ಕರ್ನಾಟಕ

karnataka

ಪಂಚಾಯಿತಿ ಸದಸ್ಯ ಬದುಕಿ ಬರಲೆಂದು ಹರಕೆ ಹೊತ್ತ ಗ್ರಾಮಸ್ಥರು.. ವಿಧಿಯ ಮುಂದೆ ನಡೆಯಲಿಲ್ಲ ‘ಪರಮೇಶ್ವರ’ನ ಲೀಲೆ!

By

Published : Sep 3, 2022, 8:19 AM IST

Updated : Sep 3, 2022, 3:02 PM IST

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂಚಾಯ್ತಿ ಸದಸ್ಯ ಬದುಕಿ ಬರಲೆಂದು ಹರಿಕೆ ಹೊತ್ತ ಗ್ರಾಮಸ್ಥರು ಕೂಗು ಆ ದೇವರಿಗೆ ಕೇಳಲಿಲ್ಲ. ವಿಧಿಯಾಟದ ಮುಂದೆ ದೈವ ಲೀಲೆ ನಡೆಯಲಿಲ್ಲ. ಕೊನೆಗೂ ಆ ಗ್ರಾಮ ಪಂಚಾಯ್ತಿ ಸದಸ್ಯ ಮೃತಪಟ್ಟಿದ್ದಾರೆ.

Mannuru GP member died  GP member died in Road accident  Road accident at Kalaburagi  ಪಂಚಾಯ್ತಿ ಸದಸ್ಯ ಬದುಕಿ ಬರಲೇಂದು ಹರಿಕೆ  ಗಂಭೀರವಾಗಿ ಗಾಯಗೊಂಡಿದ್ದ ಪಂಚಾಯ್ತಿ ಸದಸ್ಯ  ರಸ್ತೆ ಅಪಘಾತದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಸಾವು  ಶೋಕಸಾಗರದಲ್ಲಿ ಮುಳುಗಿದ ಶೇಷಗೀರಿವಾಡಿ ಗ್ರಾಮ  ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದ ಪರಮೇಶ್ವರ ವಳಸಂಗ
ಶೋಕಸಾಗರದಲ್ಲಿ ಮುಳುಗಿದ ಶೇಷಗೀರಿವಾಡಿ ಗ್ರಾಮ

ಕಲಬುರಗಿ: ಆತ ಗ್ರಾಮ ಪಂಚಾಯಿತಿ ಸದಸ್ಯ ಆಗಿದ್ದರು. ಅವರು ಜನರ ಮನಸ್ಸನ್ನು ಎಷ್ಟು ಗೆದ್ದಿದರು ಅಂದ್ರೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಜೀವನ್ಮರಣದಲ್ಲಿ ಹೋರಾಟ ನಡೆಸಿದಾಗ ಇಡೀ ಗ್ರಾಮಕ್ಕೆ ಗ್ರಾಮವೇ ಇವರ ಜೀವದಾನಕ್ಕೆ ದೇವರಲ್ಲಿ ಹರಕೆ‌ ಹೊತ್ತಿದ್ದರು. ದೀರ್ಘ ದಂಡ ನಮಸ್ಕಾರ ಹಾಕಿದ್ದರು. ಮಹಿಳೆಯರಂತೂ ಕಳಸದೊಂದಿಗೆ‌ ದೇವರ ಗುಡಿಗಳಿಗೆ ತೆರಳಿ ದೇವರಿಗೆ ಮೋರೆ ಹೋಗಿದ್ದರು. ಆದರೆ, ವಿಧಿಯ ಕ್ರೂರಾಟದ ಮುಂದೆ ಗ್ರಾಮಸ್ಥರ ಪ್ರಾರ್ಥನೆ ದೇವರಿಗೆ ತಲುಪಲಿಲ್ಲ ಅನಿಸುತ್ತೆ.. ಗ್ರಾಮದ ಪ್ರೀತಿಯ ಅಚ್ಚುಮೆಚ್ಚಿ‌ನ ಮಗ ಇಹಲೋಕ‌ ತ್ಯಜಿಸಿದ್ದಾರೆ.

ಪಂಚಾಯ್ತಿ ಸದಸ್ಯ ಬದುಕಿ ಬರಲೆಂದು ಹರಕೆ ಹೊತ್ತ ಗ್ರಾಮಸ್ಥರು

ರಸ್ತೆ ಅಪಘಾತದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಾವು: ಇಡಿ ಗ್ರಾಮಕ್ಕೆ ಪ್ರೀತಿಯ ಮಗನಾಗಿ, ಇಡಿ ಗ್ರಾಮವೇ ಮಿಡಿಯುವಂತೆ ಮಾಡಿ, ಸಾವಿನ ಮೂಲಕ ಇಡಿ ಗ್ರಾಮದಲ್ಲಿಯೇ ಶೋಕಸಾಗರ ಮೂಡಿಸಿದವರು ಮಣ್ಣೂರು ಗ್ರಾಪಂ ಸದಸ್ಯ ಪರಮೇಶ್ವರ ವಳಸಂಗ (38). ಮೂಲತಃ ಶೇಷಗಿರಿವಾಡಿ ಗ್ರಾಮದ ಪರಮೇಶ್ವರ ಅವರು ಆಗಸ್ಟ್​​​ 26ರಂದು ಗ್ರಾಮದ ಹೊರವಲಯದಲ್ಲಿ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ರು.

ಬಲವಾದ ಪೆಟ್ಟಿನಿಂದ ಜೀವನ್ಮರಣದಲ್ಲಿ ಹೋರಾಟ ನಡೆಸಿದ ಪರಮೇಶ್ವರರನ್ನು ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಗ್ರಾಮ ಪಂಚಾಯ್ತಿ ಸದಸ್ಯ ಮೃತಪಟ್ಟಿದ್ದಾರೆ.

ಪಂಚಾಯ್ತಿ ಸದಸ್ಯ ಬದುಕಿ ಬರಲೆಂದು ಹರಕೆ ಹೊತ್ತ ಗ್ರಾಮಸ್ಥರು

ಶೋಕಸಾಗರದಲ್ಲಿ ಮುಳುಗಿದ ಶೇಷಗಿರಿವಾಡಿ ಗ್ರಾಮ: ಇವರ ಸಾವಿನಿಂದ ಗ್ರಾಮಕ್ಕೆ ಗ್ರಾಮವೇ ಅಕ್ಷರಶಃ ಶೋಕಸಾಗರದಲ್ಲಿ ಮುಳುಗಿದೆ. ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರು ಕಣ್ಣೀರು ಹಾಕಿದ್ದಾರೆ. ಮನೆಯ ಸದಸ್ಯ ತೀರಿಹೋದಾಗ ಆಗುವ ದುಃಖ ಪ್ರತಿಯೊಬ್ಬ ಗ್ರಾಮಸ್ಥರಲ್ಲಿ ಕಂಡುಬಂದಿದೆ. ಹಲವು ಮನೆಗಳಲ್ಲಿ ಅಡುಗೆ ಮನೆಯ ಒಲೆಯಲ್ಲಿ ಬೆಂಕಿ ಕೂಡಾ ಹೊತ್ತಿಸಿಲ್ಲ. ಮನೆಯ ಮಗನಂತಿದ್ದ ಪರಮೇಶ್ವರ ಅವರ ಅಂತ್ಯ ಸಂಸ್ಕಾರಕ್ಕೆ ಗ್ರಾಮದಲ್ಲಿ ಬರದವರೆ ಇಲ್ಲ..

ಶೋಕಸಾಗರದಲ್ಲಿ ಮುಳುಗಿದ ಶೇಷಗೀರಿವಾಡಿ ಗ್ರಾಮ

ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದ ಪರಮೇಶ್ವರ ವಳಸಂಗ: ಅಂದಹಾಗೆ ಪಂಚಾಯಿತಿ ಮೇಂಬರ್ ಪರಮೇಶ್ವರ ಇಷ್ಟೊಂದು ಪ್ರಸಿದ್ಧಿಯಾಗಲು ಕಾರಣ ಆಗಿದ್ದು ಅವರ ಜನಪರ ಕಾರ್ಯಗಳು.. ಸದಾ ಗ್ರಾಮದ ಅಭಿವೃದ್ಧಿ ಬಗ್ಗೆ ಕನಸು ಕಾಣುತ್ತಿದ್ದ‌ ಪರಮೇಶ್ವರ ಸರ್ಕಾರದಿಂದ ಸಿಗುವ ಪ್ರತಿ ಸೌಲಭ್ಯ ಗ್ರಾಮಸ್ಥರಿಗೆ ತಲುಪಿಸುವಲ್ಲಿ ಮಗ್ನವಾಗಿರುತ್ತಿದ್ದರು.

ಹೀಗಾಗಿಯೇ ಗ್ರಾಪಂ ಸದಸ್ಯರಾಗಲು ಹೆಣಗಾಡುವ ಇಂದಿನ ದಿನಮಾನಗಳಲ್ಲಿ ಪರಮೇಶ್ವರ ಸಲಿಸಾಗಿ ಗ್ರಾಪಂ ಸದಸ್ಯರಾಗುತ್ತಿದ್ದರು. ಒಂದಲ್ಲ‌, ಎರಡಲ್ಲ‌.. ಮೂರು ಬಾರಿ ಸತತ ಗೆಲ್ಲುವ ಮೂಲಕ‌ ಹ್ಯಾಟ್ರಿಕ್​ ಬಾರಿಸಿದ್ದರು. ಮಣ್ಣೂರ ಗ್ರಾಮ ಪಂಚಾಯಿತಿಗೆ ಶೇಷಗಿರಿವಾಡಿ ಗ್ರಾಮದಿಂದ ಸ್ಪರ್ಧಿಸುತ್ತಿದ್ದ ಇವರಿಗೆ ಪ್ರಚಾರದ ಅಗತ್ಯ ಸಹ ಇರುತ್ತಿರಲಿಲ್ಲ. ಗ್ರಾಮದ ಜನರೇ ಇವರನ್ನು ಗೆಲ್ಲಿಸಿ ಕಳಿಸುತ್ತಿದ್ದರು. ಎರಡು ಬಾರಿ ಅವಿರೋಧ, ಒಂದು ಬಾರಿ ಚುನಾವಣೆ ಮುಖಾಂತರ ಪರಮೇಶ್ವರ ಅವರನ್ನು ಜನ ಗೆಲ್ಲಿಸಿದ್ದರು.

ಪಂಚಾಯಿತಿ ಸದಸ್ಯ ಬದುಕಿ ಬರಲೆಂದು ಹರಕೆ ಹೊತ್ತಿದ್ದ ಗ್ರಾಮಸ್ಥರು: ಜನರೊಂದಿಗೆ ಉತ್ತಮ ಬಾಂಧವ್ಯ, ಒಡನಾಟ ಇಟ್ಟುಕೊಂಡಿದ್ದ ಪರಮೇಶ್ವರ ಬೈಕ್ ಅಪಘಾತದಲ್ಲಿ ಬಲವಾದ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು.

ಈ ಸುದ್ದಿ ಗೊತ್ತಾಗುತ್ತಿದ್ದಂತೆ ಶೇಷಗಿರಿವಾಡಿ ಗ್ರಾಮಸ್ಥರು ಶೇಷಗಿರಿಯಿಂದ-ಮಣ್ಣೂರ ಗ್ರಾಮದವರೆಗೆ ಅಂದ್ರೆ ಸುಮಾರು 5 ಕಿ.ಮೀ ವರೆಗೆ ದೀರ್ಘ ದಂಡ ನಮಸ್ಕಾರ ಹಾಕಿದ್ರು. 500 ಜನ ಮಹಿಳೆಯರು ಕುಂಭ ಕಳಸಗಳೊಂದಿಗೆ ಪಾದಯಾತ್ರೆ ಮಾಡಿ ಮಣ್ಣೂರ ಗ್ರಾಮದಲ್ಲಿರುವ ಯಲ್ಲಮ್ಮ ದೇವಿ ಸೇರಿದಂತೆ ಎಲ್ಲಾ ದೇವರುಗಳಿಗೆ ನೀರು ಹಾಕಿದ್ದರು. ಪರಮೇಶ್ವರ ವಳಸಂಗ ಬದುಕಿ ಬರಲಿ ಎಂದು ಹರಕೆ ಕಟ್ಟಿಕೊಂಡಿದ್ದರು. ಆದರೆ ಪರಮೇಶ್ವರ ಮರಳಿ ಬರಲೇ..

ವಿಧಿಯ ಮುಂದೆ ನಡೆಯಲಿಲ್ಲ ‘ಪರಮೇಶ್ವರ’ನ ಲೀಲೆ: ಅಗಲಿದ ಸುಮಾರು ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಪರಮೇಶ್ವರ ಆಗಸ್ಟ್​ 31ರಂದು ಸಾವನ್ನಪ್ಪಿದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿತು.

ಮೃತರಿಗೆ ತಂದೆ, ತಾಯಿ, ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಸಹೋದರರಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ವರ ಅಂತ್ಯಕ್ರಿಯೆ ವೇಳೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಸಾವಿರಾರೂ ಜನ ಸೇರಿದ್ದರು. ವಿಧಿವಿಧಾನಗಳ ಪ್ರಕಾರ ಪರಮೇಶ್ವರ ಅವರ ಅಂತ್ಯಕ್ರಿಯೆ ನಡೀತು. ಈಗ ಇಡೀ ಗ್ರಾಮವೇ ಮೌನಕ್ಕೆ ಶರಣಾಗಿದೆ..

ಓದಿ:ಮಲಗಿದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು.. ಅದೃಷ್ಟಾನೋ ಪವಾಡೋ ವಿಡಿಯೋ ವೈರಲ್

Last Updated :Sep 3, 2022, 3:02 PM IST

ABOUT THE AUTHOR

...view details