ಕರ್ನಾಟಕ

karnataka

ಪ್ರತ್ಯೇಕ ಪ್ರಕರಣ; ಸಿಡಿಲು ಬಡಿದು ಓರ್ವ ರೈತ, 50 ಕುರಿಗಳು ಸಾವು!

By

Published : Sep 30, 2020, 8:19 PM IST

ಕಲಬುರಗಿಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಓರ್ವ ರೈತ ಹಾಗೂ ಐವತ್ತು ಕುರಿಗಳು ಸಾವನ್ನಪ್ಪಿವೆ.

Farmer died
ಸಿಡಿಲು ಬಡಿದು ರೈತ ಸಾವು

ಕಲಬುರಗಿ:ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಸಿಡಿಲು ಬಡಿದು ಇಂದು ಓರ್ವ ರೈತ ಹಾಗೂ ಐವತ್ತು ಕುರಿಗಳು ಸಾವನ್ನಪ್ಪಿವೆ.

ಚಿಂಚೋಳಿ ತಾಲೂಕಿನ ಚಂದನಕೇರ ಗ್ರಾಮದ ವ್ಯಾಪ್ತಿಯಲ್ಲಿ ಮಹಮ್ಮದ್ ‌ಪೀರಪಾಶಾ‌ (28) ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಹೊಲದಲ್ಲಿ ಉದ್ದು ಬೆಳೆ ರಾಶಿ ಮಾಡುವಾಗ ಘಟನೆ ನಡೆದಿದೆ. ಈ ಕುರಿತು ರಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದಡೆ ಚಿಂಚೋಳಿ ತಾಲೂಕಿನ ಕೊಲ್ಲೂರು ಗ್ರಾಮದ ಬಳಿ ಪ್ರಭು ಹೊಗ್ಗೆಳ್ಳಿ ಎಂಬವರಿಗೆ ಸೇರಿದ 50 ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಮೇಯಿಸಲು ಹೋದ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಒಂದೇ ಸ್ಥಳದಲ್ಲಿ 50 ಕುರಿಗಳು ಸಾವನ್ನಪ್ಪಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಕುರಿ ಕಳೆದುಕೊಂಡು ಕುರಿಗಾಯಿ ದಿಕ್ಕು ತೋಚದಂತಾಗಿದ್ದಾನೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details