ಕರ್ನಾಟಕ

karnataka

ರೌಡಿ ಶೀಟ್ ಹಾಕಿರೋ ಪೊಲೀಸರೇ ರೌಡಿಗಳಿಗೆ ಈಗ ಸಲ್ಯೂಟ್ ಹೊಡಿಬೇಕಾ?: ಸಿಎಂ ಇಬ್ರಾಹಿಂ

By

Published : Dec 2, 2022, 9:10 PM IST

ಜನತಾದಳಕ್ಕೂ ರೌಡಿಸಂ ಪದಕ್ಕೂ ಸಂಬಂಧ ಇಲ್ಲ. ಆದರೆ ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ರೌಡಿಸಂನಲ್ಲಿ ಪಳಗಿರೋರೂ ಇದ್ದಾರೆ. ಇಂತವರು ರಾಜಕೀಯ ಮಾಡೋದು ರಾಜ್ಯದ ದುರ್ದೈವದ ಸಂಗತಿ. ಸಮಾಜ ಇದಕ್ಕೆ ಅವಕಾಶ ಕೊಡಬಾರದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

ಕಲಬುರಗಿ: ರೌಡಿ ಶೀಟ್ ಹಾಕಿರೋ ಪೊಲೀಸರೇ ರೌಡಿಗಳಿಗೆ ಈಗ ಸಲ್ಯೂಟ್ ಹೊಡಿಬೇಕು ಅಂದ್ರೆ ಹೆಂಗಾಗುತ್ತೆ. ರೌಡಿಗಳು ರಕ್ಷಣೆಗಾಗಿ ರಾಜಕೀಯಕ್ಕೆ ಬರ್ತಿದ್ದಾರೆ. ಬಿಜೆಪಿಯವರು ಅವರನ್ನ ವೈಭವೀಕರಣ ಮಾಡ್ತಿದ್ದಾರೆ ಎಂದು ಕಲಬುರಗಿ ಏರ್ಪೋರ್ಟ್​ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ.

ಜನತಾದಳಕ್ಕೂ ರೌಡಿಸಂ ಪದಕ್ಕೂ ಸಂಬಂಧ ಇಲ್ಲ. ಆದ್ರೆ ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ರೌಡಿಸಂನಲ್ಲಿ ಪಳಗಿರೋರೂ ಇದ್ದಾರೆ. ಇಂತವರು ರಾಜಕೀಯ ಮಾಡೋದು ರಾಜ್ಯದ ದುರ್ದೈವದ ಸಂಗತಿ. ಸಮಾಜ ಇದಕ್ಕೆ ಅವಕಾಶ ಕೊಡಬಾರದು ಎಂದು ಕುಟುಕಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮಾತನಾಡಿದರು

ಗಡಿ ವಿವಾದಕ್ಕೆ ಶಾಶ್ವತ ಪರಿಹಾರ ಅಗತ್ಯವಿದೆ: ಇನ್ನು ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಇಬ್ರಾಹಿಂ, ಮಹಾರಾಷ್ಟ್ರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಅದಕ್ಕಾಗಿ ಜನರ ಮೈಂಡ್ ಡೈವರ್ಟ್ ಮಾಡಲು ಗಡಿ ವಿವಾದ ಮುನ್ನೆಲೆಗೆ ತಂದಿದ್ದಾರೆ. ಗಡಿ ವಿವಾದಕ್ಕೆ ಶಾಶ್ವತ ಪರಿಹಾರ ಹುಡುಕುವುದು ಅಗತ್ಯ ಇದೆ ಎಂದು ಹೇಳಿದರು.

ನಾನೇ ಹೋರಾಟ ಮಾಡುವೆ:ಮುಸ್ಲಿಂ ಕಾಲೇಜು ಅನ್ನೋದನ್ನ ಬಿಜೆಪಿಯವರು ವಿವಾದ ಹುಟ್ಟು ಹಾಕ್ತಿದ್ದಾರೆ. ನಾವು ಮಠದಲ್ಲಿ ಓದಿರೋದು. ನಮಗೂ ಪ್ರತ್ಯೇಕ ಮುಸ್ಲಿಂ ಕಾಲೇಜು ಬೇಕೇ ಆಗಿಲ್ಲ. ವಕ್ಫ್​ಬೋರ್ಡ್ ಕಾಲೇಜು ಮಾಡಿದ್ರೆ ಎಲ್ಲಾ ಧರ್ಮದವರು ಓದುತ್ತಾರೆ. ಒಂದೇ ಧರ್ಮದ ವಿದ್ಯಾರ್ಥಿಗಳಿಗೆ ಅಂದ್ರೆ ನಾನೇ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಕುಮಾರಸ್ವಾಮಿ ನಮ್ಮ ಸಿಎಂ ಅಭ್ಯರ್ಥಿ, ಸಿಎಂ ಅಭ್ಯರ್ಥಿಯ ಗೊಂದಲ ಕಾಂಗ್ರೆಸ್-ಬಿಜೆಪಿಯಲ್ಲಿದೆ, ನಮ್ಮಲ್ಲಿಲ್ಲ. ಅನೇಕರು ನಮ್ಮ ಪಕ್ಷಕ್ಕೆ ಬರೋರು ಇದ್ದಾರೆ ಎಂದು ಹೇಳಿದರು.

ಓದಿ:ಬಿಜೆಪಿ - ಕಾಂಗ್ರೆಸ್ ಅತೃಪ್ತ ನಾಯಕರಿಗೆ ಜೆಡಿಎಸ್ ಆಪರೇಷನ್: ಜಾರಕಿಹೊಳಿ ಬ್ರದರ್ಸ್, ಮುಸ್ಲಿಂ ಲೀಡರ್ಸ್​ ಮೇಲೆ ಕಣ್ಣು

ABOUT THE AUTHOR

...view details