ಕರ್ನಾಟಕ

karnataka

ಬೆಚ್ಚಿಬಿತ್ತು ಕಲಬುರಗಿ: ಕುಡಿದ ಅಮಲಿನಲ್ಲಿ ಸ್ನೇಹಿತನ ಕೊಲೆ

By

Published : Sep 20, 2019, 12:56 AM IST

ಕಲಬುರಗಿ ನಗರದ ಖರ್ಗೆ ಕಾಲೋನಿಯ ನಿವಾಸಿ ಪ್ರಶಾಂತ್​ ಎಂಬುವವರನ್ನು ಸ್ನೇಹಿತರೇ ಕುಡಿದ ಅಮಲಿನಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಕುಡಿದ ಅಮಲಿನಲ್ಲಿ ಸ್ನೇಹಿತನ ಕೊಲೆಗೈದ ಆರೋಪಿಗಳು

ಕಲಬುರಗಿ: ಕುಡಿದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಸ್ನೇಹಿತನ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು, ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಹೈಕೋರ್ಟ್​ ಹಿಂಭಾಗದ ಖರ್ಗೆ ಕಾಲೋನಿಯಲ್ಲಿ ನಡೆದಿದೆ.

ಖರ್ಗೆ ಕಾಲೋನಿ ನಿವಾಸಿ ಪ್ರಶಾಂತ್​ ಎಂಬಾತ ಕೊಲೆಗೀಡಾದ ವ್ಯಕ್ತಿಯಾಗಿದ್ದು, ಮಹೇಶ ದೊಭಿ ಹಾಗೂ ವಿನೋದ ಎಂಬುವವರನ್ನು ಈ ಸಂಬಂಧ ಬಂಧಿಸಲಾಗಿದೆ.

ಕುಡಿದ ಅಮಲಿನಲ್ಲಿ ಸ್ನೇಹಿತನ ಕೊಲೆಗೈದ ಆರೋಪಿಗಳು

ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ ಅಲಿಯಾಸ್ ಬಿಲ್ಡರ್ ಪ್ರಶಾಂತ್ ತನ್ನ ಸ್ನೇಹಿತರಾದ ಮಹೇಶ್ ಹಾಗೂ ವಿನೋದ ಅನ್ನು ಮನೆಯಲ್ಲಿಯೆ ಪಾರ್ಟಿ ಮಾಡಲು ಕರೆದಿದ್ದಾನೆ. ಕುಡಿದ ಅಮಲಿನಲ್ಲಿ ಜಗಳವಾಡಿದ ಸ್ನೇಹಿತರು ಪ್ರಶಾಂತ್ ಅನ್ನು ಕೊಲೆಗೈದಿದ್ದಾರೆ.

ಮೇಲ್ನೋಟಕ್ಕೆ ಹಣಕಾಸಿನ ವಿಚಾರಕ್ಕಾಗಿ ಕೊಲೆ ನಡೆದಿದೆ ಎನ್ನಲಾಗಿದ್ದು, ಪೊಲೀಸರ ತನಿಖೆಯಿಂದಲೇ ಇನ್ನಷ್ಟು ಸತ್ಯ ಹೊರಬೀಳಬೇಕಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಆತನಿಗೆ ಸ್ನೇಹಿತರು ಅಂದ್ರೆ ಪಂಚಪ್ರಾಣ, ಸ್ನೇಹಿತರಿಗಾಗಿ ಏನಬೇಕಾದರೂ ಮಾಡ್ತಿದ್ದಾ ಆದ್ರೆ ಅದೆ ಸ್ನೇಹಿತರು ಕ್ಷುಲ್ಲಕ ಕಾರಣಕ್ಕೆ ಆತನ ಉಸಿರನ್ನೆ ನಿಲ್ಲಿಸುವ ಮೂಲಕ ಸ್ನೇಹ ಎಂಬ ಪದಕ್ಕೆ ಕಳಂಕ ತಂದಿದ್ದಾರೆ. ಹೌದು., ಕಲಬುರಗಿ ನಗರದಲ್ಲಿ ಸ್ನೇಹಿತನನ್ನು ಸ್ನೇಹಿತರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕೇಲ ದಿನಗಳಿಂದ ಶಾಂತವಾಗಿದ್ದ ಸೂಫಿ ಸಂತರ ನಾಡು ಕಲಬುರಗಿಯಲ್ಲಿಗ ಮತ್ತೆ ಲಾಂಗು ಮಚ್ಚುಗಳು ಸದ್ದು ಮಾಡಲು ಆರಂಭಿಸಿವೆ. ಇದೀಗ ಸ್ನೇಹಿತನನ್ನು ಸ್ನೇಹಿತರು ಸೇರಿ ಬರ್ಬರ ಕೊಲೆ ಮಾಡುವ ಮೂಲಕ ಕಲಬುರಗಿ ನಗರದ ಜನತೆಯನ್ನು ತಲ್ಲಣಗೊಳಿಸಿದ್ದಾರೆ‌. ನಗರದ ಹೈಕೋರ್ಟ್ ಹಿಂಭಾಗದಲ್ಲಿರುವ ಖರ್ಗೆ ಕಾಲೋನಿ ಮನೆಯೊಂದರಲ್ಲಿ ಯುವಕನ ಬರ್ಬರ ಹತ್ಯೆ ನಡೆದಿದೆ. ಜಿಲ್ಲಾ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ ಅಲಿಯಾಸ್ ಬಿಲ್ಡರ್ ಪ್ರಶಾಂತ್ ನನ್ನು ಆತನ ಮನೆಯಲ್ಲಿಯೇ ಇಬ್ಬರು ಸ್ನೇಹಿತರು ಸೇರಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಸ್ನೇಹಿತರು ರಾತ್ರಿ ಕಂಟಪೂರ್ತಿ ಕುಡಿದು, ಕೊನೆಗೆ ಪ್ರಶಾಂತನ ಕಥೆ ಮುಗಿಸಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದನ್ನು ಗಮನಿಸಿದ್ರೆ ಕೊಲೆಗೆ ಈ ಮುಂಚೆಯೇ ಸ್ಕೇಚ್ ರೂಪಿಸಲಾಗಿತ್ತು ಎನ್ನುವಂತಿದೆ. ಸದ್ಯ ಪ್ರಕರಣದ ಆರೋಪಿಗಳಾದ ಮಹೇಶ ದೊಭಿ ಹಾಗೂ ವಿನೋಧ ಇಬ್ಬರನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬೈಟ್ 1: ಎಮ್ ಎನ್ ನಾಗರಾಜ್ (ಪೊಲೀಸ್ ಕಮಿಷನರ್ ಕಲಬುರಗಿ)

ದೈಹಿಕವಾಗಿ ಬಲಿಷ್ಠನಾಗಿದ್ದ ಪ್ರಶಾಂತ ಹಲ್ಲೆವೇಳೆ ಪ್ರತಿರೋಧವೊಡ್ಡಿದ್ದಾನೆ. ಕೈಯಲ್ಲಿ ತೆಲೆಗೂದಲು ಪತ್ತೆಯಾಗಿವೆ. ಎದುರಾಳಿಯ ತೆಲೆಯ ಕೂದಲು ಹಿಡಿದು ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಕುಡಿದ ಅಮಲಿನಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಆಗದೆ ಸ್ನೇಹಿತರ ಮಚ್ಚಿನೇಟಕ್ಕೆ ಸಾವಿಗೆ ಶರಣಾಗಿದ್ದಾನೆ. ಈ ಕೊಲೆ ಮೇಲ್ನೋಟಕ್ಕೆ ಹಣಕಾಸಿನ ವಿಚಾರಕ್ಕಾಗಿ ನಡೆದಂತೆ ಕಂಡುಬಂದಿದೆ. ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಗನ ಸಾವಿನ ವಿಷಯ ಕೇಳಿದ ಪೊಷಕರ ಸ್ಥೀತಿ ಬರಸಿಡಿಲು ಏಕಕಾಲಕ್ಕೆ ಅಪ್ಪಳಿಸಿದಂತಾಗಿದೆ.

ಬೈಟ್ 2 : ಈರಣ್ಣ ಪಾಟೀಲ್ (ಸ್ಥಳಿಯ ನಿವಾಸಿ)

ಬಿಲ್ಡರ್ ಪ್ರಶಾಂತನ ಕೊಲೆ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸ್ ರು ಇಬ್ಬರನ್ನು ಕಂಬಿಹಿಂದೆ ತಳ್ಳಿದ್ದಾರೆ‌. ಆದ್ರೆ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಮರುಕಳಿಸುತ್ತಿರುವದು ಜನರ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಪೊಲೀಸರು ಹೆಚ್ಚಿನ ಮುಂಜಾಗೃತೆ ವಹಿಸಿ ಕ್ರೈಂಗಳನ್ನು ಕಂಟ್ರೋಲ್ ಮಾಡುಬೇಕು ಅಂತ್ತಿದ್ದಾರೆ ಬಿಸಲೂರು ಕಲಬುರಗಿಯ ಜನತೆ....Body:ಆತನಿಗೆ ಸ್ನೇಹಿತರು ಅಂದ್ರೆ ಪಂಚಪ್ರಾಣ, ಸ್ನೇಹಿತರಿಗಾಗಿ ಏನಬೇಕಾದರೂ ಮಾಡ್ತಿದ್ದಾ ಆದ್ರೆ ಅದೆ ಸ್ನೇಹಿತರು ಕ್ಷುಲ್ಲಕ ಕಾರಣಕ್ಕೆ ಆತನ ಉಸಿರನ್ನೆ ನಿಲ್ಲಿಸುವ ಮೂಲಕ ಸ್ನೇಹ ಎಂಬ ಪದಕ್ಕೆ ಕಳಂಕ ತಂದಿದ್ದಾರೆ. ಹೌದು., ಕಲಬುರಗಿ ನಗರದಲ್ಲಿ ಸ್ನೇಹಿತನನ್ನು ಸ್ನೇಹಿತರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕೇಲ ದಿನಗಳಿಂದ ಶಾಂತವಾಗಿದ್ದ ಸೂಫಿ ಸಂತರ ನಾಡು ಕಲಬುರಗಿಯಲ್ಲಿಗ ಮತ್ತೆ ಲಾಂಗು ಮಚ್ಚುಗಳು ಸದ್ದು ಮಾಡಲು ಆರಂಭಿಸಿವೆ. ಇದೀಗ ಸ್ನೇಹಿತನನ್ನು ಸ್ನೇಹಿತರು ಸೇರಿ ಬರ್ಬರ ಕೊಲೆ ಮಾಡುವ ಮೂಲಕ ಕಲಬುರಗಿ ನಗರದ ಜನತೆಯನ್ನು ತಲ್ಲಣಗೊಳಿಸಿದ್ದಾರೆ‌. ನಗರದ ಹೈಕೋರ್ಟ್ ಹಿಂಭಾಗದಲ್ಲಿರುವ ಖರ್ಗೆ ಕಾಲೋನಿ ಮನೆಯೊಂದರಲ್ಲಿ ಯುವಕನ ಬರ್ಬರ ಹತ್ಯೆ ನಡೆದಿದೆ. ಜಿಲ್ಲಾ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ ಅಲಿಯಾಸ್ ಬಿಲ್ಡರ್ ಪ್ರಶಾಂತ್ ನನ್ನು ಆತನ ಮನೆಯಲ್ಲಿಯೇ ಇಬ್ಬರು ಸ್ನೇಹಿತರು ಸೇರಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಸ್ನೇಹಿತರು ರಾತ್ರಿ ಕಂಟಪೂರ್ತಿ ಕುಡಿದು, ಕೊನೆಗೆ ಪ್ರಶಾಂತನ ಕಥೆ ಮುಗಿಸಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದನ್ನು ಗಮನಿಸಿದ್ರೆ ಕೊಲೆಗೆ ಈ ಮುಂಚೆಯೇ ಸ್ಕೇಚ್ ರೂಪಿಸಲಾಗಿತ್ತು ಎನ್ನುವಂತಿದೆ. ಸದ್ಯ ಪ್ರಕರಣದ ಆರೋಪಿಗಳಾದ ಮಹೇಶ ದೊಭಿ ಹಾಗೂ ವಿನೋಧ ಇಬ್ಬರನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬೈಟ್ 1: ಎಮ್ ಎನ್ ನಾಗರಾಜ್ (ಪೊಲೀಸ್ ಕಮಿಷನರ್ ಕಲಬುರಗಿ)

ದೈಹಿಕವಾಗಿ ಬಲಿಷ್ಠನಾಗಿದ್ದ ಪ್ರಶಾಂತ ಹಲ್ಲೆವೇಳೆ ಪ್ರತಿರೋಧವೊಡ್ಡಿದ್ದಾನೆ. ಕೈಯಲ್ಲಿ ತೆಲೆಗೂದಲು ಪತ್ತೆಯಾಗಿವೆ. ಎದುರಾಳಿಯ ತೆಲೆಯ ಕೂದಲು ಹಿಡಿದು ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಕುಡಿದ ಅಮಲಿನಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಆಗದೆ ಸ್ನೇಹಿತರ ಮಚ್ಚಿನೇಟಕ್ಕೆ ಸಾವಿಗೆ ಶರಣಾಗಿದ್ದಾನೆ. ಈ ಕೊಲೆ ಮೇಲ್ನೋಟಕ್ಕೆ ಹಣಕಾಸಿನ ವಿಚಾರಕ್ಕಾಗಿ ನಡೆದಂತೆ ಕಂಡುಬಂದಿದೆ. ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಗನ ಸಾವಿನ ವಿಷಯ ಕೇಳಿದ ಪೊಷಕರ ಸ್ಥೀತಿ ಬರಸಿಡಿಲು ಏಕಕಾಲಕ್ಕೆ ಅಪ್ಪಳಿಸಿದಂತಾಗಿದೆ.

ಬೈಟ್ 2 : ಈರಣ್ಣ ಪಾಟೀಲ್ (ಸ್ಥಳಿಯ ನಿವಾಸಿ)

ಬಿಲ್ಡರ್ ಪ್ರಶಾಂತನ ಕೊಲೆ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸ್ ರು ಇಬ್ಬರನ್ನು ಕಂಬಿಹಿಂದೆ ತಳ್ಳಿದ್ದಾರೆ‌. ಆದ್ರೆ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಮರುಕಳಿಸುತ್ತಿರುವದು ಜನರ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಪೊಲೀಸರು ಹೆಚ್ಚಿನ ಮುಂಜಾಗೃತೆ ವಹಿಸಿ ಕ್ರೈಂಗಳನ್ನು ಕಂಟ್ರೋಲ್ ಮಾಡುಬೇಕು ಅಂತ್ತಿದ್ದಾರೆ ಬಿಸಲೂರು ಕಲಬುರಗಿಯ ಜನತೆ....Conclusion:

ABOUT THE AUTHOR

...view details