ಕರ್ನಾಟಕ

karnataka

ಹಿಂದೂ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ?: ಇದು ಶುದ್ಧ ಸುಳ್ಳು ಎಂದ ಬಾಲಕಿ, ಆಕೆಯ ತಂದೆ

By

Published : Sep 13, 2021, 8:23 PM IST

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ ನೋಡಿ ನೇರವಾಗಿ ಪೊಲೀಸರು ನಮ್ಮ ಮನೆಗೆ ತಡರಾತ್ರಿ ಆಗಮಿಸಿ ಇಡೀ ರಾತ್ರಿ ವಿಚಾರಣೆ ನಡೆಸಿದ್ದಾರೆ. ಒಂದು ವೇಳೆ ನನ್ನ ಮೇಲೆ ಏನಾದರೂ ಅತ್ಯಾಚಾರ ನಡೆದಿದ್ದರೆ ನಾನು ಖುದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದೆ ಎಂದು ಅತ್ಯಾಚಾರ ಆರೋಪದ ಸಂಬಂಧ ಬಾಲಕಿ ಪ್ರತಿಕ್ರಿಯೆ ನೀಡಿದ್ದಾಳೆ.

Girl and her father reaction about allegations on Rape case
ಹಿಂದೂ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ?

ಕಲಬುರಗಿ: ಇಲ್ಲಿನ ತಾಲೂಕೊಂದರ ಗ್ರಾಮದಲ್ಲಿ ಹಿಂದೂ ಬಾಲಕಿಯನ್ನು‌ ನಾಲ್ಕು ಜನ ಅನ್ಯ ಧರ್ಮದ ಹುಡುಗರು ಹೊತ್ತೊಯ್ದು ಅತ್ಯಾಚಾರ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಈಗ ತಿರುವು ಸಿಕ್ಕಿದೆ. 'ತನ್ನ ಮೇಲೆ ಅತ್ಯಾಚಾರ ನಡೆದಿಲ್ಲ, ಸುಖಾಸುಮ್ಮನೆ ನಮ್ಮ ಮರ್ಯಾದೆ ಹರಾಜು ಮಾಡಲಾಗುತ್ತಿದೆ' ಎಂದು ಬಾಲಕಿ ಹೇಳಿದ್ದಾಳೆ.

'ಕಿಡಿಗೇಡಿಗಳು ಮಾನಸಿಕ ನೆಮ್ಮದಿ ಹಾಳು ಮಾಡಿದ್ದಾರೆ':

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ ನೋಡಿ ನೇರವಾಗಿ ಪೊಲೀಸರು ನಮ್ಮ ಮನೆಗೆ ತಡರಾತ್ರಿ ಆಗಮಿಸಿ ಇಡೀ ರಾತ್ರಿ ವಿಚಾರಣೆ ನಡೆಸಿದರು. ಒಂದು ವೇಳೆ ನನ್ನ ಮೇಲೆ ಅತ್ಯಾಚಾರ ನಡೆದಿದ್ದರೆ ನಾನೇ ಖುದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದೆ. ಕಿಡಿಗೇಡಿಗಳು ಸುಖಾಸುಮ್ಮನೆ ನನ್ನ ಮೇಲೆ ಅತ್ಯಾಚಾರ ನಡೆಯದಿದ್ದರೂ ನನ್ನ ಹಾಗೂ ನಮ್ಮ ಕುಟುಂಬದ ಮಾನ ಹರಾಜು ಮಾಡಿ ಮಾನಸಿಕ ನೆಮ್ಮದಿ ಹಾಳು ಮಾಡಿದ್ದಾರೆ ಎಂದು ಬಾಲಕಿ ಬೇಸರ ವ್ಯಕ್ತಪಡಿಸಿದಳು.

'ನನ್ನ ಮಗಳಿಗೆ ಏನೂ ಆಗಿಲ್ಲ':

ಬಾಲಕಿಯ ತಂದೆಯೂ ಮಾತನಾಡಿದ್ದು, ನನ್ನ ಮಗಳ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ನಡೆದಿಲ್ಲ. ಹಾಗೇನಾದ್ದರೂ ನಡೆದಿದ್ದರೆ ನಾನೇ ಪೊಲೀಸ್ ಠಾಣೆಗೆ ದೂರು ನೀಡಿ ರಕ್ಷಣೆ ಕೇಳುತ್ತಿದ್ದೆ. ಏನೂ ಆಗಿಯೇ ಇಲ್ಲ ಅಂದಮೇಲೆ ಯಾರ ಮೇಲೆ ದೂರು ದಾಖಲಿಸೋದು ಎಂದು ಪ್ರಶ್ನಿಸಿದರು.

'ದುಡ್ಡು ಕೊಟ್ಟು ಪ್ರಕರಣ ಮುಚ್ಚಿ ಹಾಕಿದ್ದಾರೆ': ಮುತಾಲಿಕ್

ಈ ಮಧ್ಯೆ ಅನ್ಯಧರ್ಮದ ಯುವಕರು ಸೇರಿ, ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಮಾಡಿದ್ದಾರೆ. ಬಳಿಕ ಪ್ರಕರಣ ಮುಚ್ಚಿ ಹಾಕಲು ಯುವಕನ ಸಂಬಂಧಿ ಹಾಗೂ ಸ್ಥಳೀಯ ರಾಜಕಾರಣಿ ಸೇರಿ ಬಾಲಕಿ ಕುಟುಂಬಕ್ಕೆ 6 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ನಂತರ ಬಾಲಕಿ ಹಾಗೂ ಆಕೆಯ ತಾಯಿಯನ್ನು ಮಹಾರಾಷ್ಟ್ರದ ಪುಣೆಗೆ ಕಳುಹಿಸಲಾಗಿದೆ. ತಕ್ಷಣ ಪೊಲೀಸರು ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಮೋದ್​ ಮುತಾಲಿಕ್​ ಆಗ್ರಹಿಸಿದ್ದಾರೆ.

ABOUT THE AUTHOR

...view details