ಕರ್ನಾಟಕ

karnataka

ಕಲಬುರಗಿಯಲ್ಲಿ ಬಿಜೆಪಿಗೆ ಮೇಯರ್ ಸ್ಥಾನ ಪಕ್ಕಾ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ

By

Published : Sep 17, 2021, 8:21 PM IST

cm-basavaraja-bommai
ಸಿಎಂ ಬಸವರಾಜ ಬೊಮ್ಮಾಯಿ ()

ಪೆಟ್ರೋಲ್, ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ಸೇರಿಸುವ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ರಾಜ್ಯದ ಆದಾಯದ ಮೇಲೆ ಇದರಿಂದ ಏನು ಪರಿಣಾಮ ಬೀರುತ್ತೆ ಅನ್ನೋದು ನೋಡಬೇಕಾಗುತ್ತದೆ. ಈ ಬಗ್ಗೆ ಎಲ್ಲಾ ರಾಜ್ಯಗಳು ಇನ್ನೂ ಚಿಂತನೆ ಮಾಡುತ್ತಿವೆ..

ಕಲಬುರಗಿ :ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್ ಆಗೋದು ಖಚಿತ. ಪ್ರಥಮ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಯಾರು ನಂಬರ್ ಮಾಡಿಕೊಳ್ಳುತ್ತಾರೋ ಅವರು ಅಧಿಕಾರಕ್ಕೆ ಬರುತ್ತಾರೆ. ನಮ್ಮ ಪಕ್ಷ ಈ ಪ್ರಯತ್ನದಲ್ಲಿದೆ.

ನಾವು ಜೆಡಿಎಸ್ ನಾಯಕರ ಜೊತೆ ಮಾತನಾಡಿದ್ದೇವೆ. ನಮ್ಮ ನಾಯಕರು ಇತರ ಜನಪ್ರತಿನಿಧಿಗಳ ಜೊತೆಗೂ ಮಾತನಾಡಿದ್ದಾರೆ. ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಬಿಜೆಪಿಯವರು ಮೇಯರ್ ಆಗ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಪೆಟ್ರೋಲ್, ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ಸೇರಿಸುವ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ರಾಜ್ಯದ ಆದಾಯದ ಮೇಲೆ ಇದರಿಂದ ಏನು ಪರಿಣಾಮ ಬೀರುತ್ತೆ ಅನ್ನೋದು ನೋಡಬೇಕಾಗುತ್ತದೆ. ಈ ಬಗ್ಗೆ ಎಲ್ಲಾ ರಾಜ್ಯಗಳು ಇನ್ನೂ ಚಿಂತನೆ ಮಾಡುತ್ತಿವೆ.

ಇನ್ನು, ಹಲವು ಸುತ್ತಿನ ಚರ್ಚೆ, ಚಿಂತನೆಗಳು ನಡೆಯುತ್ತವೆ. ಆಮೇಲೆ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ಸಾಧಕ-ಬಾಧಕಗಳನ್ನು ತಿಳಿದುಕೊಂಡೇ ನಮ್ಮ ಅಭಿಪ್ರಾಯ ಹೇಳುತ್ತೇವೆ ಎಂದರು.

ಓದಿ:ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣದ ಚರ್ಚೆಗೆ ಮುಂದಾದ ಸಿದ್ದರಾಮಯ್ಯ.. ಅದಕ್ಕೆ ಸ್ಪೀಕರ್‌ ಹೀಗೆಂದರು..

ABOUT THE AUTHOR

...view details