ಕರ್ನಾಟಕ

karnataka

ಬಿ.ಶ್ರೀರಾಮುಲು, ಪ್ರಿಯಾಂಕ್ ಖರ್ಗೆ ಆಸ್ತಿ ವಿವರ ಇಲ್ಲಿದೆ..

By

Published : Apr 18, 2023, 9:53 PM IST

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು, ಶಾಸಕ ಪ್ರಿಯಾಂಕ್ ಖರ್ಗೆ ಅವರು ತಮ್ಮ ಆಸ್ತಿಯ ವಿವರ ಘೋಷಣೆ ಮಾಡಿಕೊಂಡಿದ್ದಾರೆ.

ಪ್ರಿಯಾಂಕ್ ಖರ್ಗೆ -ಸಚಿವ ಬಿ ಶ್ರೀರಾಮುಲು
ಪ್ರಿಯಾಂಕ್ ಖರ್ಗೆ -ಸಚಿವ ಬಿ ಶ್ರೀರಾಮುಲು

ಕಲಬುರಗಿ :ಬಳ್ಳಾರಿ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು 46.57 ಕೋಟಿ ರೂ. ಒಡೆಯರಾಗಿದ್ದಾರೆ. ಐದು ಸಲ ಶಾಸಕ, ಒಂದು ಸಲ ಸಂಸದರಾಗಿರುವ ಶ್ರೀರಾಮುಲು ಆರನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಲು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಶ್ರೀರಾಮುಲು ಅವರ ಚರಾಸ್ತಿ 6.91 ಕೋಟಿ ರೂ. ಸ್ಥಿರಾಸ್ತಿ 39. 65 ಕೋಟಿ ರೂ ಇದ್ದು ಮತ್ತು ಪತ್ನಿ ಭಾಗ್ಯಲಕ್ಷ್ಮಿ ಹೆಸರಿನಲ್ಲಿ ಚರಾಸ್ತಿ 1.31 ಕೋಟಿ ರೂ. ಸ್ಥಿರಾಸ್ತಿ 20.29 ಕೋಟಿ ರೂ. ಇದೆ. ಮಗಳು ದೀಕ್ಷಿತಾ 2.95 ಕೋಟಿ ರೂ, ಮಗ ಧನುಶ್ 1.30 ಕೋಟಿ ರೂ, ಮಗಳು 27.99 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. 1.20 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರು, 75.26 ಲಕ್ಷ ರೂ. ಮೌಲ್ಯದ ಬೆಂಜ್ ಕಾರು, 38.81 ಲಕ್ಷ ರೂ. ಮೌಲ್ಯದ ಬಸ್‌ ಅನ್ನು ಶ್ರೀರಾಮುಲು ಹೊಂದಿದ್ದಾರೆ.

ರಾಮುಲು 2.36 ಕೋಟಿ ರೂ. ಮೌಲ್ಯದ 4257 ಗ್ರಾಂ ಚಿನ್ನಾಭರಣ, 76 ಲಕ್ಷ ರೂ. ಮೌಲ್ಯದ 9500 ಗ್ರಾಂ, ಬೆಳ್ಳಿ ಆಭರಣಗಳನ್ನು ಹೊಂದಿದ್ದಾರೆ. ಪತ್ನಿ 12.91 ಲಕ್ಷ ಮೌಲ್ಯದ ಚಿನ್ನಾಭರಣ, ಮಗಳು ದೀಕ್ಷಿತಾ 36.04 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ರಾಮುಲು 5.42 ಕೋಟಿ ರೂ. ಸಾಲ ಪಡೆದಿದ್ದಾರೆ. ನಗದು 5 ಲಕ್ಷ ರೂ. ಹೊಂದಿದ್ದು, ಪತ್ನಿ 2 ಲಕ್ಷ ರೂ. ಮಗಳು ದೀಕ್ಷಿತಾ 25 ಸಾವಿರ ರೂ. ಧನುಶ್ 50 ಸಾವಿರ ರೂ. ಅಂಕಿತಾ 20 ಸಾವಿರ ರೂ. 20 ಸಾವಿರ ನಗದು ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

ಪ್ರಿಯಾಂಕ್ ಖರ್ಗೆ ಆಸ್ತಿ ವಿವರ:ಪ್ರಿಯಾಂಕ್ ಖರ್ಗೆ ಹೆಸರಲ್ಲಿ ಒಟ್ಟು 10 ಕೋಟಿ 29 ಲಕ್ಷ ರೂ ಮೌಲ್ಯದ ಆಸ್ತಿ ಇದೆ. ತೌಟ್ ಕ್ಲೌಡ್ ಸ್ಟುಡಿಯೋ ಎಲ್‌ಎಲ್‌ಪಿಯಲ್ಲಿ ಒಂದು ಕೋಟಿ ಆರು ಲಕ್ಷ ರೂಪಾಯಿ ಮೌಲ್ಯದ ಮೂಲ ಬಂಡವಾಳ ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನ ಆರ್ ಟಿ ನಗರದಲ್ಲಿ ಒಂದು ಕೋಟಿ 67 ಲಕ್ಷ ಮೌಲ್ಯದ ಕಟ್ಟಡ, ಬೆಂಗಳೂರಿನ ಅರಮನೆ ರಸ್ತೆಯಲ್ಲಿ ಒಂದು ಕೋಟಿ ಎರಡು ಲಕ್ಷ ರೂಪಾಯಿ ಮೌಲ್ಯದ ವಾಣಿಜ್ಯ ಮಳಿಗೆ ಹಾಗೂ ಬೆಂಗಳೂರಿನ ಕೆ ಆರ್ ಪುರಂ ಹೋಬಳಿಯ ರಾಜನಹಳ್ಳಿಯಲ್ಲಿ ಎರಡು ಕೋಟಿ 44 ಲಕ್ಷ ಮೌಲ್ಯದ ಆಸ್ತಿಯನ್ನು ಇವರು ಹೊಂದಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡುಗುರ್ತಿಯಲ್ಲಿ ಒಂದು ಕೋಟಿ 34 ಲಕ್ಷ ರೂಪಾಯಿ ಮೌಲ್ಯದ 46 ಎಕರೆ ಜಮೀನಿದೆ. ಪ್ರಿಯಾಂಕ್ ಖರ್ಗೆ ಪತ್ನಿ ಶ್ರುತಿ ಖರ್ಗೆ ಅವರ ಹೆಸರಿನಲ್ಲಿ 72.38 ಲಕ್ಷ ಮೌಲ್ಯದ ಆಸ್ತಿ ಇದೆ. ಪತಿ, ಪತ್ನಿ ಇಬ್ಬರ ಹೆಸರಿನಲ್ಲಿ 96 ಲಕ್ಷ 96 ಸಾವಿರ ಮೌಲ್ಯದ ಆಸ್ತಿ ಇದೆ. ಮೊದಲ ಪುತ್ರ ಅಮಿತ್ ತಾವ್ ಹೆಸರಿನಲ್ಲಿ 25 ಲಕ್ಷ 39,000 ಮತ್ತು ಕಿರಿಯ ಪುತ್ರ ಆಕಾಂ ಹೆಸರಿನಲ್ಲಿ ನಾಲ್ಕು ಲಕ್ಷ 52,000 ಮೌಲ್ಯದ ಆಸ್ತಿಗಳಿವೆ.

ಪ್ರಿಯಾಂಕ್ ಖರ್ಗೆ ಹೆಸರಲ್ಲಿ ಬಾಂಡ್, ಇನ್ಸುರೆನ್ಸ್​, ಶೇರ್​ ಸೇರಿ ಹೂಡಿಕೆಯಾಗಿರುವುದು 71 ಲಕ್ಷ 68 ಸಾವಿರ ರೂ. ಹೋಂಡಾ KVR ವಾಹನ ಇದ್ದು, ಇದರ ಬೆಲೆ 29 ಲಕ್ಷ 52 ಸಾವಿರ ಎಂದು ತಿಳಿದುಬಂದಿದೆ. 650 ಗ್ರಾಂ ಚಿನ್ನವಿದ್ದು, ಇದರ ಬೆಲೆ 32 ಲಕ್ಷ 50 ಸಾವಿರ ರೂ. 2 ಕೆಜಿ ಬೆಳ್ಳಿ ಇದ್ದು, ಇದರ ಬೆಲೆ 1 ಲಕ್ಷ 33 ಸಾವಿರ ಎಂಬುದು ತಿಳಿದುಬಂದಿದೆ. ಪತ್ನಿ ಹೆಸರಲ್ಲಿ ಇವರು ಮಾಡಿರುವ ಹೂಡಿಕೆ 15 ಲಕ್ಷ ರೂ. ಆಗಿದೆ. ಪತ್ನಿ ಹೆಸರಲ್ಲಿ 900 ಗ್ರಾಂ ಬಂಗಾರ ಹೊಂದಿದ್ದು, ಇದರ ಬೆಲೆ 45 ಲಕ್ಷ ರೂ. ಇದೆ. 5 ಕೆಜಿ ಬೆಳ್ಳಿ ಇದ್ದು, ಇದರ ಬೆಲೆ 3 ಲಕ್ಷ 34 ಸಾವಿರ ರೂ ಎಂದು ತಿಳಿದುಬಂದಿದೆ.

ಇದನ್ನೂ ಓದಿ :ಸರ್ಕಾರವನ್ನು ಪ್ರಶ್ನೆ ಮಾಡಿದವರನ್ನು ರಾಜಕೀಯವಾಗಿ ಮುಗಿಸಲಾಗುತ್ತದೆ: ಪ್ರಿಯಾಂಕ್ ಖರ್ಗೆ

ABOUT THE AUTHOR

...view details