ಕರ್ನಾಟಕ

karnataka

ಕಲ್ಯಾಣ ಕರ್ನಾಟಕದ ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ವೈರಲ್ ಫೀವರ್: 3ನೇ ಅಲೆ ಮುನ್ಸೂಚನೆಯೇ?

By

Published : Sep 24, 2021, 5:50 PM IST

Updated : Sep 25, 2021, 2:07 PM IST

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಇದೀಗ ವೈರಲ್ ಫೀವರ್ ಜೊತೆಗೆ ಡೆಂಗ್ಯೂ ಹಾವಳಿ ಶುರುವಾಗಿದೆ. ಇದು ಕೋವಿಡ್​​ 3ನೇ ಅಲೆಯೇ? ಎಂಬ ಆತಂಕವೂ ಎದುರಾಗಿದೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ.

Kalburgi
ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ವೈರಲ್ ಫೀವರ್

ಕಲಬುರಗಿ: ಕೊರೊನಾ 3ನೇ ಅಲೆ ಆತಂಕದಲ್ಲಿರುವಾಗಲೇ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಇದೀಗ ವೈರಲ್ ಫೀವರ್ ಜೊತೆಗೆ ಡೆಂಗ್ಯೂ ಹಾವಳಿ ಜನರನ್ನು ಆತಂಕಕ್ಕೀಡು ಮಾಡಿದೆಯ.

ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಲ್ಲಿ ಆಸ್ಪತ್ರೆಗಳ ಬಹುತೇಕ ಬೆಡ್​​​ಗಳು ಭರ್ತಿಯಾಗಿವೆ. ಕಲಬುರಗಿ ಜಿಲ್ಲೆಯೊಂದರಲ್ಲೇ ಒಂದೇ ತಿಂಗಳಲ್ಲಿ ಬರೋಬ್ಬರಿ 158 ಜನರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಅದರಲ್ಲಿ ಶೇ. 50 ಮಕ್ಕಳು ಡೆಂಗ್ಯೂನಿಂದ ಬಳಲುತ್ತಿದ್ದಾರೆ ಅನ್ನೋದು ಪೋಷಕರಲ್ಲಿ ಆತಂಕ ಮೂಡಿಸಿದೆ.

ವೈರಲ್ ಫೀವರ್, ಡೆಂಗ್ಯೂ ಪ್ರಕರಣಗಳ ವಿವರ:

ಕಳೆದ ಜನವರಿಯಿಂದ ಇಲ್ಲಿವರೆಗೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ ಪತ್ತೆಯಾದ ಡೆಂಗ್ಯೂ- ವೈರಲ್ ಫೀವರ್ ಪ್ರಕರಣಗಳ ಮಾಹಿತಿ ಹೀಗಿದೆ..

  • ಕಲಬುರಗಿ: 266 ಡೆಂಗ್ಯೂ ಪ್ರಕರಣ, 2500ಕ್ಕೂ ಅಧಿಕ ವೈರಲ್ ಫೀವರ್ ಕೇಸ್​​
  • ಬೀದರ್​: 80 ಡೆಂಗ್ಯೂ, ವೈರಲ್ ಫೀವರ್-300.
  • ಯಾದಗಿರಿ: 10 ಡೆಂಗ್ಯೂ, ವೈರಲ್ ಫೀವರ್-300.
  • ಕೊಪ್ಪಳ: 25 ಡೆಂಗ್ಯೂ, ವೈರಲ್ ಫೀವರ್-250.
  • ಬಳ್ಳಾರಿ: 90 ಡೆಂಗ್ಯೂ, ವೈರಲ್ ಫೀವರ್- 200.
  • ರಾಯಚೂರು: ಡೆಂಗ್ಯೂ -80, ವೈರಲ್ ಫೀವರ 2000.

ಇದರಲ್ಲಿ 6 ವರ್ಷದೊಳಗಿನ ಒಟ್ಟು ಮೂರು ಬಾಲಕರು ಸಾವನ್ನಪ್ಪಿದ್ದಾರೆ. ಇದರ ಜೊತೆ ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಕೆಲ ಬಾಲಕರು ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.

ಅರೋಗ್ಯಾಧಿಕಾರಿ ಶರಣಬಸಪ್ಪ ಗಣಜಲಖೇಡ್

ರೋಗಗಳು ಬಾಧಿಸಲು ಕಾರಣ ಏನು?:

ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಡೆಂಗ್ಯೂ, ಮಲೇರಿಯಾ ಹಾಗೂ ವೈರಲ್ ಫೀವರ್‌ನಂತಹ ರೋಗಗಳು ಜನರನ್ನು ಬಾಧಿಸುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ರೋಗಗಳು ಹರಡದಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಎಚ್ಚೆತ್ತು ಸ್ವಚ್ಚತೆ ಬಗ್ಗೆ ಹೆಚ್ಚು ಗಮನಹರಿಸಬೇಕಿತ್ತು.

ಆದ್ರೆ ಎಲ್ಲೆಂದರಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲದೆ ರಸ್ತೆ ಪಕ್ಕದಲ್ಲಿ, ಬಡಾವಣೆಗಳಲ್ಲಿ ಕಸದ ರಾಶಿ ಕಾಣಿಸುತ್ತಿದ್ದು, ಸರಿಯಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಹೀಗಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾ, ವೈರಲ್ ಫೀವರ್ ಉಲ್ಬಣಗೊಂಡು ಜನರು ರೋಗಗಳಿಗೆ ತುತ್ತಾಗುವಂತಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಇದನ್ನೂ ಓದಿ:ಉತ್ತರಕನ್ನಡದಲ್ಲಿ ಕೋವಿಡ್​ ಮೂರನೇ ಅಲೆ ಆತಂಕ: ಕಳೆದ 7 ತಿಂಗಳಲ್ಲಿ 46,856 ಮಕ್ಕಳಿಗೆ ವೈರಲ್ ಫೀವರ್

Last Updated :Sep 25, 2021, 2:07 PM IST

ABOUT THE AUTHOR

...view details