ಕರ್ನಾಟಕ

karnataka

ಡ್ರಗ್​ ಮಾಫಿಯಾ ಬೇರು ಸಮೇತ ಕಿತ್ತೆಸೆಯಲು ನಮ್ಮ ಸರ್ಕಾರ ಶ್ರಮಿಸುತ್ತಿದೆ: ಕಟೀಲ್​​

By

Published : Aug 28, 2020, 3:12 PM IST

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಡ್ರಗ್ ಮಾಫಿಯಾ ಇನ್ನೂ ರಾಜಾರೋಷವಾಗಿ ನಡೆಯುತ್ತಿದೆ. ಈ ಹಿಂದೆ ಈ ವಿಚಾರವಾಗಿ ಮಂಗಳೂರಲ್ಲಿ ನಾನೇ ಪ್ರತಿಭಟನೆ ಮಾಡಿದ್ದೇನೆ. ಆಗಿನ ಸರ್ಕಾರ ಡ್ರಗ್ ಮಾಫಿಯಾ ದಂಧೆಗೆ ಬ್ರೇಕ್ ಹಾಕಲು ಮನಸ್ಸು ಮಾಡಲಿಲ್ಲ. ಆದ್ರೆ ನಮ್ಮ ಬಿಜೆಪಿ ಸರ್ಕಾರ ಡ್ರಗ್ ಮಾಫಿಯಾ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

BJP is working hard to root out drug mafia: Kateel
ಬಿಜೆಪಿ ಡ್ರಗ್​ ಮಾಫಿಯಾ ಬೇರು ಸಮೇತ ಕಿತ್ತೆಸುವಲ್ಲಿ ಶ್ರಮಿಸುತ್ತಿದೆ: ಕಟೀಲ್​

ಕಲಬುರಗಿ:ಹಿಂದಿನ ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದ ಎಲ್ಲಡೆ ಡ್ರಗ್ ಮಾಫಿಯಾ ಜೀವಂತವಾಗಿದೆ. ಇದನ್ನು ಬೇರು ಸಮೇತ ಕಿತ್ತೆಸೆಯಲು ರಾಜ್ಯ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಹೇಳಿದ್ದಾರೆ.

ಡ್ರಗ್​ ಮಾಫಿಯಾ ಬೇರು ಸಮೇತ ಕಿತ್ತೆಸೆಯಲು ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ: ಕಟೀಲ್​

ನಗರದಲ್ಲಿಂದು ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಡ್ರಗ್ ಮಾಫಿಯಾ ಇನ್ನೂ ರಾಜಾರೋಷವಾಗಿ ನಡೆಯುತ್ತಿದೆ. ಈ ಹಿಂದೆ ಈ ವಿಚಾರವಾಗಿ ಮಂಗಳೂರಲ್ಲಿ ನಾನೇ ಪ್ರತಿಭಟನೆ ಮಾಡಿದ್ದೇನೆ. ಆಗಿನ ಸರ್ಕಾರ ಡ್ರಗ್ ಮಾಫಿಯಾ ದಂಧೆಗೆ ಬ್ರೇಕ್ ಹಾಕಲು ಮನಸ್ಸು ಮಾಡಲಿಲ್ಲ. ಆದ್ರೆ ನಮ್ಮ ಬಿಜೆಪಿ ಸರ್ಕಾರ ಡ್ರಗ್ ಮಾಫಿಯಾ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದರು.

ದಂಧೆಯಲ್ಲಿ ಭಾಗಿದವರ ವಿರುದ್ಧ ತನಿಖೆ ಶುರು ಮಾಡಲಾಗಿದೆ. ಮುಖ್ಯಮಂತ್ರಿಗಳು ಗೃಹ ಇಲಾಖೆಗೆ ಫುಲ್ ಫ್ರೀಡಮ್ ಕೊಟ್ಟಿದ್ದಾರೆ. ಡ್ರಗ್ ಮಾಫಿಯಾಯಲ್ಲಿ ಸಿನಿಮಾ ತಾರೆಯರೇ ಇರಲಿ ಬೇರೆ ಯಾರೇ ಇರಲಿ ಸರ್ಕಾರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

ABOUT THE AUTHOR

...view details