ಕರ್ನಾಟಕ

karnataka

ಗಿನ್ನೆಸ್ ದಾಖಲೆಗೆ 50 ಸಾವಿರ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ: ಆರ್​​​​​​​​ ಅಶೋಕ್​

By

Published : Jan 18, 2023, 10:40 PM IST

ಕಲಬುರಗಿಯ ಮಳಖೇಡನಲ್ಲಿ ಕಂದಾಯ ಸಚಿವ ಆರ್ ಅಶೋಕ ಸುದ್ದಿಗೋಷ್ಠಿ - 50 ಸಾವಿರ ಹಕ್ಕು ಪತ್ರ ವಿತರಿಸಿ ನಾಳೆ ಗಿನ್ನಿಸ್ ದಾಖಲೆ - ಕಾಂಗ್ರೆಸ್ ನಾಯಕರಿಗೆ ಸಚಿವರ ತಿರುಗೇಟು

Revenue Minister R Ashoka press conference
ಕಂದಾಯ ಸಚಿವ ಆರ್ ಅಶೋಕ ಸುದ್ದಿಗೋಷ್ಠಿ

ಕಲಬುರಗಿ: ನಾವು ಜನರ ಸೇವಕರೇ ಹೊರತು ನಾಯಕರಲ್ಲ. ನಮಗೆ ನಾಯಕ ಪದವಿ ಬೇಡ ಎಂದು 'ಕಾಂಗ್ರೆಸ್ ನಾ ನಾಯಕಿ' ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್. ಅಶೋಕ ಲೇವಡಿ ಮಾಡಿದ್ದಾರೆ. ಕಲಬುರಗಿಯ ಮಳಖೇಡನಲ್ಲಿ ಮಾತನಾಡಿದ ಆರ್. ಅಶೋಕ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಾ ನಾಯಕಿ ಕಾರ್ಯಕ್ರಮ‌ ಕುರಿತು ಗೇಲಿ‌ ಮಾಡಿದರು. ಕಾಂಗ್ರೆಸ್​ನವರು ನಾಯಕ, ನಾಯಕಿ ಅಂತಾ ಹೇಳಿಕೊಂಡು ಓಡಾಡಲಿ ನಮಗೆ ಅಂತ ಪಟ್ಟ ಬೇಡಾ ಎಂದು ವಾಗ್ದಾನ ಮಾಡಿದರು.

ಇದೆ ವೇಳೆ ತಾಕತ್ತು, ಧಮ್ ಇದ್ರೆ ಮೋದಿ ಬಳಿ ವಾಪಸ್ ಹೋಗಿದ್ದ ಯೋಜನೆಗಳ ಬಗ್ಗೆ ಬಿಜೆಪಿಗರು ಪ್ರಶ್ನೆ ಮಾಡಲಿ ಎಂದು ಹೇಳಿರುವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದ ಮಾತಿಗೆ ತಿರುಗೇಟು ನೀಡಿದ ಆರ್. ಅಶೋಕ ಅವರು, ಮೊದಲು ಕಾಂಗ್ರೆಸ್ ನವರಿಗೆ ಧಮ್, ತಾಕತ್ ಇದ್ರೆ ಮನಮೋಹನ ಸಿಂಗ್ ಪ್ರಧಾನಿಗಳಿದ್ದಾಗ ಅದೆಷ್ಟೂ ಪರಿಹಾರ‌‌ ಕೊಟ್ಟಿದ್ದಾರೆ ಅದನ್ನ ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.

ಮೋದಿ ಅವರು ಪ್ರಧಾನಿ ಆಗಿ 9 ವರ್ಷದಲ್ಲಿ ನೆರೆಹಾವಳಿ, ಅತಿವೃಷ್ಟಿ ಹೀಗೆ ಪ್ರತಿಯೊಂದಕ್ಕೂ ಪರಿಹಾರ ಕೊಟ್ಟಿದ್ದಾರೆ. ರಾಜ್ಯ- ಕೇಂದ್ರ ಸರ್ಕಾರ ಒಗ್ಗೂಡಿ ಒಂದೊಂದು ಜಿಲ್ಲೆಗೆ 200-250 ಕೋಟಿ ಹಣ ಕೊಟ್ಟಿದ್ದಾರೆ. ಬಹಿರಂಗವಾಗಿ ಸವಾಲ್ ಹಾಕ್ತೇನೆ ಕಾಂಗ್ರೆಸ್​ನವರು ಚರ್ಚೆಗೆ ಬರಲಿ ನೋಡೋಣ ಎಂದು ಕುಟುಕಿದರು. ರಾಜ್ಯಕ್ಕೆ ಪ್ರಧಾನಿಯವರು ಪದೇ ಪದೆ ಬರ್ತಿದ್ದಾರೆ ಅಂತಾ ಕಾಂಗ್ರೆಸ್ ಪಕ್ಷದವರು ಪ್ರಶ್ನಿಸುತ್ತಿದ್ದಾರೆ. ಯಾಕೆ ಪ್ರಧಾನಿಯವರು ಬರಬಾರದಾ ಹಾಗಾದ್ರೆ?, ನಿಮ್ಮ ಪ್ರಧಾನಿಗಳಿನ್ನೂ ಹಿಂದೆ ನೀವು ಕರೆದುಕೊಂಡು ಬರಬಹುದಿತ್ತು. ನಮ್ಮ ಪ್ರಧಾನಿ ಮೋದಿ ಘರ್ಜಿಸುತ್ತಾ ಬರುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್​ನವರಿಗೆ ಭಯ ಆಗ್ತಿದೆ ಎಂದು ಪ್ರತ್ಯುತ್ತರ ನೀಡಿದರು.

ಕಂದಾಯ ಗ್ರಾಮಗಳಾಗಿ ಪರಿವರ್ತನೆ: ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ತಾಂಡಾ, ಆಡಿ, ಕುರುಬರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ. ಸಬ್ ರಿಜಿಸ್ಟರ್ ನಲ್ಲಿ ನೋಂದಣಿ ಮಾಡಿ ದಾಖಲೆ ಆಗುತ್ತದೆ. ಇದರಿಂದ ತಾಂಡಾ ಕುಟುಂಬಗಳಿಗೂ ನಾಗರಿಕ ಸೌಲಭ್ಯ, ಲೋನ್ ಸೇರಿ ಇತರೆ ಸೌಲಭ್ಯಗಳನ್ನ ಪಡೆಯಲು ಅನುಕೂಲ ಆಗುತ್ತದೆ ಎಂದು ಮಾಹಿತಿ ನೀಡಿದರು.

3200ಕ್ಕೂ ಹೆಚ್ಚು ಲಂಬಾಣಿ ತಾಂಡಾ ಕಂದಾಯ ಗ್ರಾಮ:3,200 ಕ್ಕೂ ಹೆಚ್ಚು ಲಂಬಾಣಿ ತಾಂಡಾ, ಕುರುಬರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ. 1600 ಕ್ಕೂ ಹೆಚ್ಚು ತಾಂಡಾಗಳನ್ನು‌ ನೋಟಿಫೀಕೆಷನ್ ಮಾಡಿದ್ದೇವೆ. ರಾಜ್ಯದ ಗ್ರಾಮಗಳ ಪಟ್ಟಿಯಲ್ಲಿ ಇವು ಸೇರ್ಪಡೆ ಆಗುತ್ತವೆ. ಇದು ಕಂದಾಯ ಇಲಾಖೆಯಲ್ಲಿ ಮಹತ್ವದ ಹೆಜ್ಜೆ. ಮೇಲಾಗಿ ಪ್ರಧಾನಿ ಮೋದಿ ಮೊದಲನೆ‌‌ ಹಂತದ ಫಲಾನುಭವಿಗಳಿಗೆ ಹಕ್ಕು ಪತ್ರ ಕೊಡಲು ಬರುತ್ತಿದ್ದಾರೆ ಎಂದು ಹೇಳಿದರು.

ಹಕ್ಕು ಪತ್ರ ವಿತರಣೆಗೆ ಪ್ರಯತ್ನ‌:ದಾವಣಗೆರೆಯಲ್ಲಿ ಸೇವಾಲಾಲ್ ದೇವಸ್ಥಾನದ ಬಳಿ ಎರಡನೇ ಹಂತದಲ್ಲಿ ಹಕ್ಕು ಪತ್ರ ಕೊಡುವ ಪ್ರಯತ್ನ ಮಾಡ್ತಿದ್ದೇವೆ. ಅಲ್ಲಿ ಅಮಿತ್​ ಶಾ ಅವರನ್ನು ಕರೆಸಿ ಹಕ್ಕು ಪತ್ರ ವಿತರಣೆಗೆ ಪ್ರಯತ್ನ‌ ಮಾಡುತ್ತಿದ್ದೇವೆ. ಉಚಿತ ನೋಂದಣಿಗಾಗಿ ಐಜಿಆರ್ ಅವರಿಗೆ ಮಾತಾಡುತ್ತಿದ್ದೇನೆ, ಸಿಎಂ ಅವರಿಗೂ ಮಾತಾಡ್ತಿದ್ದೇನೆ. ಉಚಿತವಾಗಿ ನೋಂದಣಿ ಮಾಡಿಕೊಡುವ ಪ್ರಯತ್ನ ಮಾಡ್ತಿದ್ದೇವೆ ಎಂದರು.

ಗಿನ್ನೆಸ್ ದಾಖಲೆಗೆ 50 ಸಾವಿರ ಹಕ್ಕು ಪತ್ರ ವಿತರಣೆ: ಏಕಕಾಲಕ್ಕೆ 50 ಸಾವಿರ ಹಕ್ಕು ಪತ್ರ ವಿತರಣೆ ಗಿನ್ನಿಸ್ ದಾಖಲೆ ವಿಚಾರವಾಗಿದೆ. ಗಿನ್ನಿಸ್ ದಾಖಲೆ ಅಧಿಕಾರಿಗಳು ಬಂದು ಪರಿಶೀಲನೆ ಕೂಡಾ ಮಾಡಿದ್ದಾರೆ. ಹಿಂದೆಂದೂ ಏಕಕಾಲದಲ್ಲಿ 50 ಸಾವಿರ ಹಕ್ಕು ಪತ್ರ ಕೊಟ್ಟಿರುವ ಇತಿಹಾಸ ಇಲ್ಲ. ಹೀಗಾಗಿ ಇದೊಂದು ಗಿನ್ನಿಸ್ ದಾಖಲೆ ಆಗಲಿದೆ. ನಾಳೆ‌ ಎಲ್ಲರ ಎದುರಿಗೆ ಗಿನ್ನಸ್ ದಾಖಲೆ ಪ್ರಮಾಣ‌ಪತ್ರ ಸಿಗಲಿದೆ ಎಂದು ಹರ್ಷ ವ್ಯಕ್ತ‌ಪಡಿಸಿದರು.

ಇದನ್ನೂಓದಿ:ಡಿಕೆಶಿ ಬಂಧನದ ವೇಳೆ ನಡೆದ ಗಲಾಟೆ, ಮಹದಾಯಿ ಗಲಾಟೆ: ಸರ್ಕಾರದಿಂದ ಕ್ಲೈಮ್ ಕಮಿಷನ್ ನೇಮಕ

ABOUT THE AUTHOR

...view details