ಕರ್ನಾಟಕ

karnataka

ಕಲಬುರಗಿ: ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಆ್ಯಂಬುಲೆನ್ಸ್‌ನಲ್ಲೇ ಹೆರಿಗೆ

By

Published : Dec 3, 2020, 10:44 PM IST

ಸೇಡಂ ತಾಲೂಕು ಆಸ್ಪತ್ರೆಗೆಂದು ಆ್ಯಂಬುಲೆನ್ಸ್‌ನಲ್ಲಿ ತೆರಳುವಾಗ, ಮಾರ್ಗ ಮಧ್ಯದ ವಾಲ್ಮಿಕಿ ನಗರ ಶೆಟ್ಟಿ ಹೂಡಾ ಬಳಿ ಅಶ್ವಿನಿ ಯಲ್ಲಪ್ಪ ಎಂಬ ಗರ್ಭಿಣಿಗೆ ವಿಪರೀತ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಶಾ ಕಾರ್ಯಕರ್ತೆ ರೈಸಾಬಾನು ಬೀರನಳ್ಳಿ ಹಾಗೂ ನರ್ಸ್ ತಾನಾಜೀ ರಾಠೋಡ ಹೆರಿಗೆ ಮಾಡಿಸಿದ್ದಾರೆ.

ಮಗುವಿಗೆ ಜನ್ಮ
ಮಗುವಿಗೆ ಜನ್ಮ

ಕಲಬುರಗಿ: ಹೆರಿಗೆಗೆಂದು ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಆ್ಯಂಬುಲೆನ್ಸ್‌ನಲ್ಲಿಯೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಸೇಡಂ ತಾಲೂಕಿನಲ್ಲಿ ನಡೆದಿದೆ.

ಬೀರನಳ್ಳಿ ಗ್ರಾಮದ ಅಶ್ವಿನಿ ಯಲ್ಲಪ್ಪ ಮಗುವಿಗೆ ಜನ್ಮ ನೀಡಿದ ತಾಯಿ. ಅಶ್ವಿನಿ ಅವರು 3ನೇ ಹೆರಿಗೆಗಾಗಿ ಸೇಡಂ ತಾಲೂಕು ಆಸ್ಪತ್ರೆಗೆಂದು ಆ್ಯಂಬುಲೆನ್ಸ್‌ನಲ್ಲಿ ತೆರಳುವಾಗ, ಮಾರ್ಗ ಮಧ್ಯದ ವಾಲ್ಮಿಕಿ ನಗರ ಶೆಟ್ಟಿ ಹೂಡಾ ಬಳಿ ವಿಪರೀತ ಹೆರಿಗೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಆಶಾ ಕಾರ್ಯಕರ್ತೆ ರೈಸಾಬಾನು ಬೀರನಳ್ಳಿ ಹಾಗೂ ನರ್ಸ್ ತಾನಾಜೀ ರಾಠೋಡ ಹೆರಿಗೆ ಮಾಡಿಸಿದ್ದಾರೆ.

ತಾಯಿ ಹಾಗೂ ಮಗು ಆರೋಗ್ಯವಾಗಿದ್ದು ಅವರನ್ನು ಸೇಡಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ABOUT THE AUTHOR

...view details