ಕರ್ನಾಟಕ

karnataka

ಕ್ಷುಲಕ ಕಾರಣಕ್ಕೆ ಆರಂಭವಾದ ಜಗಳ 20 ವರ್ಷದ ಯುವಕನ ಕೊಲೆಯಲ್ಲಿ ಅಂತ್ಯ

By

Published : Jun 6, 2021, 1:59 AM IST

ತರಕಾರಿ ಖರೀದಿಗೆ ಬಂದಿದ್ದ ಯುವಕನೋರ್ವ ನಿಖಿಲ್ ಜೊತೆ ಕ್ಷುಲ್ಲಕ್ ಕಾರಣಕ್ಕೆ ಜಗಳ ತೆಗೆದಿದ್ದಾನೆ. ನಂತರ ಸ್ನೇಹಿತರನ್ನು ಕರೆಸಿ ಮಾರಕಾಸ್ತ್ರಗಳಿಂದ ನಿಖಿಲ್ ಮೇಲೆ ಹಲ್ಲೆ ನಡೆಸಿದ್ದು, ನಿಖಿಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.

20 ವರ್ಷದ ಯುವಕನ ಕೊಲೆ
20 ವರ್ಷದ ಯುವಕನ ಕೊಲೆ

ಕಲಬುರಗಿ:ಕ್ಷುಲಕ ಕಾರಣಕ್ಕೆ ಆರಂಭಗೊಂಡ ಜಗಳ 20 ವರ್ಷದ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ರಾಮಮಂದಿರ ಸರ್ಕಲ್ ಬಳಿ ನಡೆದಿದೆ.

ಕರುಣೇಶ್ವರ ಕಾಲೋನಿ ನಿವಾಸಿ ನಿಖಿಲ್ (20) ಕೊಲೆಯಾದ ಯುವಕ. ನಿಖಿಲ್​ನ ಸಹೋದರ ಹಾಗೂ ಆತನ ತಾಯಿ ಸೇರಿದಂತೆ ಮೂವ್ವರು ಗಂಭೀರ ಗಾಯಗೊಂಡಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಲೆಯಾದ ನಿಖಿಲ್ ಹಾಗೂ ಅವರ ಕುಟುಂಬಸ್ಥರು ರಾಮಮಂದಿರ ಸರ್ಕಲ್ ಬಳಿ, ತರಕಾರಿ, ಹಣ್ಣಿನ ಅಂಗಡಿ, ಹೊಟೇಲ್ ವ್ಯಾಪಾರ ಹೊಂದಿದ್ದರು ಎಂದು ತಿಳಿದುಬಂದಿದೆ. ತರಕಾರಿ ಖರೀದಿಗೆ ಬಂದಿದ್ದ ಯುವಕನೋರ್ವ ನಿಖಿಲ್ ಜೊತೆ ಕ್ಷುಲ್ಲಕ್ ಕಾರಣಕ್ಕೆ ಜಗಳ ತೆಗೆದಿದ್ದಾನೆ. ನಂತರ ಸ್ನೇಹಿತರನ್ನು ಕರೆಸಿ ಮಾರಕಾಸ್ತ್ರಗಳಿಂದ ನಿಖಿಲ್ ಮೇಲೆ ಹಲ್ಲೆ ನಡೆಸಿದ್ದು, ನಿಖಿಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.

ಆದರೆ ಇನ್ನೊಂದಡೆ ಯುವತಿಯೊಬ್ಬಳ ಎಂಗೇಜಮಂಟ್ ನಡೆದಿದ್ದು, ವರ ಸರಿಯಿಲ್ಲ ಆತನೊಂದಿಗೆ ಮದುವೆ ಮಾಡಬೇಡಿ ಅಂತ ನಿಖಿಲ್ ಯುವತಿಯ ಮನೆಗೆ ಹೋಗಿ ಹೇಳಿ ಬಂದಿದ್ದನಂತೆ. ಇದೆ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆ ನಂತರವಷ್ಟೆ ಕೊಲೆಗೆ ನಿಖರ ಕಾರಣ ತಿಳಿದುಬರಬೇಕಿದೆ. ಈ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details