ಕರ್ನಾಟಕ

karnataka

ಕ್ಷುಲ್ಲಕ ಕಾರಣಕ್ಕೆ ಮುಳಬಾಗಿಲು ನಗರಸಭೆ ಆಯುಕ್ತನ ಮೇಲೆ ಸದಸ್ಯನಿಂದ ಹಲ್ಲೆ ಆರೋಪ

By

Published : May 6, 2020, 5:23 PM IST

ಕ್ಷುಲ್ಲಕ ಕಾರಣಕ್ಕೆ ಮುಳಬಾಗಿಲು ನಗರಸಭೆಯ ಸದಸ್ಯ ಸೋಮಣ್ಣ, ನಗರಸಭೆ ಅಯುಕ್ತ ಶ್ರೀನಿವಾಸಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

City Council commissioner assaulted
ನಗರ ಸಭೆ ಆಯುಕ್ತನ ಮೇಲೆ ಹಲ್ಲೆ

ಕೋಲಾರ: ಕ್ಷುಲ್ಲಕ ಕಾರಣಕ್ಕೆ ನಗರಸಭೆ ಸದಸ್ಯ, ನಗರಸಭೆ ಆಯುಕ್ತನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ನಗರಸಭೆ ಕಚೇರಿಯಲ್ಲಿ ಈ ಘಟನೆ ಜರುಗಿದ್ದು, ನಗರಸಭೆ ಅಯುಕ್ತ ಶ್ರೀನಿವಾಸಮೂರ್ತಿ ಹಲ್ಲೆಗೊಳಗಾಗಿದ್ದಾರೆ. ಮುಳಬಾಗಿಲು ನಗರಸಭೆಯ ಮೂರನೇ ವಾರ್ಡ್​ನ ಸದಸ್ಯ ಸೋಮಣ್ಣ ಎಂಬುವವರು ಹಲ್ಲೆ ನಡೆಸಿದ್ದು, ವಾರ್ಡ್ ವಿಚಾರವಾಗಿ ಸೋತವರೊಂದಿಗೆ ಚರ್ಚೆ ಮಾಡುವಾಗ ಗಲಾಟೆ ನಡೆದಿದೆ ಎನ್ನಲಾಗಿದೆ.

ನಗರಸಭೆ ಆಯುಕ್ತನ ಮೇಲೆ ಹಲ್ಲೆ

ಇನ್ನು ನಗರಸಭೆ ಆಯುಕ್ತ ಶ್ರೀನಿವಾಸಮೂರ್ತಿ ಮೂರನೇ ವಾರ್ಡ್​ ಕುರಿತಾಗಿ, ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಹಿನ್ನೆಲೆ ವಾರ್ಡ್​ನ ಸದಸ್ಯ ಸೋಮಣ್ಣ ತಮ್ಮ ವಾರ್ಡ್ ಕುರಿತಾಗಿ ಸೋತವರೊಂದಿಗೆ ಏಕೆ ಚರ್ಚೆ ಮಾಡುತ್ತೀರಿ ಎಂದು ನಗರಸಭೆ ಕಚೇರಿಯಲ್ಲಿ ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ನಗರಸಭೆ ಆಯುಕ್ತರ ಮೇಲೆ ಸದಸ್ಯ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಆಯುಕ್ತರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ನಗರಸಭೆ ಕಚೇರಿ ಮುಂದೆ ಪೌರಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ. ಯೋಜನಾ ನಿರ್ದೇಶಕರು ಆಸ್ಪತ್ರೆಗೆ ಭೇಟಿ ನೀಡಿ ಆಯುಕ್ತರನ್ನ ವಿಚಾರಣೆ ನಡೆಸಿದ್ದು, ಪೌರಕಾರ್ಮಿಕರ ಮನವೊಲಿಸಿದ್ದಾರೆ.

ಸದ್ಯ ನಗರಸಭೆ ಆಯುಕ್ತ ಶ್ರೀನಿವಾಸಮೂರ್ತಿ ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಗರಸಭೆ ಸದಸ್ಯನ ವಿರುದ್ಧ ಮುಳಬಾಗಿಲು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ABOUT THE AUTHOR

...view details