ಕರ್ನಾಟಕ

karnataka

ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ಪರ್ಯಾಯ ರಸ್ತೆಯಲ್ಲೂ ಬಿರುಕು, ಸಂಚಾರಕ್ಕೆ ಸಮಸ್ಯೆ

By

Published : Jul 19, 2022, 11:08 AM IST

Updated : Jul 19, 2022, 12:01 PM IST

ಮಡಿಕೇರಿ ಮಾರ್ಗವಾಗಿ ಮೇಕೆರಿ ತಾಳತ್ತಮನೆ ಅಪ್ಪಂಗಳ ಮಾರ್ಗ ಬಳಸುವಂತೆ ಮಂಗಳೂರಿಗೆ ತೆರಳುವ ವಾಹನ ಸವಾರರಿಗೆ ತಿಳಿಸಲಾಗಿತ್ತು. ಆದ್ರೆ ಮೇಕೆರಿ ಸಮೀಪದಲ್ಲಿಯೂ ರಸ್ತೆ ಬಿರುಕು ಉಂಟಾಗಿದೆ.

crack on road
ರಸ್ತೆಯಲ್ಲಿ ಬಿರುಕು

ಕೊಡಗು: ಮಂಗಳೂರಿಗೆ ತೆರಳಲು ಪರ್ಯಾಯವಾಗಿ ಕಲ್ಪಿಸಿದ್ದ ರಸ್ತೆಯಲ್ಲಿಯೂ ಬಿರುಕು ಕಾಣಿಸಿಕೊಂಡಿದೆ. ಸದ್ಯ ರಸ್ತೆಯಲ್ಲಿ ಬ್ಯಾರಿಕೇಡ್ ಆಳವಡಿಸಿ ಪಕ್ಕದಲ್ಲಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಭಾರಿ ವಾಹನಗಳಿಗೆ ನಿಷೇಧ ಹೇರಲಾಗಿದೆ.

ರಸ್ತೆಯಲ್ಲಿ ಬಿರುಕು, ಸಂಚಾರಕ್ಕೆ ಸಮಸ್ಯೆ

ಮಡಿಕೇರಿಯ ಜಿಲ್ಲಾ ಕಚೇರಿಗೆ ಕಟ್ಟಿದ್ದ ತಡೆಗೋಡೆ ಕುಸಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 275 ಅನ್ನು ಬಂದ್ ಮಾಡಲಾಗಿದೆ. ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಮಂಗಳೂರು ರಸ್ತೆ ಬಂದ್ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಮಡಿಕೇರಿ ಮಾರ್ಗವಾಗಿ ಮೇಕೆರಿ ತಾಳತ್ತಮನೆ ಅಪ್ಪಂಗಳ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ತಿಳಿಸಲಾಗಿತ್ತು. ಆದ್ರೆ ಮೇಕೆರಿ ಸಮೀಪದಲ್ಲಿಯೂ ರಸ್ತೆ ಬಿರುಕು ಕಾಣಿಸಿಕೊಂಡು ಕೆಳಭಾಗದ ಮಣ್ಣು ಕುಸಿಯುವ ಆತಂಕ ಎದುರಾಗಿದೆ.

ಇದನ್ನೂ ಓದಿ:ಮಡಿಕೇರಿ ಜಿಲ್ಲಾ ಕಚೇರಿ ತಡೆಗೋಡೆ ಕುಸಿತ: ಮಂಗಳೂರು ಸಂಪರ್ಕಿಸುವ ಹೆದ್ದಾರಿ ಬಂದ್

Last Updated : Jul 19, 2022, 12:01 PM IST

ABOUT THE AUTHOR

...view details