ಕರ್ನಾಟಕ

karnataka

ಬಿಲ್ ಕಟ್ಟದ ಸುಂಟಿಕೊಪ್ಪ ಗ್ರಾ.ಪಂಚಾಯಿತಿ: ಚೆಸ್ಕಾಂನಿಂದ ಪವರ್ ಕಟ್, ಜನರ ಪರದಾಟ

By

Published : Nov 17, 2022, 10:08 AM IST

Updated : Nov 17, 2022, 12:55 PM IST

ಈ ಹಿಂದೆಯೇ ಹೇಳಿದಂತೆ, ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ವಿದ್ಯುತ್ ಬಿಲ್ ಪಾವತಿಗಾಗಿ ವಿಶೇಷ ಅನುದಾನ ನೀಡದ ಹೊರತು ಈ ಸಮಸ್ಯೆಗೆ ಪರಿಹಾರ ಇಲ್ಲ ಎಂಬುದು ಗ್ರಾ.ಪಂ ಪಂಚಾಯಿತಿ ಅಭಿಪ್ರಾಯ.

Suntikoppa Grama Panchayithi
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ

ಮಡಿಕೇರಿ: ಕೊಡಗು ಜಿಲ್ಲೆಯ ಸುಂಟಿ‌ಕೊಪ್ಪ ಗ್ರಾಮ ಪಂಚಾಯಿತಿಯು ವಿದ್ಯುತ್ ಬಿಲ್ ಕಟ್ಟದ ಕಾರಣ ಚೆಸ್ಕಾಂನವರು ಪಂಚಾಯಿತಿ ವಿದ್ಯುತ್ ಕಡಿತಗೊಳಿಸಿದ್ದಾರೆ. ಜನಸಾಮಾನ್ಯರು ಪಂಚಾಯಿತಿಗೆ ಬಂದು ವಾಪಸಾಗುತ್ತಿದ್ದಾರೆ. ಸಿಬ್ಬಂದಿ ಸರಿಯಾದ ಸಮಯಕ್ಕೆ ಕಚೇರಿಗೆ ಬಂದರೂ ಯಾವುದೇ ಕೆಲಸವಿಲ್ಲದೆ ಸುಮ್ಮನೆ ಕೂರುವಂತಾಗಿದೆ.

ಪವರ್ ಇಲ್ಲದೇ ಪಂಚಾಯಿತಿಯ ಎಲ್ಲಾ ಕೆಲಸಗಳು ನಿಂತಿದ್ದು, ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ಪಂಚಾಯಿತಿಯಿಂದ ‘ಸೆಸ್ಕ್’ ಗೆ ಲಕ್ಷಾಂತರ ರೂ. ವಿದ್ಯುತ್ ಬಿಲ್ ಪಾವತಿ ಬಾಕಿ ಇದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ದಿನನಿತ್ಯದ ಚಟುವಟಿಕೆ ಸ್ತಬ್ಧಗೊಂಡಿದೆ.

ಬಿಲ್ ಕಟ್ಟದ ಸುಂಟಿಕೊಪ್ಪ ಗ್ರಾ.ಪಂಚಾಯಿತಿ: ಚೆಸ್ಕಾಂನಿಂದ ಪವರ್ ಕಟ್

ಸುಂಟಿಕೊಪ್ಪ ಗ್ರಾ.ಪಂನಿಂದ ‘ಸೆಸ್ಕ್’ಗೆ 28 ಲಕ್ಷದ 66 ಸಾವಿರ ರೂ.ಗಳ ವಿದ್ಯುತ್ ಬಿಲ್ ಪಾವತಿಯಾಗಬೇಕು. ಈ ಬಗ್ಗೆ ಹಲವು ಬಾರಿ ಬಿಲ್ ಪಾವತಿಸಲು ನೋಟಿಸ್​ ನೀಡಿದ್ದರೂ ಸಕಾರಾತ್ಮಕ ಸ್ಪಂದನೆ ದೊರೆಯದೇ ಇರುವುದರಿಂದ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಗ್ರಾಮ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ನ. 4 ರಂದು ಕಡಿತಗೊಳಿಸಲಾಗಿದೆ.

ಪಂಚಾಯಿತಿ ಸುತ್ತಮುತ್ತಲಿನಲ್ಲಿ 7 ಗ್ರಾಮಗಳಿವೆ. ಜನರು ಸಮಸ್ಯೆಗಳನ್ನು ಹೊತ್ತು ಪಂಚಾಯಿತಿಗೆ ಬಂದರೂ ಯಾವುದೇ ಪರಿಹಾರ ಕೊಡಲು ಪಂಚಾಯಿತಿಗೆ ಸಾಧ್ಯವಾಗುತ್ತಿಲ್ಲ. ವಿದ್ಯುತ್​ ಇಲ್ಲದೆ ಪಂಚಾಯಿತಿಯಲ್ಲಿ ಯಾವುದೇ ಪ್ರಿಂಟ್​ಗಳನ್ನು ತೆಗೆಯಲಾಗುತ್ತಿಲ್ಲ.

ಚೆಸ್ಕಾಂ

28 ಲಕ್ಷ ರೂ.ಗೂ ಅಧಿಕ ಬಾಕಿ: 2022 ಮಾರ್ಚ್ 22 ರಂದು ‘ಸೆಸ್ಕ್’ ನಿಂದ ಪಂಚಾಯಿತಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಎಚ್ಚೆತುಕೊಂಡ ಪಂಚಾಯಿತಿ ಹರಾಜು ಪಕ್ರಿಯೆಯಲ್ಲಿ 30 ಲಕ್ಷ ರೂ ಪಾವತಿಸಿತ್ತು. ಒಟ್ಟು 67 ಲಕ್ಷಕ್ಕೂ ಹೆಚ್ಚು ಮೊತ್ತದ ವಿದ್ಯುತ್ ಬಿಲ್ ಬಾಕಿಯಾಗಿದ್ದು, ಅದರಲ್ಲಿ ಈಗಾಗಲೇ ಒಂದು ಬಾರಿ 30 ಲಕ್ಷ ರೂ ಮತ್ತು ಮತ್ತೊಮ್ಮೆ 17 ಲಕ್ಷದ 25,000 ಸಾವಿರ ರೂ ಪಾವತಿ ಮಾಡಲಾಗಿದೆ. ಅದರೂ 28 ಲಕ್ಷ ರೂ.ಗೂ ಅಧಿಕ ಬಾಕಿ ಇರುವ ಹಿನ್ನೆಲೆಯಲ್ಲಿ ಸೆಸ್ಕ್​ನ ಮೇಲಾಧಿಕಾರಿಗಳ ಆದೇಶದಂತೆ ವಿದ್ಯುತ್ ಕಡಿತಗೊಳಿಸಲಾಗಿದೆ.

ಈ ಹಿಂದೆಯೇ ಹೇಳಿದಂತೆ, ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ವಿದ್ಯುತ್ ಬಿಲ್ ಪಾವತಿಗಾಗಿ ವಿಶೇಷ ಅನುದಾನ ನೀಡದ ಹೊರತು ಈ ಸಮಸ್ಯೆಗೆ ಪರಿಹಾರ ಇಲ್ಲ ಎಂಬುದು ಗ್ರಾ.ಪಂ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಅಭಿಪ್ರಾಯ.

ಪ್ರತಿ ತಿಂಗಳು ಕುಡಿಯುವ ನೀರಿನ ಮೋಟಾರ್, ಬೀದಿ ದೀಪ, ಪಂಚಾಯಿತಿ ಕಚೇರಿಯ ವಿದ್ಯುತ್ ಬಿಲ್ ಸರಾಸರಿ 2 ಲಕ್ಷದ 60,000 ದಿಂದ 2 ಲಕ್ಷದ 90,000 ರೂ.ವರೆಗೆ ಆಗುತ್ತದೆ. ಅದರಲ್ಲೂ ಪಂಚಾಯಿತಿಯ ವತಿಯಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ 6 ಹೈಮಾಸ್ಟ್​ ಬೀದಿದೀಪಕ್ಕೆ ದುಬಾರಿ ವಿದ್ಯುತ್ ಖರ್ಚು ಆಗುತ್ತಿದೆ. ಕುಡಿಯುವ ನೀರಿಗೆ ಮತ್ತಷ್ಟು ವೆಚ್ಚ ತಗಲುತ್ತಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್‌ನ ಬಾಕಿ ಹಣದ ಬಡ್ಡಿಯ ಮೊತ್ತ 26,000 ರೂ ಬರುತ್ತಿದೆ.

ಸುಂಟಿಕೊಪ್ಪ ಪಂಚಾಯಿತಿಯ ಹಿಂದಿನ ಆಡಳಿತ ಮಂಡಳಿ ಹಾಗೂ ಅದಕ್ಕಿಂತ ಹಿಂದೆ ಆಡಳಿತ ನಡೆಸಿದವರ ಅವಧಿಯಲ್ಲಿ 40 ಲಕ್ಷ ರೂ ವಿದ್ಯುತ್ ಶುಲ್ಕ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರಿಂದ ಈಗಿನ ಆಡಳಿತ ಮಂಡಳಿಗೆ ದೊಡ್ಡ ಹೊಡೆತ ಬಿದ್ದಿದೆ. ಎಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆರೋಪ ಮಾಡಿದ್ದಾರೆ.‌

ಸುಂಟಿಕೊಪ್ಪ ಪಂಚಾಯಿತಿ ಗ್ರೇಡ್ ವನ್ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಒಟ್ಟು 7 ವಾರ್ಡ್​ಗಳನ್ನು ಹೊಂದಿರುವ ಈ ಪಂಚಾಯಿತಿ ವ್ಯಾಪ್ತಿಗೆ ಹತ್ತು ಸಾವಿರಕ್ಕೂ ಹೆಚ್ಚಿನ ಜನತೆ ಬರುತ್ತಾರೆ. ಹಾಗಾಗಿ ಆದಷ್ಟು ಬೇಗ ಪಂಚಾಯಿತಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ‌.

ಇದನ್ನೂ ಓದಿ:ಪವರ್​ ಕಟ್​ ಸಮಸ್ಯೆ: ಶಿಕ್ಷಣ ಇಲಾಖೆಯಿಂದ ಪರ್ಯಾಯ ಮಾರ್ಗ

Last Updated :Nov 17, 2022, 12:55 PM IST

ABOUT THE AUTHOR

...view details