ಕರ್ನಾಟಕ

karnataka

ನಿಂತಿದ್ದ ಲಾರಿಗೆ ಬೈಕ್​​ ಡಿಕ್ಕಿ: ದೇವರ ಹರಕೆ ತೀರಿಸಲು ಹೋಗಿದ್ದ ಮೂವರ ದುರ್ಮರಣ

By

Published : Nov 9, 2022, 1:10 PM IST

ನಿಂತಿದ್ದ ಲಾರಿಗೆ ಬೈಕ್​​ ಡಿಕ್ಕಿ. ಮೂವರು ಬೈಕ್ ಸವಾರರು ಸಾವು. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾವದಗಿ ಗ್ರಾಮದಲ್ಲಿ ಘಟನೆ.

Three killed in road accident
ರಾಹುಲ್, ಯುವರಾಜ್ ಹಾಗೂ ದೀಪಕ್ ಮೃತರು

ಕಲಬುರಗಿ:ದೇವರ ಹರಕೆ ತೀರಿಸಲು ಹೋಗಿದ್ದ ಮೂವರು ಅಪಘಾತದಲ್ಲಿ ಮರಣ ಹೊಂದಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾವದಗಿ ಗ್ರಾಮದ ಬಳಿ ನಡೆದಿದೆ.

ತಾಲೂಕಿನ ಗೋಗಿ ತಾಂಡಾ ನಿವಾಸಿಗಳಾದ ದೀಪಕ್ (45), ಯುವರಾಜ್ (17) ಹಾಗೂ ರಾಹುಲ್ (17) ಮೃತರು. ನಿನ್ನೆ ಗೋಗಿ ತಾಂಡಾದಿಂದ ಸಾವಳಗಿ ತಾಂಡಾಗೆ ದೇವರ ಹರಕೆ ತೀರಿಸಲು ಕುಟುಂಬ ಸಮೇತ ಹೋಗಿದ್ದರು. ದೇವರ ಹರಕೆ ತೀರಿಸಿದ ಬಳಿಕ ಕುಟುಂಬಸ್ಥರು ಕ್ರೂಸರ್ ವಾಹನದಲ್ಲಿ ವಾಪಸ್ ಆಗಿದ್ದರು.

ಆದರೆ ದೀಪಕ್, ಯುವರಾಜ್ ಮತ್ತು ರಾಹುಲ್ ಮೂವರು ತ್ರಿಪಲ್ ರೈಡಿಂಗ್ ಮಾಡಿಕೊಂಡು ಊರಿಗೆ ವಾಪಸ್​​ ಬರುತ್ತಿದ್ದಾಗ, ನಾವದಗಿ ಬಳಿ ನಿಂತಿದ್ದ ಲಾರಿಗೆ ಬೈಕ್​​ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ರಸ್ತೆ ದಾಟುತ್ತಿದ್ದ ವೃದ್ಧನಿಗೆ ಬೈಕ್ ಡಿಕ್ಕಿ.. ಚಿಕಿತ್ಸೆ ಫಲಕಾರಿಯಾಗದೇ ಸಾವು

ABOUT THE AUTHOR

...view details