ಕರ್ನಾಟಕ

karnataka

ಮಿರ್ಚಿ ಬಜ್ಜಿಗಾಗಿ ಜ್ಯೋತಿಷಿ ಕೊಲೆ: ಕಲಬುರಗಿ ಜ್ಯೋತಿಷಿ ಹತ್ಯೆ ಹಿಂದಿನ ಸತ್ಯ ಬಾಯ್ಬಿಟ್ಟ ಆರೋಪಿಗಳು

By

Published : Nov 8, 2020, 2:10 PM IST

Updated : Nov 8, 2020, 2:51 PM IST

ಕಲಬುರಗಿ ಜಿಲ್ಲೆಯಲ್ಲಿ ನಡೆದಿದ್ದ ಜ್ಯೋತಿಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೆಹಬೂಬ್ ಅಲಿ, ಸೈಯದ್ ಪಾಷಾ, ಮಹ್ಮದ್ ಸೋಹೆಲ್, ಸೈಯದ್ ಮಝರ್, ಮಹ್ಮದ್ ಶಾರೂಖ್, ಸೈಯದ್ ಅಜರ್ ಹಾಗೂ ಮಹ್ಮದ್ ಮುಸ್ತಫಾ ಸೇರಿ 7 ಮಂದಿಯನ್ನು ವಾಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

suresh joshi murder case: 7 are arrested
ಮಿರ್ಚಿ ಬಜ್ಜಿಗಾಗಿ ಜೀವ ಬಲಿ: 7 ಆರೋಪಿಗಳು ಅಂದರ್​​

ಕಲಬುರಗಿ: ಮಿರ್ಚಿ, ಬಜ್ಜಿ ವಿಷಯಕ್ಕೆ ಆರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ವಾಡಿ ಪೊಲೀಸರು ಬಂಧಿಸಿದ್ದಾರೆ.

ಮಿರ್ಚಿ ಬಜ್ಜಿಗಾಗಿ ಜ್ಯೋತಿಷಿ ಕೊಲೆ: ಕಲಬುರಗಿ ಜ್ಯೋತಿಷಿ ಹತ್ಯೆ ಹಿಂದಿನ ಸತ್ಯ ಬಾಯ್ಬಿಟ್ಟ ಆರೋಪಿಗಳು

ಹಲಕರ್ಟಿ ಗ್ರಾಮದ ಸುರೇಶ ಜೋಶಿ (58) ಕೊಲೆಗೀಡಾದವರು. ಹಲಕರ್ಟಿ ಗ್ರಾಮದ ಮೆಹಬೂಬ್ ಅಲಿ, ಸೈಯದ್ ಪಾಷಾ, ಮಹ್ಮದ್ ಸೋಹೆಲ್, ಸೈಯದ್ ಮಝರ್, ಮಹ್ಮದ್ ಶಾರೂಖ್, ಸೈಯದ್ ಅಜರ್ ಹಾಗೂ ಮಹ್ಮದ್ ಮುಸ್ತಫಾ ಬಂಧಿತರು.

ರಾಜ್ ಕೋಟ್​​ನಲ್ಲಿ ಜ್ಯೋತಿಷ್ಯ ಹೇಳಿಕೊಂಡು ಜೀವನ ಸಾಗಿಸುತ್ತಿದ್ದ ಸುರೇಶ್ ಜೋಶಿ ಕುಟುಂಬ, ಭೂಮಿ ನೋಂದಣಿಗಾಗಿ ಸ್ವಗ್ರಾಮ ಹಲಕರ್ಟಿಗೆ ಆಗಮಿಸಿತ್ತು. ಗ್ರಾಮದ ಚೌಡೇಶ್ವರಿ ವೃತ್ತದಲ್ಲಿರುವ ಹೋಟೆಲ್​​ವೊಂದಕ್ಕೆ ಸುರೇಶ ಬಜ್ಜಿ ತಿನ್ನಲು ಹೋಗಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕ ಮತ್ತು ಸುರೇಶ ನಡುವೆ ಮಾತಿನ ಚಕಮಕಿ ನಡೆದಿದೆ.

ಮಿರ್ಚಿ ಬಜ್ಜಿ ತಂದಿಟ್ಟ ಜಗಳ: ಜ್ಯೋತಿಷಿ ಕೊಲೆಯಲ್ಲಿ ಅಂತ್ಯ

ಇದೇ ವೇಳೆ ಹೋಟೆಲ್​​ಗೆ ಆಗಮಿಸಿದ್ದ ಯುವಕನೋರ್ವ (ಪಾಶಾ ) ಸುರೇಶ ತಿನ್ನುತ್ತಿದ್ದ ಮಿರ್ಚಿ ಬಜ್ಜಿ ಪ್ಲೇಟ್‌ಗೆ ಕೈ ಹಾಕಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಆ ಸಂದರ್ಭ ಸುರೇಶ ಅವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್.ಪಿ. ಸಿಮಿ ಮರಿಯಮ್ ಜಾರ್ಜ್ ಮಾಹಿತಿ ನೀಡಿದ್ದಾರೆ.

Last Updated :Nov 8, 2020, 2:51 PM IST

ABOUT THE AUTHOR

...view details