ಕರ್ನಾಟಕ

karnataka

ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು: ಶಾಸಕ ರಾಜಕುಮಾರ್ ಪಾಟೀಲ್

By

Published : Dec 19, 2020, 5:39 PM IST

ಗ್ರಾಪಂ ಚುನಾವಣೆ ನಂತರ ಸಂಸದರ ನೇತೃತ್ವದಲ್ಲಿ ಸಿಎಂ ಬಳಿಗೆ ನಿಯೋಗ ತೆರಳಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಲಾಗುವುದು ಎಂದು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಹೇಳಿದರು.

ರಾಜಕುಮಾರ್ ಪಾಟೀಲ್
ರಾಜಕುಮಾರ್ ಪಾಟೀಲ್

ಕಲಬುರಗಿ: ಸಚಿವ ಸಂಪುಟದಲ್ಲಿ ಈ ಭಾಗದವರಿಗೆ ಅವಕಾಶ ಕೊಡಬೇಕೆಂದು ಎನ್‌ಈ‌ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಒತ್ತಾಯಿಸಿದರು.

ಮಾಧ್ಯಮಗಳೊಂದಿಗೆ ಮಾತನಡಿದ ಶಾಸಕ ರಾಜಕುಮಾರ್ ಪಾಟೀಲ್

ಈ ಕುರುತು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಹಿತದೃಷ್ಟಿಯಿಂದ ಈ ಭಾಗಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಅವಶ್ಯಕತೆ ಇದೆ. ಗ್ರಾಪಂ ಚುನಾವಣೆ ನಂತರ ಸಂಸದರ ನೇತೃತ್ವದಲ್ಲಿ ತೆರಳಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಂತೆ ರಾಜ್ಯದ ಮುಖಂಡರಿಗೆ, ರಾಷ್ಟ್ರೀಯ ಮುಖಂಡರಿಗೆ ಹಾಗೂ ಸಿಎಂ ಅವರಿಗೆ ಮನವರಿಕೆ ಮಾಡಿ ಕೊಡುತ್ತೇವೆ ಎಂದು ಹೇಳಿದರು.

ABOUT THE AUTHOR

...view details