ಲೆಗೆ ಕಳುಹಿಸಿದ್ದಾರೆ. ಈ ಹಿನ್ನೆಲೆ ಮಾಲೂರಿನ ಗಡಿಯ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಓರ್ವನಿಗೆ ಪಾಸಿಟಿವ್‌ ಕಂಡು ಬಂದ ಹಿನ್ನೆಲೆ ಹೆಚ್ಚಿನ ತಪಾಸಣೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಕೋಲಾರದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಅನುಮತಿ ಇಲ್ಲದೆ ಇವರನ್ನು ಜಿಲ್ಲೆಗೆ ಕಳುಹಿಸುತ್ತಿದ್ದ ಸಂಭಂಧಪಟ್ಟ ಅಧಿಕಾರಿಗಳ‌ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ನಾಗೇಶ್ ಕಿಡಿಕಾರಿದ್ದಾರೆ.

ABOUT THE AUTHOR

...view details