ಕರ್ನಾಟಕ

karnataka

ಬೀದಿನಾಯಿ ದಾಳಿಗೆ ಬಲಿಯಾದ ಮಂಗ: ಗ್ರಾಮಸ್ಥರಿಂದ ಶಾಸ್ತ್ರೋಕ್ತ ಅಂತ್ಯಕ್ರಿಯೆ

By

Published : Sep 24, 2021, 5:24 PM IST

monkeys-funeral-in-kalaburagi
ಮಂಗನ ಶವಕ್ಕೆ ಅಂತ್ಯಸಂಸ್ಕಾರ ()

ಕಳೆದ ಹಲವು ದಿನಗಳಿಂದ ಗ್ರಾಮಸ್ಥರೊಂದಿಗೆ ಸಲುಗೆ, ಪ್ರೀತಿಯಿಂದ ಇರುತ್ತಿದ್ದ ಮಂಗನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಮಂಗ ಅಸುನೀಗಿತ್ತು.

ಕಲಬುರಗಿ:ಬೀದಿನಾಯಿ ದಾಳಿಯಿಂದ ಮೃತಪಟ್ಟ ಮಂಗನ ಕಳೇಬರಕ್ಕೆ ಗ್ರಾಮಸ್ಥರು ಸೇರಿಕೊಂಡು ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದಿದೆ.

ಕಳೆದ ಹಲವು ದಿನಗಳಿಂದ ಗ್ರಾಮಸ್ಥರೊಂದಿಗೆ ಪ್ರೀತಿಯಿಂದ ಇರುತ್ತಿದ್ದ ಮಂಗನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿದ್ದವು. ಆಂಜನೇಯ ಸ್ವರೂಪಿ ಎಂದೇ ಹೇಳಲಾಗುವ ಕೋತಿಯ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದು, ರಾತ್ರಿಯಿಡೀ ಭಜನೆ ಮಾಡಿದ್ದಾರೆ.

ಕಳೇಬರಕ್ಕೆ ಮನುಷ್ಯರ ಶವಕ್ಕೆ ಮಾಡುವಂತೆ ಸ್ನಾನ ಮಾಡಿಸಿ, ಕುರ್ಚಿ ಮೇಲೆ ಕುಳ್ಳಿರಿಸಿ, ಪೇಟ ತೊಡಿಸಿ, ಹೂ ಮಾಲೆ ಹಾಕಿ ಸಂಪ್ರದಾಯದಂತೆ ಭಕ್ತಿಯಿಂದ ಪೂಜೆ ನೆರವೇರಿಸಿದರು.

ಈ ವೇಳೆ ಅನ್ನ ಸಂತರ್ಪಣೆಯೂ ನಡೆಯಿತು. ನಂತರ ಅಂತ್ಯಕ್ರಿಯೆ ಮಾಡುವ ಮೂಲಕ ಅರಳಗುಂಡಗಿ ಗ್ರಾಮಸ್ಥರು ಮಾನವೀಯತೆ ಮೆರೆದರು.

ಇದನ್ನೂ ಓದಿ:6 ವರ್ಷದ ಪೋರಿಗೆ ಡಾಕ್ಟರೇಟ್ ಗರಿ.. ಈಕೆಯ ಅದ್ಭುತ ನೆನಪಿನ ಶಕ್ತಿಗೆ ಪುನೀತ್ ರಾಜ್​ಕುಮಾರ್ ಫಿದಾ..

ABOUT THE AUTHOR

...view details