ಕರ್ನಾಟಕ

karnataka

ಅಣ್ಣನ ವಿಚಾರ ತಮ್ಮನಿಗೂ ಗೊತ್ತು.. ಹೆಚ್‌ಡಿಕೆ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

By

Published : Aug 5, 2023, 2:31 PM IST

ವರ್ಗಾವಣೆ ದಂಧೆಗೆ ಸಂಬಂಧಿಸಿದಿರಲಿ ಅಥವಾ ಇನ್ಯಾವುದಕ್ಕೋ ಸಂಬಂಧಪಟ್ಟಿರಲಿ ಅವರ ಬಳಿ ಏನು ದಾಖಲೆ ಇದೆ ಅದನ್ನ ಲೋಕಾಯುಕ್ತರಿಗೆ ಸಲ್ಲಿಸಿದರೆ ತನಿಖೆಯಾಗುತ್ತದೆ. ಯಾರಿಗೋ ಹೇಳಿದ ಹಾಗೆ, ಹೆದರಿಸಿದ ಹಾಗೆ ನನ್ನ ಬಳಿ ಹೇಳಿದರೆ, ಹೆದರಿಸಿದರೆ ಪ್ರಯೋಜವಿಲ್ಲ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.

DCM DK Shivakumar
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

ಹೆಚ್‌ಡಿಕೆ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

ಕಲಬುರಗಿ: ನಾನು ಕುಮಾರಸ್ವಾಮಿ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಅಣ್ಣನ ವಿಚಾರ ತಮ್ಮನಿಗೆ ಗೊತ್ತು. ಇವರು ಬಾಲ್ ಇಲ್ಲದೇ ಬ್ಯಾಟಿಂಗ್ ಆಡ್ತಾರೆ. ಹೀಗಾಗಿಯೇ ನಾನು ಸುಮ್ಮನೆ ಇದ್ದೇನೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ವಾಗ್ದಾಳಿ ನಡೆಸಿದರು.

ಕಲಬುರಗಿ ಏರ್‌ಪೋರ್ಟ್‌ನಲ್ಲಿ ಪೆನ್‌ಡ್ರೈವ್ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು 'ವರ್ಗಾವಣೆ ದಂಧೆಗೆ ಸಂಬಂಧಿಸಿದಿರಲಿ ಅಥವಾ ಇನ್ಯಾವುದಕ್ಕೋ ಸಂಬಂಧಪಟ್ಟಿರಲಿ ಅವರ ಬಳಿ ಏನು ದಾಖಲೆ ಇದೆ ಅದನ್ನ ಲೋಕಾಯುಕ್ತರಿಗೆ ಸಲ್ಲಿಸಿದರೆ ತನಿಖೆಯಾಗುತ್ತದೆ. ಯಾರಿಗೋ ಹೇಳಿದ ಹಾಗೆ, ಹೆದರಿಸಿದ ಹಾಗೆ ನನ್ನ ಬಳಿ ಹೇಳಿದರೆ, ಹೆದರಿಸಿದರೆ ಪ್ರಯೋಜವಿಲ್ಲ' ಎಂದು ತಿರುಗೇಟು ನೀಡಿದರು.

ದಾಖಲೆ ಇದ್ದರೆ ಬಹಿರಂಗ ಪಡಿಸಲಿ:ಯಾವ ಬಾಂಬ್ ಹಾಕಿದರೂ ನಾನು ಜಗ್ಗಲ್ಲ, ಬಗ್ಗಲ್ಲ. 1975 ರಿಂದ ಇಂತಹ ಬಾಂಬ್‌ಗಳನ್ನ ಸಾಕಷ್ಟು ನೋಡಿದ್ದೇನೆ. ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂಬ ಆರೋಪ ಮಾಡಿರುವ ಹೆಚ್​​ಡಿಕೆ ತಮ್ಮ ಬಳಿ ದಾಖಲೆ ಇದ್ದರೆ ಬಹಿರಂಗ ಪಡಿಸಲಿ, ಸುಮ್ಮನೇ ಫಸ್ಟ್ರೇಷನ್ ದಿಂದ ಇಲ್ಲದನ್ನು‌ ಮಾತನಾಡುತ್ತಾರೆ ಎಂದು ಕುಟುಕಿದರು.

ಅಣ್ಣ ಮಾತನಾಡುವುದನ್ನು ತಮ್ಮ ಕೇಳ್ತಾ ಇರ್ತಾರೆ:ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಮಾತನಾಡಲಿ, ಅವರದೇ ಆದ ಅನುಭವ ಅವರಿಗೆ ಇದೆ. ಅಣ್ಣ ಮಾತನಾಡುವುದನ್ನು ತಮ್ಮ ಕೇಳ್ತಾ ಇರುತ್ತಾನೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಟಾಂಗ್ ನೀಡಿದ್ದರು. ನಿನ್ನೆ(ಶುಕ್ರವಾರ) ಸದಾಶಿವನಗರ ತಮ್ಮ ನಿವಾಸದ ಬಳಿ ಹೆಚ್. ಡಿ. ಕುಮಾರಸ್ವಾಮಿ ಮಾಡಿರುವ ವರ್ಗಾವಣೆ ಆರೋಪ ಸಂಬಂಧ ಪ್ರತಿಕ್ರಿಯಿಸಿ, ತಿರುಗೇಟು ನೀಡಿದ್ದರು.

ಅವರಿಗೆ ಏನು ಕುಷಿ ಇದೆಯೋ ಅದನ್ನೆಲ್ಲ ಮಾತನಾಡಲಿ. ಅವರಿಗೆ ಅದರಿಂದ ಸಮಾಧಾನ ಆಗುವುದಾದರೆ ನಾವು ಯಾರೂ ಬೇಡ ಎಂದು ಹೇಳುವುದಿಲ್ಲ. ರೆಸ್ಟ್ ತಗೊಂಡು ಬಂದಿದ್ದಾರೆ. ಒಳ್ಳೆಯದಾಗಲಿ ಎಂದಿದ್ದರು. ಆರ್. ಆರ್. ನಗರ ಅಧಿಕಾರಿಗಳ ವರ್ಗಾವಣೆ ಬಗ್ಗೆ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಯಾವ ಶಿಫಾರಸನ್ನೂ ಕೊಟ್ಟಿಲ್ಲ. ಡಿ ಕೆ ಸುರೇಶ್ ಅವರಿಗೆ ಈ ಬಗ್ಗೆ ಅಸಮಾಧಾನ ಆಗಿದ್ದರೆ ಅವರನ್ನೇ ಕೇಳಿ. ನಾನು ಸರ್ಕಾರ, ಎಂದಷ್ಟೇ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ:ಅಣ್ಣ ಮಾತನಾಡುವುದನ್ನು ತಮ್ಮ ಕೇಳ್ತಾ ಇರ್ತಾರೆ: ಹೆಚ್​ಡಿಕೆಗೆ ಡಿಕೆಶಿ ಟಾಂಗ್

ಸರ್ಕಾರಕ್ಕೆ ಹೆಚ್​ಡಿಕೆ ಸವಾಲು​: ಕುಮಾರಸ್ವಾಮಿಗೆ ತಾಕತ್ತು ಇರೋದ್ರಿಂದ ದಾಖಲೆ ಬಿಡುಗಡೆ ಮಾಡುತ್ತೇನೆ. ನಾನು ದಾಖಲೆ ಕೊಟ್ಟರೆ ಆ ಮಂತ್ರಿಯನ್ನು ವಜಾ ಮಾಡ್ತೀರಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದರು. ನಿನ್ನೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಕೊಡೋ ದಾಖಲೆ ನೋಡಿ ಸಚಿವರಿಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಾ? ಅಂತ ಮೊದಲು ಅವರು ಹೇಳಲಿ. ಆ ಸಚಿವರನ್ನು ವಜಾ ಮಾಡುವ ತಾಕತ್ತು ನಿಮಗೆ ಇದ್ಯಾ?. ವಿಧಾನಸೌದದಲ್ಲಿ ದಾಖಲೆ ಇಡುತ್ತೇನೆ. ದಾಖಲೆ ಕೊಟ್ಟರೆ ನಿಮ್ಮ ಸರ್ಕಾರ ಇರುತ್ತಾ? ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ:ದಾಖಲೆ ಬಿಡುಗಡೆ ಮಾಡುತ್ತೇನೆ, ಆ ಮಂತ್ರಿಯನ್ನು ವಜಾ ಮಾಡುತ್ತೀರಾ?: ಸರ್ಕಾರಕ್ಕೆ ಹೆಚ್​ಡಿಕೆ ಸವಾಲ್​

ABOUT THE AUTHOR

...view details