ಕರ್ನಾಟಕ

karnataka

ವಿಷ ಸೇವಿಸಿ ಆಂಧ್ರ ಮೂಲದ ಇಬ್ಬರು ಪ್ರೇಮಿಗಳು ಆತ್ಮಹತ್ಯೆ..

By

Published : Sep 16, 2019, 5:52 PM IST

ಇಂದು ಜಿಲ್ಲೆಯ ಕೆಜಿಎಫ್ ತಾಲೂಕಿನ ಐಪನಹಳ್ಳಿ ಗ್ರಾಮದ ಕೆರೆಯಲ್ಲಿಆಂಧ್ರ ಮೂಲದ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

Lovers committed suicide

ಕೋಲಾರ:ವಿಷ ಸೇವಿಸಿ ಆಂಧ್ರ ಮೂಲದ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟ‌ನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಐಪನಹಳ್ಳಿ ಗ್ರಾಮದ ಕೆರೆಯಲ್ಲಿ ಘಟನೆ ಜರುಗಿದೆ.

ವಿಷ ಸೇವಿಸಿ ಆಂಧ್ರ ಮೂಲದ ಇಬ್ಬರು ಪ್ರೇಮಿಗಳು ಆತ್ಮಹತ್ಯೆ..

ಆಂಧ್ರದ ವಿಕೋಟೆಯ ಗಸ್ತನಪಲ್ಲಿ ಗ್ರಾಮದ ನೀಲಕಂಠ (32), ಚಲ್ಲಪಲ್ಲಿ ಗ್ರಾಮದ ಲಲಿತ (28) ಮೃತರು. ಇಬ್ಬರಿಗೂ ಬೇರೆಯರ ಜೊತೆ ಮದುವೆಯಾಗಿತ್ತು. ಆದರೂ ಇವರಿಬ್ಬರೂ ಸಹ ಜೀವನ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಆಂಧ್ರದಿಂದ ಬೈಕ್​​ನಲ್ಲಿ ಐಪನಹಳ್ಳಿ ಕೆರೆ ಬಳಿ ಬಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧ ಬೇತಮಂಗಲ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details