ಕರ್ನಾಟಕ

karnataka

ಮಂಗಳೂರು ಕುಕ್ಕರ್ ಜೊತೆಗೆ ಬೆಳಗಾವಿ ಕುಕ್ಕರ್ ಮೇಲೂ ಡಿಕೆಶಿಗೆ ಪ್ರೀತಿ : ಯತ್ನಾಳ್​​ ವ್ಯಂಗ್ಯ

By

Published : Dec 17, 2022, 5:31 PM IST

ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಅವರಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ ಇದ್ದಂತೆ ಕಾಣುತ್ತದೆ. ಡಿಕೆಶಿಗೆ ಮಂಗಳೂರ್ ಕುಕ್ಕರ್ ಜೊತೆಗೆ ಬೆಳಗಾವಿ ಕುಕ್ಕರ್ ಮೇಲೂ ಪ್ರೀತಿ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

bjp-mla-basanagowda-patil-yathnal-statement-against-dk-shivakumar
ಮಂಗಳೂರು ಕುಕ್ಕರ್ ಜೊತೆಗೆ ಬೆಳಗಾವಿ ಕುಕ್ಕರ್ ಮೇಲೂ ಡಿಕೆಶಿಗೆ ಪ್ರೀತಿ : ಯತ್ನಾಳ್​​ ವ್ಯಂಗ್ಯ

ಮಂಗಳೂರು ಕುಕ್ಕರ್ ಜೊತೆಗೆ ಬೆಳಗಾವಿ ಕುಕ್ಕರ್ ಮೇಲೂ ಡಿಕೆಶಿಗೆ ಪ್ರೀತಿ : ಯತ್ನಾಳ್​​ ವ್ಯಂಗ್ಯ

ಕಲಬುರಗಿ:ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ ಇದ್ದಂತೆ ಕಾಣುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮಂಗಳೂರು ಕುಕ್ಕರ್ ಬಾಂಬ್​ ವಿಚಾರವಾಗಿ ಡಿಕೆಶಿ ಹೇಳಿಕೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ಡಿಕೆಶಿಗೆ ಮಂಗಳೂರ್ ಕುಕ್ಕರ್ ಮೇಲೂ, ಬೆಳಗಾವಿ ಕುಕ್ಕರ್ ಮೇಲೂ ಪ್ರೀತಿ ಇದೆ. ಡಿಕೆಶಿ ಎಲ್ಲರೂ ನಮ್ಮ ಬ್ರದರ್ಸ್ ಅನ್ನುತ್ತಾರೆ. ಅಂದರೆ ಶಾರೀಕ್ ಕೂಡ ಇವರ ಬ್ರದರ್ ಇರಬಹುದು. ಕಾಂಗ್ರೆಸ್ ಪಕ್ಷಕ್ಕೆ ಒಂದು ಸಮುದಾಯ ಮಾತ್ರ ಮತ ಹಾಕುವ ಹಾಗೆ ಕಾಣುತ್ತದೆ. ಹೀಗಾಗಿ ಅವರ ಓಲೈಕೆಯಲ್ಲಿಯೇ ಇರುತ್ತಾರೆ‌ ಎಂದು ವಾಗ್ದಾಳಿ ನಡೆಸಿದರು.

ಇನ್ನು ಶಾರುಖ್​ ಖಾನ್ ಸಿನಿಮಾ ಹಾಡಿದ ವಿವಾದ ವಿಚಾರವಾಗಿ ಮಾತನಾಡಿದ ಯತ್ನಾಳ, ಶೀಘ್ರದಲ್ಲೇ ಶಾರುಖ್​ ಖಾನ್ ಮಣ್ಣು ಮುಕ್ಕುತ್ತಾನೆ. ಈಗಾಗಲೇ ಅಮೀರ್ ಖಾನ್ ಸಿನೆಮಾ ಇಲ್ಲದೆ ಸುಮ್ಮನೆ ಕುಳಿತಿದ್ದಾನೆ‌. ಶಾರುಕ್ ಖಾನ್​ಗೂ ಅದೇ ಪರಿಸ್ಥಿತಿಗೆ ಬರಲಿದ್ದಾನೆ. ಕೇಸರಿ ಅಂದರೆ ಕೇವಲ ಒಂದು ಪಕ್ಷದ ಗುರುತಲ್ಲ. ಕೇಸರಿಗೆ ಅದರದೇ ಆದ ವೈಶಿಷ್ಠ್ಯತೆಗಳಿವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಇದನ್ನೂ ಓದಿ :ವಸಂತ ಕಾಲ ಬಂದಾಗ ಕಾಗೆ, ಕೋಗಿಲೆ ಯಾವುದೆಂದು ಗೊತ್ತಾಗುತ್ತದೆ: ಯತ್ನಾಳ್‌ಗೆ ವಚನಾನಂದ ಶ್ರೀ ತಿರುಗೇಟು

TAGGED:

ABOUT THE AUTHOR

...view details