ಕರ್ನಾಟಕ

karnataka

ಮೂರು ಸಾವಿರಕ್ಕೂ ಹೆಚ್ಚು ಮಠಗಳು ಬಿಎಸ್​ವೈ ಅವರನ್ನು ಉಳಿಸಿಕೊಳ್ತವೆ: ಸಿಎಂ ಪರ ಮಠಾಧೀಶರ ಬ್ಯಾಟಿಂಗ್​

By

Published : Jul 20, 2021, 5:22 PM IST

ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತೆ ಎಂದು ಹೇಳಿಕೊಂಡು ಬಂದಿರುವ ವಿಜಯಪುರ ಶಾಸಕ ಯತ್ನಾಳ್​​ಗೆ ಸ್ವಾಮೀಜಿಗಳು ಎಚ್ಚರಿಕೆ ಕೊಟ್ಟಿದ್ದಾರೆ. ಮೊದಲು ರಾಜ್ಯವನ್ನು ಸುತ್ತಿ ಜನರ ನಾಡಿಮಿಡಿತ ಅರಿತುಕೊಳ್ಳಿ. ನಂತರ ‌ನೀವು ಸಿಎಂ ಆಗಬಹುದು ಎಂದಿದ್ದಾರೆ. ಅಲ್ಲದೆ, ಬಿಎಸ್​ವೈ ಪರ ಬ್ಯಾಟಿಂಗ್​ ಮಾಡಿದ್ದಾರೆ.

kolar-swamijis-backed-cm-bsy
ಮೂರು ಸಾವಿರಕ್ಕೂ ಹೆಚ್ಚು ಮಠಗಳು ಬಿಎಸ್​ವೈ ಅವರನ್ನು ಉಳಿಸಿಕೊಳ್ತವೆ: ಸಿಎಂ ಪರ ಮಠಾಧೀಶರ ಬ್ಯಾಟಿಂಗ್​

ಕೋಲಾರ: ಸಿಎಂ‌ ಬದಲಾವಣೆ ವಿಚಾರ ಹಿನ್ನೆಲೆ ಮುನ್ನೆಲೆಗೆ ಬರುತ್ತಿದ್ದಂತೆ ಕೋಲಾರದಲ್ಲಿ ಮಠಾಧೀಶರುಗಳು ಸಭೆ ನಡೆಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೆಂಬಲ ಸೂಚಿಸಿ, ಶಾಸಕ ಯತ್ನಾಳ್​ ವಿರುದ್ಧ ಗುಡುಗಿದ್ದಾರೆ.

ತಾಲೂಕಿನ ನಾಗಲಾಪುರ ಮಠದಲ್ಲಿ ಬೆಳ್ಳಾವಿ ಮಠದ ಮಹಾಂತಲಿಂಗೇಶ್ವರ ಸ್ವಾಮೀಜಿ ಹಾಗೂ ನಾಗಲಾಪುರ ಸಂಸ್ಥಾನದ ಮಠಾಧೀಶರಾದ ತೇಜೇಶ‌ಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಭೆ ಸೇರಿದ್ದು, ಎಲ್ಲರೂ ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ. ಮುಂದಿನ ಎರಡೂವರೆ ವರ್ಷಗಳ ಕಾಲ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಬದಲಾವಣೆ ಮಾಡಿದ್ದೇ ಆದಲ್ಲಿ 3000ಕ್ಕೂ ಹೆಚ್ಚು ಮಠಗಳು ಬಿಎಸ್​ವೈ ಅವರನ್ನು ಉಳಿಸಿಕೊಳ್ಳಲಿ ಎಂಬ ಸಂದೇಶ ರವಾನಿಸಿದ್ದಾರೆ.

ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಯಡಿಯೂರಪ್ಪ ‌ಸಿಎಂ ಆಗಿ ಮುಂದುವರೆಯಬೇಕು. ಸಿಎಂ ಬದಲಾವಣೆ ಆಗಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದರು.

ಇದೇ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​ಗೆ ಎಚ್ಚರಿಕೆ ಕೊಟ್ಟ ಮಹಾಂತಲಿಂಗೇಶ ಸ್ವಾಮೀಜಿ, ಮೊದಲು ರಾಜ್ಯವನ್ನು ಸುತ್ತಿ ಜನರ ನಾಡಿಮಿಡಿತ ಅರಿತುಕೊಳ್ಳಿ. ನಂತರ ‌ನೀವು ಸಿಎಂ ಆಗಬಹುದು ಎಂದು ಹೇಳಿದ್ರು.

ಇದನ್ನೂ ಓದಿ:ಮುಖ್ಯಮಂತ್ರಿ ಬದಲಾದ್ರೇ ನಾವ್‌ ರೆಡಿ, ನಾವ್‌ ರೆಡಿ ಅಂತಾವ್ರೇ ಧಾರವಾಡಿಗರು.. ಪೇಡೆನಗರಿಯ ಸಿಹಿ ಹೆಚ್ಚುತ್ತಾ!?

ಯಡಿಯೂರಪ್ಪರನ್ನು ವಿರೋಧಿಸುವುದು ಮತ್ತು ತಮ್ಮನ್ನು ತಾವು ಸುಟ್ಟುಕೊಳ್ಳುವುದು ಒಂದೇ ಎಂದು ಸಿಎಂ‌ ಬದಲಾವಣೆ ವಿಚಾರವಾಗಿ ಮಠಾಧೀಶರುಗಳು ಅಭಿಪ್ರಾಯಪಟ್ಟರು. ಸಿಎಂ ಬದಲಾವಣೆ ಮಾಡಿದ್ದಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ ಎಂಬ ಎಚ್ಚರಿಕೆ ರವಾನಿಸಿದರು. ಜೊತೆಗೆ ಕೇಂದ್ರ ಸರ್ಕಾರಕ್ಕೆ ರಾಜ್ಯದ 25 ಜನ‌ ಲೋಕಸಭಾ ಸದಸ್ಯರನ್ನು ಕೊಡಲು ಬಿಎಸ್​ವೈ ಕಾರಣವಾಗಿದ್ದು, ಬಿಎಸ್​ವೈ ಮುಂದಿನ ಎರಡೂವರೆ ವರ್ಷ ಅಧಿಕಾರ ನಡೆಸಬೇಕೆಂದು ಮಠಾಧೀಶರು ಒತ್ತಾಯಿಸಿದರು.

ABOUT THE AUTHOR

...view details