ಕರ್ನಾಟಕ

karnataka

ಕಲಬುರಗಿ ಯುವಕನ ಕೊಲೆ ಹಿಂದೆ ಪ್ರೀತಿಯ ಕಥೆ: ತನಿಖೆಯಿಂದ ಬಯಲಾಯ್ತು ಕಾರಣ

By

Published : Oct 13, 2022, 10:39 PM IST

ಕಲಬುರಗಿಯ ಪೌರಕಾರ್ಮಿಕನ ಕೊಲೆ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

four-arrested-kalaburagi-youth-murder-case
ಕಲಬುರಗಿ ಯುವಕನ ಕೊಲೆ ಸುತ್ತ ಪ್ರೀತಿಯ ಕಥೆ: ತನಿಖೆಯಿಂದ ಸತ್ಯ ಬಯಲು

ಕಲಬುರಗಿ:ನಗರದ ಪೌರಕಾರ್ಮಿಕ ಪ್ರವೀಣಕುಮಾರ್ ಕೊಲೆ ಸುತ್ತ ಪ್ರೀತಿಯ ಕಥೆಯೊಂದು ಹೆಣೆದುಕೊಂಡಿದೆ. ಪ್ರೀತಿ ಮಾಡುವಂತೆ ಯುವತಿಯ ಹಿಂದೆ ಬಿದ್ದಿದ್ದಕ್ಕೆ ಆಕೆಯ ಸಹೋದರ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಪ್ರವೀಣ ಕೊಲೆ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಅ. 4ರಂದು ನಗರದ ಹೈಕೋರ್ಟ್ ಹಿಂಭಾಗದ ಶರಣಸಿರಸಗಿ ಬಳಿ‌ ಆಶ್ರಯ ಕಾಲೋನಿ ನಿವಾಸಿ ಪ್ರವೀಣಕುಮಾರ್ (23) ಶವ ಪತ್ತೆಯಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಅಶೋಕನಗರ ಠಾಣೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಸಾಗರ್, ಈತನ ಸ್ನೇಹಿತರಾದ ಆಕಾಶ್ ನಾಟಿಕರ್, ರಾಜಶೇಖರ್​ ಹಾಗೂ ಸಂತೋಷ ಬಂಧಿತರು. ಕೊಲೆಯಾದ ಪ್ರವೀಣಕುಮಾರ್​​ ಆರೋಪಿ ಸಾಗರ್ ಎಂಬಾತನ ಸಹೋದರಿಗೆ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದನಂತೆ. ಇದೇ ಕಾರಣಕ್ಕೆ ಸಾಗರ್​​​ ಹಾಗೂ ಸ್ನೇಹಿತರು ಪ್ರವೀಣನನ್ನು ಬೈಕ್ ಮೇಲೆ ಕರೆದೊಯ್ದು ಥಳಿಸಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಶರಣಸಿರಸಗಿ ಬಳಿ ತಂದು‌ ಬಿಸಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಅಶೋಕನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿ: ಭಾರತೀಯ ವಿದ್ಯಾರ್ಥಿಗೆ 11 ಬಾರಿ ಚಾಕು ಇರಿತ

ABOUT THE AUTHOR

...view details