ಕರ್ನಾಟಕ

karnataka

ಕೈತಪ್ಪಿದ ಟಿಕೆಟ್​.. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿಜೆಪಿ ಟಿಕೆಟ್​ ಆಕಾಂಕ್ಷಿ ನಿರ್ಧಾರ

By

Published : Apr 13, 2023, 9:16 AM IST

ಬಿಜೆಪಿ ಟಿಕೆಟ್​ ಕೈ ತಪ್ಪಿದ ಹಿನ್ನೆಲೆ ಕೋಲಾರದ ಮಾಲೂರು ಬಿಜೆಪಿ ಟಿಕೆಟ್ ಅಕಾಂಕ್ಷಿಯಾಗಿದ್ದ ಹೂಡಿ ವಿಜಯಕುಮಾರ್ ಬಂಡಾಯವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ​

ಹೂಡಿ ವಿಜಯಕುಮಾರ್
ಹೂಡಿ ವಿಜಯಕುಮಾರ್

ಕೋಲಾರ: ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಪಕ್ಷಕ್ಕೆ ಬಂಡಾಯದ ಆತಂಕ ಎದುರಾಗಿದೆ. ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕೆಲ ಮುಖಂಡರು ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ವಿದಾಯ ಹೇಳಿ ಬಂಡಾಯವಾಗಿ ಸ್ಪರ್ಧೆ ಮಾಡಲು ನಿರ್ಧಾರಿಸಿದ್ದಾರೆ. ಅದರಲ್ಲಿ ಕೋಲಾರದ ಮಾಲೂರು ಬಿಜೆಪಿ ಟಿಕೆಟ್ ಅಕಾಂಕ್ಷಿ ಹೂಡಿ ವಿಜಯಕುಮಾರ್ ಅವರು ಟಿಕೆಟ್‌ ಸಿಗದ ಹಿನ್ನೆಲೆ ಪಕ್ಷಕ್ಕೆ ಗುಡ್​ ಬೈ ಹೇಳಿ ತಮ್ಮ ಬೆಂಬಲಿಗರೊಂದಿಗೆ ಸಭೆ‌ ನಡೆಸಿ ಬಂಡಾಯವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ.

ಮಾಲೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ಗಾಗಿ ಹೂಡಿ ವಿಜಯ್ ಕುಮಾರ್ ಹಾಗೂ ಮಾಜಿ ಶಾಸಕ ಮಂಜುನಾಥಗೌಡ ನಡುವೆ ಪೈಪೋಟಿ​ ಏರ್ಪಟ್ಟಿತ್ತು. ಬಹುತೇಕ ರಾಜ್ಯ ಕೋರ್​ ಕಮಿಟಿ ಸೇರಿದಂತೆ ಎಲ್ಲೆಡೆ ಹೂಡಿ ವಿಜಯ್​ ಕುಮಾರ್ ಅವರಿಗೆ ಟಿಕೆಟ್​ ಘೋಷಣೆ ಆಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಮಾಜಿ ಸಿಎಂ ಯಡಿಯೂರಪ್ಪ ಕೂಡ ಹೂಡಿ ವಿಜಯ್​ ಕುಮಾರ್ ಪರವಾಗಿ ಮಾತುಗಳನ್ನು ಆಡಿದ್ದರು. ಆದರೇ ಹೈಕಮಾಂಡ್ ಬಿಡುಗಡೆ ಮಾಡಿರು ಪಟ್ಟಿಯಲ್ಲಿ ಹೂಡಿ ವಿಜಯಕುಮಾರ್ ಹೆಸರು ಇಲ್ಲದ ಕಾರಣ ಅಸಮಾಧಾನಗೊಂಡ ಕಾರ್ಯಕರ್ತರು ವಿಜಯಕುಮಾರ್ ನಿವಾಸದ ಬಳಿ‌ ಜಮಾಯಿಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕೂವರೆ ವರ್ಷಗಳಿಂದ ಪಕ್ಷ ಸಂಘಟನೆ ಮಾಡುವ ಜೊತೆಗೆ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದ್ದ ಹೂಡಿ ವಿಜಯ್​ ಕುಮಾರ್ ಅವರಿಗೆ ಟಿಕೆಟ್​ ಕೈತಪ್ಪಿದ್ದು, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧವೆಂದು ಕಾರ್ಯಕರ್ತರು ಒಕ್ಕೋರಲಿನಿಂದ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಣ್ಣೀರು‌ ಹಾಕಿದ ಹೂಡಿ‌ ವಿಜಯಕುಮಾರ್ ಮತ್ತು ಪತ್ನಿ ಶ್ವೇತಾ ವಿಜಯಕುಮಾರ್ ಅವರು, ಮನಸ್ಸಿಗೆ ತುಂಬಾ‌ ನೋವುವಾಗಿದೆ, ಕ್ಷೇತ್ರದಲ್ಲಿ ಸಂಘಟನೆ‌ ಜೊತೆಗೆ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲಾಗಿದೆ, ಆದ್ರೆ ಹೈಕಮಾಂಡ್ ನಮ್ಮನ್ನು ಕೈಬಿಟ್ಟಿದ್ದು,‌ ನನ್ನ ನಂಬಿದ‌ ಕಾರ್ಯಕರ್ತರನ್ನು ನಾನು ಕೈ‌ಬಿಡಲ್ಲ, ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸಲು ತಾವು‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.‌ ಇನ್ನು ಇದೇ‌ ಸಂದರ್ಭದಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯ‌ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದರು.

ಇದನ್ನೂ ಓದಿ:ಉತ್ತರ ಕನ್ನಡ: ಕಾಂಗ್ರೆಸ್​ ನಾಯಕರಿಂದ ಬಹಿರಂಗ ಬಂಡಾಯ ಘೋಷಣೆ

ಕಾಂಗ್ರೆಸ್​ನಲ್ಲೂ ಟಿಕೆಟ್​ ವಂಚಿತ ಅಭ್ಯರ್ಥಿಗಳು ಬಂಡಾಯವಾಗಿ ನಿಲ್ಲಲು ತಯಾರಿ..ಮತ್ತೊಂದೆಡೆ ಉತ್ತರಕನ್ನಡದಲ್ಲೂ ಕಾಂಗ್ರೆಸ್ ಟಿಕೆಟ್ ವಂಚಿತ ಅಭ್ಯರ್ಥಿಗಳು ಬಂಡಾಯದ ಬಾವುಟ ಹಾರಿಸಲು ತಯಾರಿ ನಡೆಸಿದ್ದಾರೆ. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಒಂದು ಕ್ಷೇತ್ರವನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ಆದರೆ ಟಿಕೆಟ್ ವಂಚಿತ ಅಭ್ಯರ್ಥಿಗಳು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದಲ್ಲೇ ಉತ್ತರ ಕನ್ನಡ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದ್ದ ಕಾಂಗ್ರೆಸ್, ಎರಡನೇಯ ಪಟ್ಟಿಯಲ್ಲಿ ಮತ್ತಿಬ್ಬರ ಹೆಸರನ್ನು ಪ್ರಕಟಿಸಿತ್ತು. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳ ಹೆಸರು ಘೋಷಣೆ ಆಗದ ಹಿನ್ನೆಲೆ ಬಂಡಾಯವಾಗಿ ನಿಲ್ಲಲು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ:ಸ್ಪೀಕರ್ ಕಾಗೇರಿ ಸೇರಿ 22 ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಿದ ಕಟೀಲ್

ABOUT THE AUTHOR

...view details