ಕರ್ನಾಟಕ

karnataka

ಗಣೇಶ ಮೂರ್ತಿಯನ್ನು ವಿರೂಪಗಿಳಿಸಿದ ಕಿಡಿಗೇಡಿಗಳು..

By

Published : Sep 13, 2021, 4:03 PM IST

ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ನಡೆದ ಎರಡು ಗುಂಪುಗಳ ನಡುವಿನ ವೈಮನಸ್ಸಿನಿಂದ ಅಸಮಾಧಾನಗೊಂಡ ಎದುರಾಳಿ ಗುಂಪು ಗಣೇಶನ ಮೂರ್ತಿಯನ್ನು ವಿರೂಪಗೊಳಿಸಿರಬಹುದು ಎಂದು ಶಂಕಿಸಲಾಗಿದೆ. ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

Unknown persons are damaged a ganesha idol
ಗಣೇಶ ಮೂರ್ತಿಯನ್ನು ವಿರೂಪಗಿಳಿಸಿದ ಕಿಡಿಗೇಡಿಗಳು

ಕಲಬುರಗಿ :ಕಿಡಿಗೇಡಿಗಳ ಗುಂಪೊಂದು ಗಣೇಶ್ ಮೂರ್ತಿಯನ್ನು ವಿರೂಪಗೊಳಿಸಿರುವ ಘಟನೆ ನಗರದ ನಂದಿ ಕಾಲೋನಿಯಲ್ಲಿ ನಡೆದಿದೆ. ನಗರದ ನಂದಿ ಕಾಲೋನಿಯಲ್ಲಿರುವ ನಂದೀಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶನ ಮೂರ್ತಿಯನ್ನು ಕಿಡಗೇಡಿಗಳು ವಿರೂಪಗೊಳಿಸಿ ಪರಾರಿಯಾಗಿದ್ದಾರೆ. ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಕೃತ್ಯವೆಸಗಿದವರು ಯಾರೆಂದು ತಿಳಿದು ಬಂದಿಲ್ಲ.

ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ನಡೆದ ಎರಡು ಗುಂಪುಗಳ ನಡುವಿನ ವೈಮನಸ್ಸಿನಿಂದ ಅಸಮಾಧಾನಗೊಂಡ ಎದುರಾಳಿ ಗುಂಪು ಗಣೇಶನ ಮೂರ್ತಿಯನ್ನು ವಿರೂಪಗೊಳಿಸಿರಬಹುದು ಎಂದು ಶಂಕಿಸಲಾಗಿದೆ. ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು, ಮೂರ್ತಿಯನ್ನು ವಿರೂಪಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಬಡಾವಣೆಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್​ ಇನ್ನಿಲ್ಲ

ABOUT THE AUTHOR

...view details