ಕರ್ನಾಟಕ

karnataka

ವ್ಯಾಪಾರಿ ಅಪಹರಿಸಿ ಕೆಜಿಗೂ ಅಧಿಕ ಚಿನ್ನ ಲೂಟಿ : ಕಲಬುರಗಿಯಲ್ಲಿ ಖತರ್ನಾಕ್ ಸುಲಿಗೆಕೋರರು ಅರೆಸ್ಟ್​

By

Published : Dec 9, 2021, 8:07 PM IST

Updated : Dec 9, 2021, 9:23 PM IST

ವ್ಯಾಪಾರಿಯನ್ನು ಅಪಹರಿಸಿ ಆತನ ಬಳಿಯಿದ್ದ ಕೆಜೆಗೂ ಅಧಿಕ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ ಖದೀಮರನ್ನು ಕಲಬುರಗಿಯ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Police arrested gold robbery case accused
ಕಲಬುರಗಿ ಚಿನ್ನ ಲೂಟಿ ಕೇಸ್​ ಆರೋಪಿಗಳು ಅರೆಸ್ಟ್

ಕಲಬುರಗಿ:ವ್ಯಾಪಾರಿಯನ್ನು ಅಪಹರಿಸಿ ಕೆಜಿಗೂ ಅಧಿಕ ಚಿನ್ನಾಭರಣ ಲೂಟಿ ಮಾಡಿದ್ದ 8 ಜನ ಖತರ್ನಾಕ್​​ ಸುಲಿಗೆಕೋರರನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಸಂಬಂಧ ಮಾಹಿತಿ ನೀಡಿದ ಪೊಲೀಸ್ ಆಯುಕ್ತರು

ಸಚಿನ್ ರಾಠೋಡ (19), ವಿಕ್ಕಿ @ ವಿಕ್ರಮ್ ನಾಯಕ್ (27), ಮಹೆಬೂಬ್ (25), ರವೀಂದ್ರ ಜಾದವ್(34), ರಾಮು ರಾಥೋಡ್(29), ದತ್ತು ರಾಠೋಡ್ (25), ಲೋಕೇಶ್ ಚೌವ್ಹಾಣ್​ (21) ಹಾಗೂ ತಿಮ್ಮಣ್ಣ ಪವಾರ (28) ಬಂಧಿತ ಆರೋಪಿಗಳು. ಬಂಧಿತರಿಂದ ಅಂದಾಜು 85 ಲಕ್ಷ ಮೌಲ್ಯದ‌ 1 ಕೆಜಿ 68 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ವಶಕ್ಕೆ ಪಡೆದಿರುವ ಚಿನ್ನಾಭರಣ

ನವೆಂಬರ್ 23 ರಂದು ಶಹಾಬಾದ್ ಪಟ್ಟಣದ ಚಿನ್ನದ ವ್ಯಾಪಾರಿಯೊಬ್ಬರು ಮುಂಬೈಯಿಂದ ಚಿನ್ನವನ್ನು ಖರೀದಿಸಿ ಬಸ್ಸಿನಲ್ಲಿ ಬರುವುದರ ಕುರಿತಂತೆ ಆರೋಪಿಗಳು ಮಾಹಿತಿ ಪಡೆದು ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯ ಶಹಾಬಾದ್-ಕಲಬುರಗಿ ರಸ್ತೆಯ ಧರ್ಮಾಪುರ ಬಸ್ ನಿಲ್ದಾಣ ಬಳಿ ಬಸ್ ನಿಲ್ಲಿಸಿ ವ್ಯಾಪಾರಿಯನ್ನು ಅಪಹರಿಸಿದ್ದರು. ನಂತರ ಬೈಕ್ ಮೇಲೆ ದೂರದ ಜಮೀನೊಂದಕ್ಕೆ ಕರೆದುದೊಯ್ದು ಬ್ಲೇಡ್ ತೋರಿಸಿ ಚಿನ್ನವನ್ನು ದೋಚಿ ಪರಾರಿಯಾಗಿದ್ದರು.

ವ್ಯಾಪಾರಿಗೆ ಪರಿಚಯಸ್ಥರಾದ ಯುವಕರೇ ದುಷ್ಕೃತ್ಯ ಎಸಗಿರಬಹುದು ಎಂಬ ಅನುಮಾನದ ಮೇಲೆ ಪ್ರಕರಣ ಬೆನ್ನಟ್ಟಿದ ಪೊಲೀಸರು, ಇಂದು ಬೆಳಗ್ಗೆ ಶಹಾಬಾದ್ ರಸ್ತೆಯ ಕೆಸರಟಗಿ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ವ್ಯಾಪಾರಿಯ ಚಲನವಲನದ ಮೇಲೆ ಕಣ್ಣಿಟ್ಟು ಈ ಕೃತ್ಯ ಎಸಗಿರುವುದು ತನಿಖೆಯಿಂದ ಬಯಲಾಗಿದೆ.

ಇದನ್ನೂ ಓದಿ: ಬೇಲಿಯೇ ಎದ್ದು ಹೊಲ ಮೇಯ್ದೆಡೆ.. ಮನೆ ಕಳ್ಳತನ ಗ್ಯಾಂಗ್​ಗೆ ಸೆಕ್ಯೂರಿಟಿ ಗಾರ್ಡ್ ಲೀಡರ್​...

Last Updated :Dec 9, 2021, 9:23 PM IST

ABOUT THE AUTHOR

...view details